ವೈವಾಹಿಕ ಜೀನವಕ್ಕೆ ಕಾಲಿಟ್ಟ ಇಂಗ್ಲೆಂಡ್ ಕ್ರಿಕೆಟಿಗ ಇಯಾನ್ ಮಾರ್ಗನ್ !

Published : Nov 05, 2018, 09:25 AM IST
ವೈವಾಹಿಕ ಜೀನವಕ್ಕೆ ಕಾಲಿಟ್ಟ ಇಂಗ್ಲೆಂಡ್ ಕ್ರಿಕೆಟಿಗ ಇಯಾನ್ ಮಾರ್ಗನ್ !

ಸಾರಾಂಶ

ಇಂಗ್ಲೆಂಡ್ ಏಕದಿನ ನಾಯಕ ಇಯಾನ್ ಮಾರ್ಗನ್ ತಮ್ಮ 32ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಜೊತೆ ಲಂಡನ್‌ನಲ್ಲಿ ಮಾರ್ಗನ್ ಮದುವೆಯಾಗಿದ್ದಾರೆ . 

ಲಂಡನ್‌(ನ.05): ಇಂಗ್ಲೆಂಡ್‌ ಏಕದಿನ ತಂಡದ ನಾಯಕ ಇಯಾನ್‌ ಮೊರ್ಗನ್‌, ತಮ್ಮ ಬಹುಕಾಲದ ಪ್ರೇಯಸಿ ತಾರಾ ರಿಡ್ಜವೇರೊಂದಿಗೆ ಶನಿವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಮರ್‌ಸೆಟ್‌ನಲ್ಲಿರುವ ಐತಿಹಾಸಿಕ ಬಾಬಿಂಗ್ಟನ್‌ ಹೌಸ್‌ನಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಬಳಿಕ ಮಾರ್ಗನ್‌-ತಾರಾ ಜೋಡಿ ವಿವಾಹ ನೆರವೇರಿತು. 

ನ್ಯೂಜಿಲೆಂಡ್‌ ಮಾಜಿ ನಾಯಕ ಬ್ರೆಂಡನ್‌ ಮೆಕಲಮ್‌, ಇಂಗ್ಲೆಂಡ್‌ ಮಾಜಿ ನಾಯಕ ಅಲಿಸ್ಟರ್‌ ಕುಕ್‌, ಕ್ರಿಕೆಟಿಗರಾದ ಜೇಸನ್‌ ರಾಯ್‌ ಮತ್ತು ಜೋಸ್‌ ಬಟ್ಲರ್‌ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.  ತಮ್ಮ 32ನೇ ವಯಸ್ಸಿನಲ್ಲಿ ಮಾರ್ಗನ್ ಬ್ಯಾಚ್ಯುಲರ್ ಲೈಫ್‌ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಇಂಗ್ಲೆಂಡ್ ಪರ 16 ಟೆಸ್ಟ್ ಪಂದ್ಯದಿಂದ 700 ರನ್ ಸಿಡಿಸಿರುವ ಮಾರ್ಗನ್, ಏಕದಿನದಲ್ಲಿ 212 ಏಕದಿನ ಪಂದ್ಯದಿಂದ 6557 ರನ್ ಪೇರಿಸಿದ್ದಾರೆ. 11 ಶತಕ  ಹಾಗೂ 41 ಅರ್ಧಶತಕ ಬಾರಿಸಿದ್ದಾರೆ. ಇನ್ನು 77 ಟಿ20 ಪಂದ್ಯದಿಂದ 1734 ರನ್ ಸಿಡಿಸಿದ್ದಾರೆ. ಇಷ್ಟೇ ಅಲ್ಲ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಮಾರ್ಗನ್ ನಾಯಕನಾಗಿಯು ಯಶಸ್ವಿಯಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಮಿನಿ ಹರಾಜಿಗೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ 'ವೈಲ್ಡ್ ಕಾರ್ಡ್' ಎಂಟ್ರಿ!
ಮುಂಬೈನಲ್ಲಿ ಮೆಸ್ಸಿ ಮೇನಿಯಾ! ಫುಟ್ಬಾಲ್‌ ಲೆಜೆಂಡ್‌ಗೆ 2011ರ ವಿಶ್ವಕಪ್ ಜೆರ್ಸಿ ಕೊಟ್ಟ ಸಚಿನ್