ಇಂದೇ ಅಪರೂಪದ ದಾಖಲೆ ಬರೆಯುತ್ತಾರಾ ಗೇಲ್..?

By Suvarna Web DeskFirst Published Apr 10, 2017, 1:23 PM IST
Highlights

ವೆಸ್ಟ್'ಇಂಡೀಸ್ ದೈತ್ಯ ಕ್ರಿಸ್ ಗೇಲ್ ಟಿ20 ಕ್ರಿಕೆಟ್'ನಲ್ಲಿ ಹೊಸತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಬೆಂಗಳೂರು(ಏ.10): ಕ್ರಿಕೆಟ್ ಜಗತ್ತು ಕಂಡ ಸ್ಫೋಟಕ ಆರಂಭಿಕ ಬ್ಯಾಟ್ಸಮನ್'ಗಳು ಯಾರು ಎಂದರೆ ಅಗ್ರಪಂಕ್ತಿಯಲ್ಲಿ ಕೇಳಿ ಬರುವ ಪ್ರಮುಖ ಹೆಸರುಗಳೆಂದರೆ ವಿರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ಡೇವಿಡ್ ವಾರ್ನರ್.

ಅದು ಯಾವುದೇ ದೇಶದ ಮೈದಾನವೇ ಇರಲಿ, ಎದುರಾಳಿ ಯಾವುದೇ ಬೌಲರ್ ಆದರೂ ಹಿಗ್ಗಾಮಗ್ಗಾ ಥಳಿಸುವ ಇವರ ಬ್ಯಾಟಿಂಗ್ ನೋಡುವುದೇ ಅಭಿಮಾನಗಳ ಕಣ್ಣಿಗೆ ಹಬ್ಬ. ಅದರಲ್ಲೂ ವೆಸ್ಟ್'ಇಂಡೀಸ್ ದೈತ್ಯ ಕ್ರಿಸ್ ಗೇಲ್ ಟಿ20 ಕ್ರಿಕೆಟ್'ನಲ್ಲಿ ಹೊಸತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಇಂದು ಕಿಂಗ್ಸ್ ಇಲೆವೆನ್ಸ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ 25 ರನ್ ಬಾರಿಸಿದರೆ ಟಿ20 ಕ್ರಿಕೆಟ್'ನಲ್ಲಿ 10 ಸಾವಿರ ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟ್ಸ್'ಮನ್ ಎನ್ನುವ ಖ್ಯಾತಿಗೆ ಭಾಜನರಾಗಲಿದ್ದಾರೆ.

ಆದರೆ ಇಂದು ಗೇಲ್ ಆರ್'ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುತ್ತಾರ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಏಕೆಂದರೆ ಕಳೆದೆರಡು ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿರುವ ಗೇಲ್ ಆಡುವ ಹನ್ನೊಂದರ ಕಾಣಿಸಿಕೊಳ್ಳುವ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಇನ್ನೊಂದೆಡೆ ಎಬಿಡಿ ಕೂಡಾ ಫಿಟ್ ಆಗಿರುವುದರಿಂದ ಒಂದುವೇಳೆ ಎಬಿಡಿ ತಂಡ ಕೂಡಿಕೊಂಡರೆ ಗೇಲ್ ಸ್ಥಾನಕ್ಕೆ ಕುತ್ತು ಬರಲಿದೆ ಎಂದು ಕ್ರಿಕೆಟ್ ಪರಿಣಿತರು ವಿಶ್ಲೇಷಿಸುತ್ತಿದ್ದಾರೆ.  

click me!