ಗೌತಿ ಬಿಟ್ಟ ನಾಯಕ ಕೊಹ್ಲಿ ಧವನ್ ಆಯ್ಕೆ ಮಾಡಿದ್ದೇಕೆ..?

By Internet DeskFirst Published Oct 1, 2016, 7:37 AM IST
Highlights

ಕೊಲ್ಕತ್ತಾ(ಅ.01): ಶಿಖರ್ ಧವನ್ ಟೆಸ್ಟ್​ ಕೆರಿಯರ್ ಕ್ಲೋಸ್ ಆಗ್ತಿದೆ ಅನಿಸ್ತಿದೆ. ಕೋಲ್ಕತ್ತಾ ಟೆಸ್ಟ್​​ನಲ್ಲೂ ವಿಫಲರಾಗೋ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಇನ್ನು ಐತಿಹಾಸಿಕ ಟೆಸ್ಟ್​​ನಲ್ಲಿ ಪ್ರತಿಭೆಗಿಂತ ಸ್ನೇಹಕ್ಕೆ ವಿರಾಟ್ ಕೊಹ್ಲಿ ಮಣೆಹಾಕಿ ಕೈ ಸುಟ್ಟುಕೊಂಡಿದ್ದಾರೆ. 

ನಾಯಕನಾದೋನು ಯಾವುದೇ ಮುಲಾಜಿಗೆ ಒಳಗಾಗದೆ ಸ್ನೇಹವಿರಲಿ, ಒಂದೇ ರಾಜ್ಯದವರಿರಲಿ. ಪ್ರದರ್ಶನಕಷ್ಟೇ ಮಹತ್ವ ಕೊಡ್ಬೇಕು. ಆದರೆ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್​​ನ 11ರ ಬಳಗದ ಆಯ್ಕೆಯಲ್ಲಿ ನಾಯಕ ವಿರಾಟ್ ಕೊಹ್ಲಿ​​ ಖಂಡಿತಾ ಎಡವಿದ್ದಾರೆ.  

Latest Videos

ಫಾರ್ಮ್​​ ಕೊರತೆ ಎದುರಿಸುತ್ತಿರುವ ಶಿಖರ್​​ ಧವನ್​​ ಈವರೆಗೂ ಸ್ಥಿರ ಪ್ರದರ್ಶನ ನೀಡಿದ ಉದಾಹರಣೆಯೇ ಇಲ್ಲ. ಹೀಗಾಗಿ ಸ್ವತಃ ಕೊಹ್ಲಿಯೇ ಮೊದಲ ಟೆಸ್ಟ್​​ನಿಂದ ಡ್ರಾಪ್ ಮಾಡಿದ್ರು. ಆದರೆ, ರಾಹುಲ್​​ ಗಾಯಾಳುವಾಗಿದ್ರಿಂದ 2ನೇ ಟೆಸ್ಟ್​​ನಲ್ಲಿ ಧವನ್​ಗೆ ಚಾನ್ಸ್ ನೀಡಿ ವಿರಾಟ್ ಕೈ ಸುಟ್ಟುಕೊಂಡಿದ್ದಾರೆ.

ಧವನ್​​ ಕಥೆ ಗೊತ್ತಿದಕ್ಕೆ ಆಯ್ಕೆ ಸಮಿತಿ,  2 ವರ್ಷಗಳ ಬಳಿಕ ಗೌತಮ್ ಗಂಭೀರ್​​ಗೆ ಬುಲಾವ್​ ನೀಡಿತ್ತು. ಗೌತಿ ಆಯ್ಕೆಯಾಗುತ್ತಲೇ 2ನೇ ಟೆಸ್ಟ್​​ ಓಪನರ್​ ಅವರೇ ಅಂತಾನೂ ಊಹಿಸಲಾಗಿತ್ತು. ಆದರೆ, ವಿಜಯ್​​​ ಜೊತೆ ಈಡನ್​​ನಲ್ಲಿ ಕಣಕ್ಕೆ ಇಳಿದಿದ್ದು ಮತ್ತದೇ ಫಾರ್ಮ್​​ ಕೊರತೆ ಎದುರಿಸುತ್ತಿದ್ದ ​ ಧವನ್​​​​. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ.

ಎಲ್ಲರೂ ಆಶ್ಚರ್ಯಕ್ಕೊಳಗಾಗುವಂತೆ ಅಂತಿಮ 11ರೊಳಗೆ ಸೇರಿಕೊಂಡಿದ್ದ ಶಿಖರ್​​​ ನಾಯಕನ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. ಕೊಹ್ಲಿ ಲೆಕ್ಕಾಚಾರವನ್ನು ಧವನ್​ ಉಲ್ಟಾ ಮಾಡಿದರು. ಹೊಸ ಬಾಲ್​ ಎದುರಿಸುವಲ್ಲಿ ವಿಫಲರಾದ ಗಬ್ಬರ್ ಸಿಂಗ್​, ಕೇವಲ 1 ರನ್​​ಗೆ ನಿರ್ಗಮಿಸಿದರು.

ಕಳೆದ 12 ಇನ್ನಿಂಗ್ಸ್​​ಗಳಿಂದ ಧವನ್​ ದಾಖಲಿಸಿರೋದು ಕೇವಲ 289 ರನ್​​ಗಳನ್ನು ಮಾತ್ರ. ಅದರಲ್ಲೂ 8 ತವರಿನ ಇನ್ನಿಂಗ್ಸ್​​ಗಳನ್ನು ಆಡಿದ್ದಾರೆ. ಇಷ್ಟಾಗಿಯೂ ಕಳಪೆ ಪ್ರದರ್ಶನ ಮುಂದುವರೆದಿದೆ. ಇನ್ನು ಧವನ್​​ ಪಾಲಿಗೆ ಇನ್ನೊಂದು ಇನ್ನಿಂಗ್ಸ್​​ ಬಾಕಿ ಇದ್ದು, ಅದು ಕಡೆಯ ಅವಕಾಶವಾಗುವ ಸಾಧ್ಯತೆ ಹೆಚ್ಚಿದೆ. ಇಲ್ಲೇನಾದ್ರೂ ಶಿಖರ್​ ಫೇಲ್​​ ಆದ್ರೆ, ಟೆಸ್ಟ್​​ ವೃತ್ತಿ ಬದುಕು ಬಹುತೇಕ ಅಂತ್ಯವಾಗಲಿದೆ.

ಗಂಭೀರ್​​​ ಬೆಂಚ್​​​ ಕಾಯುವಂತೆ ಮಾಡಿದ್ದು ವಿರಾಟ್​​​ ಅನ್ನೊದರಲ್ಲಿ ಎರಡು ಮಾತಿಲ್ಲ.  ಗೌತಿ ಎದುರು ಧವನ್​​ ಏನೇನೂ ಇಲ್ಲ. ಅನುಭವದಿಂದ ಹಿಡಿದು ಸರಾಸರಿ ಬ್ಯಾಟಿಂಗ್​​ವರೆಗೂ ಗಂಭೀರ್ ಬೆಸ್ಟ್​. ಇಷ್ಟಾಗಿಯೂ ಗೌತಿ ಬೆಂಚ್​​ ಕಾಯುವಂತೆ ಮಾಡಿದರು ಕೊಹ್ಲಿ.

ಕೊಹ್ಲಿ​ ಹಾಗೂ ಗೌತಿ ಸಂಬಂಧ ಉತ್ತಮವಾಗಿ ಇಲ್ಲ. ಧವನ್-ವಿರಾಟ್​ ಚಿಕ್ಕವರಿಂದಲೂ ಸ್ನೇಹಿತರು. ಸ್ನೇಹಕ್ಕೆ ಮಣೆ ಹಾಕಿದ ವಿರಾಟ್​​ ಪ್ರತಿಭೆಯನ್ನು ದೂರ ಇಟ್ಟು ಎಡವಿರೋದು ಸುಳ್ಳಲ್ಲ ಅನ್ನಿಸುತ್ತೆ. ಈ ಬಗ್ಗೆ ಸಾಮಾಜಿಕ ಜಾಲತಾಣ​​ಗಳಲ್ಲಿ ಸಾಕಷ್ಟು ಟೀಕೆಗಳು ಕೂಡ ಬಂದಿವೆ. 

click me!