ಅಮೆರಿಕ ತಂಡಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ನಾಯಕ!

By Web DeskFirst Published Nov 5, 2018, 9:52 AM IST
Highlights

ಕ್ರಿಕೆಟ್‌ನಲ್ಲಿ ಪ್ರಮುಖ ಸ್ಥಾನಕ್ಕಾಗಿ ಅಮೇರಿಕ ಕ್ರಿಕೆಟ್ ಪಯಣ ಇಂದು ನಿನ್ನೆಯದ್ದಲ್ಲ. ಇದೀಗ ಅಮೇರಿಕ ಕ್ರಿಕೆಟ್ ತಂಡವನ್ನ ಬಲಿಷ್ಠಗೊಳಿಸಲು ಹೊಸ ಪ್ಲಾನ್ ಮಾಡಿದೆ. ಟೀಂ ಇಂಡಿಯಾ ಅಂಡರ್ 19 ತಂಡದ ಮಾಜಿ ಕ್ರಿಕೆಟಿಗನನ್ನ ಅಮೇರಿಕ ತಂಡದ ನಾಯಕನಾಗಿ ಆಯ್ಕೆ ಮಾಡಿದೆ.

ನವದೆಹಲಿ(ನ.05): 2010ರ ಐಸಿಸಿ ಅಂಡರ್‌-19 ವಿಶ್ವಕಪ್‌ನಲ್ಲಿ ಭಾರತ ಪರ ಗರಿಷ್ಠ ವಿಕೆಟ್‌ ಕಬಳಿಸಿದ್ದ, ಮುಂಬೈ ಪರ ಒಂದು ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದ ಸೌರಭ್‌ ನೇತ್ರವಾಲ್ಕರ್‌ ಈಗ ಅಮೆರಿಕ ಕ್ರಿಕೆಟ್‌ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. 

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಸೌರಭ್‌, ಉನ್ನತ ವ್ಯಾಸಂಗಕ್ಕಾಗಿ 2015ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಕ್ರಿಕೆಟ್‌ ಮುಂದುವರಿಸಿದ ಅವರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದು, ಈಗ ತಂಡದ ನಾಯಕರಾಗಿದ್ದಾರೆ. ಮುಂದಿನ ವಾರ ಒಮಾನ್‌ನಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಅರ್ಹತಾ ಸುತ್ತು ನಡೆಯಲಿದ್ದು, ಅಮೆರಿಕ ತಂಡ ಪಾಲ್ಗೊಳ್ಳಲಿದೆ.

ಅಮೇರಿಕಾದ ವಿಶ್ವ ಕ್ರಿಕೆಟ್  ಲೀಗ್ ಡಿವಿಶನ್ 3 ಟೂರ್ನಿಯಲ್ಲಿ ಸೌರಭ್‌ ನೇತ್ರವಾಲ್ಕರ್‌ ಗರಿಷ್ಠ ವಿಕೆಟ್ ಕಬಳಿಸಿದ್ದರು. ಇತ್ತೀಚೆಗೆ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗಯಾನ ಅಮೇಜಾನ್ ವಾರಿಯರ್ಸ್ ತಂಡಕ್ಕೂ ಆಯ್ಕೆಯಾಗಿದ್ದರು. ಆದರೆ ಆಡೋ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ.

click me!