ಕ್ರಿಕೆಟ್ ಅಭಿಮಾನಿಗಳಿಗಿದು ಸಿಹಿ ಸುದ್ದಿ: ದಶಕಗಳ ಕನಸು ನನಸು..?

By Web Desk  |  First Published Aug 14, 2019, 12:25 PM IST

ಒಲಿಂಪಿಕ್ಸ್ ಟೂರ್ನಿಯಲ್ಲಿ ಕ್ರಿಕೆಟ್ ಸೇರ್ಪಡೆಯಾಗಬೇಕು ಎನ್ನುವ ಬಹುದಿನಗಳ ಬೇಡಿಕೆಗೆ ಕೊನೆಗೂ ಸಕಾರಾತ್ಮಕ ಫಲಿತಾಂಶ ಹೊರಬಿದ್ದಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಇನ್ನು ಕೆಲವೇ ವರ್ಷಗಳಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆಯಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 


ಲಂಡನ್‌(ಆ.14): ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಆಟವನ್ನು ನೋಡೋದು ಯಾವಾಗ? ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಂತಿದೆ. ದಶಕಗಳಿಂದ ಒಲಿಂಪಿಕ್ಸ್’ನಲ್ಲಿ ಕ್ರಿಕೆಟ್ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿಯೊಂದು ಹೊರಬಿದ್ದಂತಾಗಿದೆ. 

2028ರಲ್ಲಿ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಸೇರ್ಪಡೆಗೊಳಿಸಲು ಐಸಿಸಿ ಸಕಲ ಪ್ರಯತ್ನ ನಡೆಸುತ್ತಿದೆ. ಐಸಿಸಿ ಚಟುವಟಿಕೆಗಳಲ್ಲಿ ಪಾತ್ರ ವಹಿಸುವ ಇಂಗ್ಲೆಂಡ್‌ನ ಮ್ಯಾರಿಲ್ಬೋನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಕ್ರಿಕೆಟ್‌ ಸಮಿತಿಯ ಮುಖ್ಯಸ್ಥ ಮೈಕ್‌ ಗ್ಯಾಟಿಂಗ್‌ ಈ ವಿಷಯ ತಿಳಿಸಿದ್ದಾರೆ. 

Latest Videos

undefined

3ನೇ ಅಂಪೈರ್‌ನಿಂದ ನೋಬಾಲ್‌ ತೀರ್ಪು : ಐಸಿಸಿ ಪ್ರಯೋಗ!

ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ನಿಗ್ರಹ ಘಟಕ (ನಾಡಾ) ವ್ಯಾಪ್ತಿಗೆ ಬಿಸಿಸಿಐ ಸೇರ್ಪಡೆಗೊಂಡಿದ್ದು, ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಗೊಳಿಸಬೇಕು ಎನ್ನುವ ಐಸಿಸಿಯ ಮಹತ್ವಾಕಾಂಕ್ಷೆಗೆ ಬಲ ಸಿಕ್ಕಂತಾಗಿದೆ. ಒಲಿಂಪಿಕ್ಸ್‌ಗೆ ಯಾವುದೇ ಕ್ರೀಡೆ ಸೇರ್ಪಡೆಗೊಳ್ಳಬೇಕಿದ್ದರೆ, ಆ ಕ್ರೀಡೆಯನ್ನು ಆಡುವ ಎಲ್ಲಾ ರಾಷ್ಟ್ರಗಳು ವಿಶ್ವ ಉದ್ದೀಪನಾ ಮದ್ದು ಸೇವನೆ ನಿಗ್ರಹ ಘಟಕ (ವಾಡಾ)ದಿಂದ ಮಾನ್ಯತೆ ಪಡೆದ ರಾಷ್ಟ್ರೀಯ ಡೋಪಿಂಗ್‌ ವಿರೋಧಿ ಘಟಕದ ವ್ಯಾಪ್ತಿಗೆ ಸೇರಿರಬೇಕು.

1900ರಲ್ಲಿ ಮಾತ್ರ ಒಲಿಂಪಿಕ್ಸ್ ಕೂಟದಲ್ಲಿ ಕ್ರಿಕೆಟ್ ಆಡಿಸಲಾಗಿತ್ತು. 1900ರಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಟೂರ್ನಿಯಲ್ಲಿ ಕೇವಲ 2 ತಂಡಗಳು ಮಾತ್ರ ಪಾಲ್ಗೊಂಡಿದ್ದವು. ಆತಿಥೇಯ ಫ್ರಾನ್ಸ್ ತಂಡವನ್ನು ಮಣಿಸಿ ಗ್ರೇಟ್ ಬ್ರಿಟನ್ ಚಿನ್ನ ಜಯಿಸಿತ್ತು. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
 

click me!