ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಡೇವಿಡ್ ವಾರ್ನರ್

By Suvarna NewsFirst Published Jul 21, 2018, 5:21 PM IST
Highlights

ಬಾಲ್ ಟ್ಯಾಂಪರಿಂಗ್ ಮೂಲಕ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹಾಗಾದರೆ ವಾರ್ನರ್ ನೀಡಿದ ಸಿಹಿ ಸುದ್ದಿ ಏನು? ಇಲ್ಲಿದೆ ನೋಡಿ.
 

ಸಿಡ್ನಿ(ಜು.21): ಬಾಲ್ ಟ್ಯಾಂಪರಿಂಗ್‌ನಿಂದ ಒಂದು ವರ್ಷ ನಿಷೇಧಕ್ಕೊಳಗಾಗಿರುವ ಆಸ್ಟೇಲಿಯಾ ತಂಡದ ಉಪನಾಯಕ ಡೇವಿಡ್ ವಾರ್ನರ್ ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.  ಈಗಾಗಲೆ ಕೆನಾಡ ಗ್ಲೋಬಲ್ ಟಿ20 ಲೀಗ್ ಟೂರ್ನಿ ಆಡಿರುವ ಡೇವಿಡ್ ವಾರ್ನರ್ ಮುಂಬರುವ ಮಹತ್ವದ ಟೂರ್ನಿಗೆ ರೆಡೆಯಾಗುತ್ತಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಹೇರಿದ ನಿಷೇಧದಿಂದ ಡೇವಿಡ್ ವಾರ್ನರ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲೂ ಪಾಲ್ಗೊಂಡಿರಲಿಲ್ಲ. ಇಷ್ಟೇ ಅಲ್ಲ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿಯಿಂದಲೂ ವಾರ್ನರ್‌ಗೆ ಕೊಕ್ ನೀಡಲಾಗಿದೆ.

ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮುಂಬರುವ 2019ರ ವಿಶ್ವಕಪ್ ಆಡೋದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನ ಪ್ರತಿನಿಧಿಸೋ ವಿಶ್ವಾಸವಿದೆ. ಇದಕ್ಕಾಗಿ ಕಠಿಣ ಅಭ್ಯಾಸ ನಡೆಸಲಿದ್ದೇನೆ ಎಂದು ವಾರ್ನರ್ ಹೇಳಿದ್ದಾರೆ.

ಇದನ್ನು ಓದಿ: ಬಿಗ್ ಬ್ಯಾಶ್ ಲೀಗ್‌ನಿಂದಲೂ ಸ್ಟೀವ್ ಸ್ಮಿತ್- ಡೇವಿಡ್ ವಾರ್ನರ್ ಔಟ್!

ವಿಶ್ವಕಪ್ ಟೂರ್ನಿಗೂ ಮೊದಲು ಐಪಿಎಲ್ ಟೂರ್ನಿಯಲ್ಲೂ ಪಾಲ್ಗೊಳ್ಳೋದಾಗಿ ಡೇವಿಡ್ ವಾರ್ನರ್ ಹೇಳಿದ್ದಾರೆ. 2019ರ ವಿಶ್ವಕಪ್ ಟೂರ್ನಿಗೂ ಮೊದಲು 12ನೇ ಆವೃತ್ತಿ ಐಪಿಎಲ್ ಟೂರ್ನಿ ನಡೆಯಲಿದೆ. ಮತ್ತೆ ಸನ್ ರೈಸರ್ಸ್ ಹೈದರಬಾದ್ ತಂಡವನ್ನ ಮುನ್ನಡೆಸೋದಾಗಿ ವಾರ್ನರ್ ಹೇಳಿದ್ದಾರೆ.

 

click me!