ಸ್ವಹಿತಾಸಕ್ತಿಗೆ ದ್ರಾವಿಡ್‌ ಒಳಪಡಲ್ಲ: BCCI ಸ್ಪಷ್ಟನೆ

By Web Desk  |  First Published Aug 14, 2019, 2:07 PM IST

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮೇಲೆ ಕೇಳಿ ಬಂದಿದ್ದ ಸ್ವಹಿತಾಸಕ್ತಿ ಆರೋಪದ ಬಗ್ಗೆ ಬಿಸಿಸಿಐ ಕೊನೆಗೂ ಸ್ಪಷ್ಟನೆ ನೀಡಿದ್ದು, ದ್ರಾವಿಡ್ ಪಾಲಿಗೆ ಶುಭ ಸುದ್ದಿ ಹೊರಬಿದ್ದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಮುಂಬೈ(ಆ.14): ರಾಹುಲ್‌ ದ್ರಾವಿಡ್‌ ವಿರುದ್ಧ ಯಾವುದೇ ಸ್ವಹಿ​ತಾ​ಸಕ್ತಿ ದೂರಿಲ್ಲವೆಂದು ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ) ಸ್ಪಷ್ಟಪಡಿಸಿದೆ. ಬೆಂಗಳೂರಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ನಿರ್ದೇಶಕರಾಗಿ ರಾಹುಲ್ ದ್ರಾವಿಡ್‌ ನೇಮಕಕ್ಕೂ ಹಸಿರು ನಿಶಾನೆ ತೋರಿದೆ.

ರಾಹುಲ್ ದ್ರಾವಿಡ್‌ಗೆ ನೋಟೀಸ್; BCCI ವಿರುದ್ಧ ಕ್ರಿಕೆಟಿಗರು ಗರಂ!

Tap to resize

Latest Videos

undefined

ಸಿಒಎ ಸದಸ್ಯ ಲೆಫ್ಟಿನೆಂಟ್‌ ಜನರಲ್‌ ರವಿ ತೊಗ್ಡೆ, ಪ್ರಕರಣದ ಅಂತಿಮ ತೀರ್ಪನ್ನು ಬಿಸಿಸಿಐ ಸಾರ್ವಜನಿಕ ತನಿಖಾಧಿಕಾರಿ-ನೈತಿಕ ಅಧಿಕಾರಿ ಡಿ.ಕೆ.ಜೈನ್‌ ನೀಡಲಿದ್ದಾರೆ ಎಂದಿದ್ದಾರೆ. ದ್ರಾವಿಡ್ ಮೇಲೆ ಕೇಳಿ ಬಂದಿದ್ದ ಸ್ವಹಿತಾಸಕ್ತಿ ಆರೋಪದ ಬಗ್ಗೆ ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ ಮುಂತಾದವರು ಅಸಮಾಧಾನ ವ್ಯಕ್ತಪಡಿಸಿದ್ದರು.  

ಎಲ್ಲಾ ವೃತ್ತಿಗೂ ಹಿತಾಸಕ್ತಿ ಸಂಘರ್ಷವಿದೆ: ಕುಂಬ್ಳೆ

ದ್ರಾವಿಡ್‌ ಇಂಡಿಯಾ ಸಿಮೆಂಟ್ಸ್‌ ಸಂಸ್ಥೆಯ ಉಪಾಧ್ಯಕ್ಷ ಸಹ ಆಗಿರುವ ಕಾರಣ ಅವರ ವಿರುದ್ಧ ಸ್ವಹಿತಾಸಕ್ತಿ ಆರೋಪ ಕೇಳಿಬಂದಿತ್ತು. ದ್ರಾವಿಡ್‌ ಅನಿರ್ದಿಷ್ಟಾವಧಿ ರಜೆ ಪಡೆದಿದ್ದು, ಎನ್‌ಸಿಎ ನಿರ್ದೇಶಕ ಹುದ್ದೆಯಲ್ಲಿ ಇರುವವರೆಗೂ ಇಂಡಿಯಾ ಸಿಮೆಂಟ್ಸ್‌ನಿಂದ ವೇತನ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 

click me!