ಟಾಪ್ಸ್ ಪಟ್ಟಿಯಲ್ಲಿ ರಾಜ್ಯದ 8 ಕ್ರೀಡಾಪಟುಗಳಿಗೆ ಸ್ಥಾನ

First Published Jul 21, 2018, 5:10 PM IST
Highlights

ರಾಜ್ಯದ ಅಥ್ಲೀಟ್‌ಗಳಾದ ಎಂ.ಆರ್.ಪೂವಮ್ಮ, ವಿಜಯ ಕುಮಾರಿ, ಪ್ಯಾರಾ ಅಥ್ಲೀಟ್'ಗಳಾದ ಫರ್ಮನ್ ಬಾಷಾ, ಸಕೀನಾ ಕಾಟೂನ್, ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ಟೆನಿಸಿಗ ರೋಹನ್ ಬೋಪಣ್ಣ, ಈಜು ಪಟು ಶ್ರೀಹರಿ ನಟರಾಜ್ ಹಾಗೂ ಹಿರಿಯ ಹಾಕಿ ಆಟಗಾರ ಎಸ್.ವಿ.ಸುನಿಲ್ ಯೋಜನೆಯ ಭಾಗವಾಗಿದ್ದು, ತಿಂಗಳಿಗೆ ₹50,000 ಭತ್ಯೆ ಪಡೆಯಲಿದ್ದಾರೆ. 

ನವದೆಹಲಿ[ಜು.21]: ಕೇಂದ್ರ ಕ್ರೀಡಾ ಸಚಿವಾಲಯದ ಮಹತ್ವಾಕಾಂಕ್ಷೆಯ ಯೋಜನೆ ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್ಸ್)ನಲ್ಲಿ ಕರ್ನಾಟಕದ 8 ಆಟಗಾರರು ಸ್ಥಾನ ಪಡೆದಿದ್ದಾರೆ. 

ಶುಕ್ರವಾರ ಕೇಂದ್ರ ಕ್ರೀಡಾ ಇಲಾಖೆ 196 ಕ್ರೀಡಾಪಟುಗಳ ಪರಿಷ್ಕೃತ ಪಟ್ಟಿ ಬಿಡುಗಡೆಗೊಳಿಸಿತು. ರಾಜ್ಯದ ಅಥ್ಲೀಟ್‌ಗಳಾದ ಎಂ.ಆರ್.ಪೂವಮ್ಮ, ವಿಜಯ ಕುಮಾರಿ, ಪ್ಯಾರಾ ಅಥ್ಲೀಟ್'ಗಳಾದ ಫರ್ಮನ್ ಬಾಷಾ, ಸಕೀನಾ ಕಾಟೂನ್, ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ಟೆನಿಸಿಗ ರೋಹನ್ ಬೋಪಣ್ಣ, ಈಜು ಪಟು ಶ್ರೀಹರಿ ನಟರಾಜ್ ಹಾಗೂ ಹಿರಿಯ ಹಾಕಿ ಆಟಗಾರ ಎಸ್.ವಿ.ಸುನಿಲ್ ಯೋಜನೆಯ ಭಾಗವಾಗಿದ್ದು, ತಿಂಗಳಿಗೆ ₹50,000 ಭತ್ಯೆ ಪಡೆಯಲಿದ್ದಾರೆ. 

2020ರ ಟೋಕಿಯೋ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು ಪದಕ ಗೆಲ್ಲುವ ಆಟಗಾರರಿಗೆ ಆರ್ಥಿಕ ಹಾಗೂ ತರಭೇತಿಗೆ ನೆರವು ನೀಡಲು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿದ್ದು, ಈ ಯೋಜನೆಗೆ ಆಯ್ಕೆಯಾದ ಅಥ್ಲೀಟ್’ಗಳು ತಿಂಗಳಿಗೆ 50 ಸಾವಿರ ಭತ್ಯೆ ಪಡೆಯಲಿದ್ದಾರೆ. 

click me!