ಮಾರ್ಷಲ್ ಆರ್ಟ್ಸ್ ಲೀಗ್: ಟೈಸನ್ ರಾಯಭಾರಿ

By Web DeskFirst Published 12, Sep 2018, 8:57 AM IST
Highlights

ಮಾಜಿ ಹೆವಿವೇಟ್ ಚಾಂಪಿಯನ್ ಟೈಸನ್, ಭಾರತ ಮತ್ತು ಯುಎಇ ನಡುವೆ ನಡೆಯಲಿರುವ ಪಂದ್ಯ ವೀಕ್ಷಿಸಲಿದ್ದಾರೆ. ‘ಟೈಸನ್ ದೇಶಾದ್ಯಂತ ಸಂಚರಿಸಿ ಫೈಟರ್‌ಗಳನ್ನು ಭೇಟಿಯಾಗಿ, ಪ್ರೋತ್ಸಾಹಿಸಲಿದ್ದಾರೆ. ಜತೆಗೆ ಕುಮಿಟೆ-1 ಲೀಗ್ ಉದ್ಘಾಟನೆ ಮತ್ತು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ.

ನವದೆಹಲಿ[ಸೆ.12]: ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಮೈಕ್ ಟೈಸನ್, ಸೆಪ್ಟೆಂಬರ್ 29ರಂದು ಮುಂಬೈನಲ್ಲಿ ನಡೆಯಲಿರುವ ಮಿಶ್ರ ಮಾರ್ಷಲ್ ಆರ್ಟ್ಸ್(ಎಂಎಂಎ)ನ ಕುಮಿಟೆ-1 ಲೀಗ್‌ನ ಪ್ರಚಾರಕ್ಕಾಗಿ ಭಾರತಕ್ಕೆ ಆಗಮಿಸಲಿದ್ದಾರೆ. 

ಮಾಜಿ ಹೆವಿವೇಟ್ ಚಾಂಪಿಯನ್ ಟೈಸನ್, ಭಾರತ ಮತ್ತು ಯುಎಇ ನಡುವೆ ನಡೆಯಲಿರುವ ಪಂದ್ಯ ವೀಕ್ಷಿಸಲಿದ್ದಾರೆ. ‘ಟೈಸನ್ ದೇಶಾದ್ಯಂತ ಸಂಚರಿಸಿ ಫೈಟರ್‌ಗಳನ್ನು ಭೇಟಿಯಾಗಿ, ಪ್ರೋತ್ಸಾಹಿಸಲಿದ್ದಾರೆ. ಜತೆಗೆ ಕುಮಿಟೆ-1 ಲೀಗ್ ಉದ್ಘಾಟನೆ ಮತ್ತು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ.

ಲೀಗ್‌ನಲ್ಲಿ ವಿಶ್ವದ 24 ಎಂಎಂಎ ಫೈಟರ್‌ಗಳು ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಆಯೋಜಕರು ತಿಳಿಸಿದ್ದಾರೆ.

Last Updated 19, Sep 2018, 9:23 AM IST