ಗಂಭೀರ್, ಲಿನ್ ಆರ್ಭಟಕ್ಕೆ ಕೊಚ್ಚಿ ಹೋದ ಗುಜರಾತ್: ಕೊಹ್ಲಿ ದಾಖಲೆ ಮುರಿದ ರೈನಾ

Published : Apr 07, 2017, 12:19 PM ISTUpdated : Apr 11, 2018, 12:35 PM IST
ಗಂಭೀರ್, ಲಿನ್ ಆರ್ಭಟಕ್ಕೆ ಕೊಚ್ಚಿ ಹೋದ ಗುಜರಾತ್: ಕೊಹ್ಲಿ ದಾಖಲೆ ಮುರಿದ ರೈನಾ

ಸಾರಾಂಶ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪೋಟಕ ಆಟಗಾರರಾದ ಕ್ರಿಸ್ ಲಿನ್ ಹಾಗೂ ಗೌತಮ್ ಗಂಭೀರ್ ಅವರ ಭರ್ಜರಿ ಸಿಕ್ಸ್'ರ್'ಗಳು ಹಾಗೂ ಆಕರ್ಶಕ ಬೌಂಡರಿಗಳ ಮುಂದೆ ಗುಜರಾತ್ ಲಯನ್ ತಂಡದ ಬೌಲರ್'ಗಳ ಆಟ ಏನು ನಡೆಯಲಿಲ್ಲ. 183 ರನ್'ಗಳನ್ನು ನೀಡಿದ್ದ ಗುರಿಯನ್ನು ಕೋಲ್ಕತ್ತಾ ತಂಡ ಕೇವಲ 14.5 ಓವರ್'ಗಳಲ್ಲಿ  ವಿಕೇಟ್ ನಷ್ಟವಿಲ್ಲದೆ ಗುರಿ ತಲುಪಿತು.

ರಾಜ್ಕೋಟ್(ಏ.7): ನಾಯಕ ಗಂಭೀರ್ ಹಾಗೂ ಆರಂಭಿಕ ಆಟಗಾರ ಕ್ರಿಸ್ ಲಿನ್ ಆರ್ಭಟಕ್ಕೆ ಸುರೇಶ್ ರೈನಾ ಪಡೆಯ ಗುಜರಾತ್ ಲಯನ್ಸ್ ಪಡೆ ಸೋತು ಸುಣ್ಣವಾದರು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪೋಟಕ ಆಟಗಾರರಾದ ಕ್ರಿಸ್ ಲಿನ್ ಹಾಗೂ ಗೌತಮ್ ಗಂಭೀರ್ ಅವರ ಭರ್ಜರಿ ಸಿಕ್ಸ್'ರ್'ಗಳು ಹಾಗೂ ಆಕರ್ಶಕ ಬೌಂಡರಿಗಳ ಮುಂದೆ ಗುಜರಾತ್ ಲಯನ್ ತಂಡದ ಬೌಲರ್'ಗಳ ಆಟ ಏನು ನಡೆಯಲಿಲ್ಲ. 183 ರನ್'ಗಳನ್ನು ನೀಡಿದ್ದ ಗುರಿಯನ್ನು ಕೋಲ್ಕತ್ತಾ ತಂಡ ಕೇವಲ 14.5 ಓವರ್'ಗಳಲ್ಲಿ  ವಿಕೇಟ್ ನಷ್ಟವಿಲ್ಲದೆ ಗುರಿ ತಲುಪಿತು.

ಕ್ರಿಸ್ ಲಿನ್ ಕೇವಲ 41 ಎಸತಗಳಲ್ಲಿ  8 ಸಿಕ್ಸ್'ರ್ ಹಾಗೂ 6 ಬೌಂಡರಿಗಳೊಂದಿಗೆ ಆಜೇಯ 93 ರನ್ ಬಾರಿಸಿದರೆ ನಾಯಕ ಗೌತಮ್ ಗಂಭೀರ್  48 ಎಸತಗಳಲ್ಲಿ 12 ಬೌಂಡರಿಗಳೊಂದಿಗೆ 76 ರನ್ ಚಚ್ಚಿ ಗೆಲುವನ್ನು ತಮ್ಮದಾಗಿಸಿಕೊಂಡರು.

ಗುಜರಾತ್ ಸಿಂಹಿಣಿಗಳ ಯಾವೊಬ್ಬ ಬೌಲರ್'ಗಳು ಕೂಡ ಕೋಲ್ಕತ್ತಾದ ಈ ಇಬ್ಬರು ಬ್ಯಾಟ್ಸ್'ಮೆನ್'ಗಳನ್ನು  ಪೆವಿಲಿಯನ್'ಗೆ ಕಳಿಸಲು ಸಾಧ್ಯವಾಗಲಿಲ್ಲ.ಡ್ವೆನ್ ಸ್ಮಿತ್ 1 ಓವರ್'ನಲ್ಲಿ 23 ರನ್ ನೀಡಿ ಅತೀ ದುಬಾರಿ ಬೌಲರ್ ಎನಿಸಿದರು. ಕನ್ನಡಿಗ ಶಿವಿಲ್ ಕೌಶಿಕ್ ಕೂಡ 4 ಓವರ್'ಗಳಲ್ಲಿ 40 ರನ್ ನೀಡಿ ಹೆಚ್ಚು ರನ್ ನೀಡಿದ ಪಟ್ಟಿಗೆ ಸೇರಿದರು.

ಮೊದಲು ಅಬ್ಬರಿಸಿದ ಗುಜರಾತಿಗಳು    

ಭಾರತ ತಂಡದಿಂದ ಹೊರಬೀಳುವುದರೊಂದಿಗೆ ಬಿಸಿಸಿಐನ ಕೇಂದ್ರ ಗುತ್ತಿಗೆಯನ್ನೂ ಕಳೆದುಕೊಂಡಿರುವ ಸುರೇಶ್ ರೈನಾ, ಐಪಿಎಲ್ 10ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದಾರೆ.

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶುಕ್ರವಾರ ನಡೆದ ಈ ಋತುವಿನ ಐಪಿಎಲ್ ಪಂದ್ಯಾವಳಿಯ 3ನೇ ಪಂದ್ಯದಲ್ಲಿ ಕೊಲ್ಕತಾ ನೈಟ್‌ರೈಡರ್ಸ್‌ ವಿರುದ್ಧ ಅಬ್ಬರಿಸಿದ ರೈನಾ (ಅಜೇಯ 68: 51 ಎಸೆತ, 7 ಬೌಂಡರಿ) ಜತೆಗೆ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ (47: 25 ಎಸೆತ, 6 ಬೌಂಡರಿ, 2 ಸಿಕ್ಸರ್) ಅವರ ಸಮಯೋಚಿತ ಪ್ರದರ್ಶನದಿಂದ ಗುಜರಾತ್ ಲಯನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 183 ರನ್ ಕಲೆಹಾಕಿತು.

ಗರಿಷ್ಠ ರನ್ ಪೇರಿಸಿದ ರೈನಾ

ಕೆಕೆಆರ್ ವಿರುದ್ಧ ಆಕರ್ಷಕ ಬ್ಯಾಟಿಂಗ್ ನಡೆಸಿದ ರೈನಾ, ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಕಲೆಹಾಕಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದರು. ಈ ಪಂದ್ಯಕ್ಕೂ ಮುನ್ನ ಕೊಹ್ಲಿ (4110 ರನ್) ದಾಖಲೆ ಮುರಿಯಲು ರೈನಾಗೆ ಬೇಕಿದ್ದುದು ಕೇವಲ 12 ರನ್‌ಗಳಷ್ಟೆ. ಇನ್ನಿಂಗ್ಸ್ ವೇಳೆ ಎರಡು ಜೀವದಾನ ಪಡೆದ ರೈನಾ ಅಜೇಯರಾಗಿ ಉಳಿದರು. ಇದರೊಂದಿಗೆ ರೈನಾ ಸದ್ಯ 148 ಪಂದ್ಯಗಳಿಂದ 4166 ರನ್ ಕಲೆಹಾಕಿದ್ದಾರೆ. ಮತ್ತೊಂದು ವಿಶೇಷ ಅಂದರೆ ಇದೇ ಮೊದಲ ಬಾರಿಗೆ ರೈನಾ ಆವೃತ್ತಿಯ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದಾರೆ. ಈ ಹಿಂದಿನ ಒಂಭತ್ತೂ ಆವೃತ್ತಿಗಳಲ್ಲಿ 50 ರನ್ ತಲುಪಲು ಅವರಿಗೆ ಸಾಧ್ಯವಾಗಿರಲಿಲ್ಲ.

ಕೋಲ್ಕತ್ತಾ ಪರ ಅದ್ಭುತ 93 ರನ್ ಬಾರಿಸಿದ ಕ್ರಿಸ್ ಲಿನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪುರಸ್ಕೃತರಾದರು.

ಸ್ಕೋರ್

ಗುಜರಾತ್  ಲಯನ್ಸ್ : 183/4 (20/20 )

ಕೋಲ್ಕತ್ತಾ ನೈಟ್ ರೈಡರ್ಸ್ : 184/0 (14.5/20)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ಕಿಲೋಮೀಟರ್ ಸೈಕಲ್‌ನಲ್ಲಿ ಸ್ಟೇಡಿಯಂಗೆ ಬರುತ್ತಿದ್ದ ಆಟಗಾರನಿಗೆ ಸಿಕ್ತು 14 ಕೋಟಿ ನಗದು! ಇದು ಐಪಿಎಲ್ ಜಾದೂ
ಮಿನಿ ಹರಾಜಿನ ಬೆನ್ನಲ್ಲೇ KKR ತಂಡಕ್ಕೆ ಬಿಗ್ ಶಾಕ್! ₹9.2 ಕೋಟಿ ನೀಡಿ ಖರೀದಿಸಿದ ಈ ಸ್ಟಾರ್ ಕ್ರಿಕೆಟಿಗ ಐಪಿಎಲ್ ಆಡೋದೇ ಡೌಟ್!