French Open 2023: ಆಲ್ಕರಜ್‌, ಇಗಾ ಸ್ವಿಯಾಟೆಕ್‌ ಸೆಮೀಸ್‌ಗೆ ಲಗ್ಗೆ

By Naveen KodaseFirst Published Jun 8, 2023, 8:39 AM IST
Highlights

ಫ್ರೆಂಚ್ ಓಪನ್‌ ಟೂರ್ನಿಯಲ್ಲಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದ ಕಾರ್ಲೋಸ್‌ ಆಲ್ಕ​ರ​ಜ್‌
ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂನಲ್ಲಿ ಚೊಚ್ಚಲ ಬಾರಿ ಸೆಮಿ​ಫೈ​ನ​ಲ್‌ ಪ್ರವೇಶಿಸಿದ ಆಲ್ಕ​ರ​ಜ್‌
ಹಾಲಿ ಚಾಂಪಿ​ಯನ್‌ ಇಗಾ ಸ್ವಿಯಾ​ಟೆಕ್‌ ಕೂಡಾ ಸೆಮೀ​ಸ್‌ಗೆ ಲಗ್ಗೆ

ಪ್ಯಾರಿ​ಸ್‌(ಜೂ.08): ವಿಶ್ವ ನಂ.1 ಟೆನಿ​ಸಿ​ಗ, ಈ ಬಾರಿಯ ಪ್ರಮುಖ ಆಕ​ರ್ಷಣೆ ಎನಿ​ಸಿರುವ ಯುವ ತಾರೆ ಕಾರ್ಲೋಸ್‌ ಆಲ್ಕ​ರ​ಜ್‌ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂನಲ್ಲಿ ಚೊಚ್ಚಲ ಬಾರಿ ಸೆಮಿ​ಫೈ​ನ​ಲ್‌ಗೆ ಲಗ್ಗೆ ಇಟ್ಟಿ​ದ್ದಾರೆ. ಹಾಲಿ ಚಾಂಪಿ​ಯನ್‌ ಇಗಾ ಸ್ವಿಯಾ​ಟೆಕ್‌ ಕೂಡಾ ಸೆಮೀ​ಸ್‌​ಗೇ​ರಿದ್ದು, ಮತ್ತೊಂದು ಗ್ರ್ಯಾನ್‌​ಸ್ಲಾಂ ಗೆಲುವಿಗೆ ಮತ್ತ​ಷ್ಟು ಹತ್ತಿ​ರ​ವಾ​ಗಿ​ದ್ದಾ​ರೆ.

20 ವರ್ಷದ ಹಾಲಿ ಯುಎಸ್‌ ಓಪನ್‌ ಚಾಂಪಿ​ಯನ್‌ ಆಲ್ಕ​ರಜ್‌ ಮಂಗ​ಳ​ವಾರ ರಾತ್ರಿ ಪುರು​ಷರ ಸಿಂಗಲ್ಸ್‌ ಕ್ವಾರ್ಟರ್‌ಫೈನ​ಲ್‌​ನಲ್ಲಿ 5ನೇ ಶ್ರೇಯಾಂಕಿತ ಗ್ರೀಕ್‌ನ ಸ್ಟೆಫಾ​ನೊಸ್‌ ಸಿಟ್ಸಿ​ಪಾಸ್‌ ವಿರು​ದ್ಧ 6-2, 6-1, 7-6(7-5) ಸೆಟ್‌​ಗ​ಳಲ್ಲಿ ಜಯ​ಭೇರಿ ಬಾರಿ​ಸಿ​ದರು. ಸಿಟ್ಸಿ​ಪಾಸ್‌ 2021ರ ಬಳಿಕ ಮತ್ತೆ ಫೈನ​ಲ್‌​ಗೇರಿ ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ನಿರೀ​ಕ್ಷೆ​ಯ​ಲ್ಲಿ​ದ್ದರೂ ಆಲ್ಕ​ರ​ಜ್‌ರ ಬಲಿಷ್ಠ ಹೊಡೆ​ತ​ಗಳ ಮುಂದೆ ಮಂಡಿ​ಯೂ​ರಿ​ದರು. 2ನೇ ಗ್ರ್ಯಾನ್‌ಸ್ಲಾಂ ಗೆಲ್ಲುವತ್ತ ದಿಟ್ಟಹೆಜ್ಜೆ ಇಟ್ಟಿ​ರುವ ಆಲ್ಕ​ರಜ್‌ಗೆ ಶುಕ್ರ​ವಾರ ಸೆಮಿ​ಫೈ​ನ​ಲ್‌​ನಲ್ಲಿ 22 ಗ್ರ್ಯಾನ್‌​ಸ್ಲಾಂಗಳ ಒಡೆಯ, ಸರ್ಬಿ​ಯಾದ ನೋವಾಕ್‌ ಜೋಕೋ​ವಿಚ್‌ ಸವಾಲು ಎದು​ರಾ​ಗ​ಲಿದ್ದು, ಈ ಮುಖಾಮುಖಿ ಅಭಿಮಾನಿಗಳಲ್ಲಿ ಭಾರೀ ಕುತೂ​ಹಲ ಮೂಡಿ​ಸಿ​ದೆ.

Latest Videos

ಇಗಾ ಜಯದ ಓಟ: 2020, 2022ರ ಚಾಂಪಿ​ಯನ್‌, ವಿಶ್ವ ನಂ.1 ಸ್ವಿಯಾ​ಟೆಕ್‌ ಮಹಿಳಾ ಸಿಂಗಲ್ಸ್‌ ಕ್ವಾರ್ಟ​ರ್‌​ನ​ಲ್ಲಿ 6ನೇ ಶ್ರೇಯಾಂಕಿತೆ, ಅಮೆ​ರಿ​ಕದ ಕೊಕೊ ಗಾಫ್‌ ವಿರುದ್ಧ 6-4, 6-2ರಲ್ಲಿ ಸುಲಭ ಗೆಲುವು ಸಾಧಿ​ಸಿ​ದರು. ಕಳೆದ ಆವೃತ್ತಿ ಫೈನ​ಲ್‌​ನಲ್ಲಿ ಗಾಫ್‌, ಸ್ವಿಯಾ​ಟೆಕ್‌ ವಿರು​ದ್ಧವೇ ಸೋತಿದ್ದರು.

French Open 2023: ಸೆಮೀಸ್‌ಗೆ ವಿಶ್ವ ನಂ.2 ಸಬಲೆಂಕಾ!

ಜಬು​ರ್‌ಗೆ ಶಾಕ್‌: 7ನೇ ಶ್ರೇಯಾಂಕಿತೆ, ಟ್ಯುನೀ​ಶಿ​ಯಾದ ಒನ್ಸ್‌ ಜಬುರ್‌ ಕ್ವಾರ್ಟ​ರ್‌​ ಫೈನಲ್‌ನಲ್ಲಿ ಸೋತು ಆಘಾತ ಅನು​ಭ​ವಿ​ಸಿ​ದ​ರು. ಬುಧ​ವಾರ ಮಹಿಳಾ ಸಿಂಗ​ಲ್ಸ್‌​ನಲ್ಲಿ ಕಳೆದ ವರ್ಷದ ವಿಂಬ​ಲ್ಡನ್‌, ಆಸ್ಪ್ರೇ​ಲಿ​ಯನ್‌ ಓಪನ್‌ ರನ್ನ​ರ್‌-ಅಪ್‌ ಜಬುರ್‌, ಬ್ರೆಜಿಲ್‌ನ ಬೀಟ್ರಿಜ್‌ ಹಡ್ಡಾದ್‌ ವಿರುದ್ಧ 6-3, 6-7(5-7), 1-6ರಲ್ಲಿ ಸೋಲ​ನು​ಭ​ವಿ​ಸಿ​ದರು. ಹಡ್ಡಾದ್‌ 1968ರ ಬಳಿಕ ಗ್ರ್ಯಾನ್‌ಸ್ಲಾಂ ಟೂರ್ನಿ​ಯಲ್ಲಿ ಸೆಮೀ​ಸ್‌​ಗೇ​ರಿದ ಮೊದಲ ಬ್ರೆಜಿಲ್‌ ಆಟ​ಗಾರ್ತಿ ಎನಿ​ಸಿ​ಕೊಂಡರು. ಗುರು​ವಾರ ಸೆಮೀ​ಸ್‌​ನಲ್ಲಿ ಇಗಾ-ಹಡ್ಡಾದ್‌ ಸೆಣಸಲಿದ್ದಾರೆ.

ಸಿಂಗಾ​ಪುರ ಓಪ​ನ್‌​ನಲ್ಲಿ ಸಾತ್ವಿ​ಕ್‌-ಚಿರಾಗ್‌ಗೆ ಸೋಲು

ಸಿಂಗಾಪುರ: ಪದಕ ಭರ​ವಸೆ ಮೂಡಿ​ಸಿದ್ದ ಭಾರ​ತದ ತಾರಾ ಪುರು​ಷರ ಡಬಲ್ಸ್‌ ಜೋಡಿ ಸಾತ್ವಿ​ಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿಸಿಂಗಾ​ಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ​ಯಲ್ಲಿ ಮೊದ​ಲ ಸುತ್ತಲ್ಲೇ ಸೋತು ನಿರಾಸೆ ಅನು​ಭ​ವಿ​ಸಿ​ದೆ. ವಿಶ್ವ ನಂ.4, ಭಾರ​ತದ ಜೋಡಿ ಬುಧ​ವಾರ ಜಪಾ​ನ್‌ನ ಅಕಿ​ರಾ ಕೊಗಾ-ತೈಚಿ ಸಾಯಿಟೊ ಜೋಡಿ ವಿರುದ್ಧ 21-18, 14-21, 21-18 ಗೇಮ್‌​ಗಲ್ಲಿ ಸೋಲ​ನು​ಭ​ವಿ​ಸಿ​ತು. 

ಮಹಿಳಾ ಡಬ​ಲ್ಸ್‌​ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿ​ಚಂದ್‌, ಹಾಂಕಾಂಗ್‌ನ ಯೆಂಗ್‌ ಟಿಂಗ್‌-ಪುಯಿ ಲಾಮ್‌ ವಿರುದ್ಧ 14-21, 21-18, 19-21ರಲ್ಲಿ ಸೋಲ​ನು​ಭ​ವಿ​ಸಿ​ದರು. ಗುರು​ವಾರ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌, ಪ್ರಿಯಾನ್ಶು ರಾಜಾ​ವತ್‌ ಪುರು​ಷರ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯ​ಗ​ಳಲ್ಲಿ ಆಡ​ಲಿ​ದ್ದಾ​ರೆ.

ಭಾರತ ನೆಟ್‌​ಬಾಲ್‌ ತಂಡ​ಕ್ಕೆ ರಾಜ್ಯದ ಗಗನಾ, ಸು​ರ​ಭಿ

ಬೆಂಗ​ಳೂ​ರು: ಜೂ.10ರಿಂದ 17ರ ವರೆಗೆ ಕೊರಿ​ಯಾ​ದಲ್ಲಿ ನಡೆ​ಯ​ಲಿ​ರುವ ಏಷ್ಯನ್‌ ಯೂತ್‌ ನೆಟ್‌​ಬಾಲ್‌ ಚಾಂಪಿ​ಯ​ನ್‌​ಶಿ​ಪ್‌ಗೆ ಭಾರತ ಮಹಿಳಾ ತಂಡ ಆಯ್ಕೆಯಾಗಿದ್ದು, ಕರ್ನಾ​ಟ​ಕದ ಕೆ.ಎ​ಸ್‌.​ಗಗನಾ ಹಾಗೂ ಬಿ.ಆ​ರ್‌.ಸು​ರಭಿ ಸ್ಥಾನ ಪಡೆದಿದ್ದಾರೆ. ಗಗನಾರನ್ನು ಉಪನಾಯಕಿಯನ್ನಾಗಿ ನೇಮಿಸಲಾಗಿದೆ. ಕರ್ನಾ​ಟ​ಕದ ಮಾಜಿ ಆಟ​ಗಾರ ಸಿ.ಗಿ​ರೀಶ್‌ ತಂಡದ ಮುಖ್ಯ ಕೋಚ್‌ ಆಗಿ ನೇಮ​ಕ​ಗೊಂಡಿ​ದ್ದಾರೆ.
 

click me!