
ನವದೆಹಲಿ[ಮಾ.17]: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ತಮ್ಮನ್ನು ಬೆಳಸಿದ ಟೀಕಾಕಾರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.
ಪದ್ಮಶ್ರೀ ಸ್ವೀಕರಿಸಿದ ಬಳಿಕ ಟ್ವೀಟರ್‌ನಲ್ಲಿ ಸಂಭ್ರಮ ಹಂಚಿಕೊಂಡ ಗೌತಮ್ ಗಂಭೀರ್, ಇದೇ ಸಂದರ್ಭದಲ್ಲಿ ಟೀಕಾಕಾರರ ಕಾಲೆಳೆಯುವುದನ್ನು ಮರೆಯಲಿಲ್ಲ. ತಮ್ಮ ಟ್ವೀಟ್‌ನಲ್ಲಿ ಗಂಭೀರ್, ‘ ನನಗೆ ಈ ಮಟ್ಟಕ್ಕೆ ಬೆಳೆಯಲು ಸಹಕರಿಸಿದ ಹಿತೈಷಿಗಳಿಗೆ, ಟೀಕಾಕಾರರಿಗೆ ಧನ್ಯವಾದಗಳು. ನನ್ನ ಏಳಿಗೆಯಲ್ಲಿ ಯಾರು ಹೆಚ್ಚಿನ ಪಾತ್ರ ವಹಿಸಿದರು ಎನ್ನುವುದನ್ನು ಮತ್ತೊಂದು ದಿನ ಹೇಳುತ್ತೇನೆ’ ಎಂದು ಬರೆದಿದ್ದಾರೆ.
ಗಂಭೀರ್‌ರ ಟ್ವೀಟ್ ವೈರಲ್ ಆಗಿದ್ದು, ಅವರ ಹಾಗೂ ಕೆಲ ಪ್ರಮುಖ ಕ್ರಿಕೆಟಿಗರ ನಡುವೆ ಮನಸ್ತಾಪದ ಕುರಿತು ಸಾಮಾಜಿಕ ತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಗಂಭೀರ್ ಯಾರ ಹೆಸರನ್ನು ಬಹಿರಂಗಗೊಳಿಸಬಹುದು ಎನ್ನುವ ಕುತೂಹಲ ಸಹ ಸೃಷ್ಟಿಯಾಗಿದೆ.
ಎವರೆಸ್ಟ್ ಶಿಖರವನ್ನೇರಿದ ಭಾರತದ ಮೊದಲ ಮಹಿಳೆ ಬಚೇಂದ್ರಿ ಪಾಲ್‌ಗೆ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ದೇಶದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ನೀಡಿ ಗೌರವಿಸಿದರು. ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿತು. 1984ರಲ್ಲಿ ಬಚೇಂದ್ರಿ ಎವರೆಸ್ಟ್ ಏರಿದ ಸಾಧನೆಗೈದಿದ್ದರು. ಅವರಿಗೆ ಅದೇ ವರ್ಷ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಬಳಿಕ 1986ರಲ್ಲಿ ಭಾರತ ಸರ್ಕಾರದಿಂದ ಅರ್ಜುನ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.
ಇದೇ ವೇಳೆ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ, ಭಾರತ ಬಾಸ್ಕೆಟ್‌ಬಾಲ್ ತಂಡದ ಆಟಗಾರ್ತಿ ಪ್ರಶಾಂತಿ ಸಿಂಗ್ ಹಾಗೂ ಹಿರಿಯ ಆರ್ಚರಿ ಪಟು ಬೊಂಬಾಯ್ಲಾ ದೇವಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು. 2019ರಲ್ಲಿ ಒಟ್ಟು 8 ಕ್ರೀಡಾಪಟುಗಳಿಗೆ ಪದ್ಮಶ್ರೀ ಘೋಷಿಸಲಾಗಿತ್ತು. ಸೋಮವಾರ(ಮಾ.11) ನಡೆದಿದ್ದ ಪ್ರತ್ಯೇಕ ಕಾರ್ಯಕ್ರಮದಲ್ಲಿ ಕುಸ್ತಿಪಟು ಭಜರಂಗ್ ಪೂನಿಯಾ, ಟಿಟಿ ಆಟಗಾರ ಅಚಂತ ಶರತ್ ಕಮಲ್, ಕಬಡ್ಡಿ ತಾರೆ ಅಜಯ್ ಠಾಕೂರ್ ಹಾಗೂ ಚೆಸ್ ಆಟಗಾರ್ತಿ ಹರಿಕಾ ದ್ರೋಣವಳ್ಳಿ ಪದ್ಮ ಪ್ರಶಸ್ತಿ ಸ್ವೀಕರಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.