ಇನ್ಮುಂದೆ ಯಾವುದೇ ಸರಣಿಯಲ್ಲೂ ಭಾರತ-ಪಾಕ್​​ ಒಟ್ಟಿಗೆ ಬೇಡ ಎಂದ ಬಿಸಿಸಿಐ !

By Internet DeskFirst Published Oct 1, 2016, 6:27 AM IST
Highlights

ಮುಂಬೈ(ಅ.01): ಮುಂದಿನ ದಿನಗಳಲ್ಲಿ ಭಾರತ-ಪಾಕ್​​​ ತಂಡಗಳನ್ನು ಒಂದೇ ಗುಂಪಿನಲ್ಲಿ ಇಡದಂತೆ ಐಸಿಸಿಗೆ ಬಿಸಿಸಿಐ ಮನವಿ ಮಾಡಿಕೊಂಡಿದೆ. 

ಈಗಾಗಲೇ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೀತಿಲ್ಲ. ಇದರ ಬೆನ್ನಲ್ಲಿಯೇ ಬಿಸಿಸಿಐ ಈ ಮನವಿ ಮಾಡಿರೋದು ಕ್ರಿಕೆಟ್​​ ಅಭಿಮಾನಿಗಳಿಗೆ ಬಾರೀ ನಿರಾಸೆ ಮಾಡಿದೆ. 

Latest Videos

ಭವಿಷ್ಯದ ಟೂರ್ನಿಗಳಲ್ಲಿ ಎರಡೂ ತಂಡಗಳನ್ನು ಒಂದೇ ಗುಂಪಿನಲ್ಲಿ ಇರಸಬೇಡಿ ಅಂತ ಮನವಿ ಮಾಡಿದೆ. ಕ್ವಾರ್ಟರ್​​​ ಫೈನಲ್​, ಸೆಮಿಫೈನಲ್​​​ ಹಾಗೂ ಫೈನಲ್​​​ ಹಂತದಲ್ಲಿ ಮುಖಾಮುಖಿಯಾಗಲಿ. ಆದರೆ, ಲೀಗ್​​ ಹಂತದಲ್ಲಿತಯೇ ಒಂದೇ ಗುಂಪಿನಲ್ಲಿರಿಸುವುದು ಬೇಡಾ ಅನ್ನೋದು ಬಿಸಿಸಿಐ ಮನವಿಯಾಗಿದೆ. 

ಆದರೆ, ಈಗಾಗಲೇ ಪ್ರಕಟಗೊಂಡಿರೋ ಚಾಂಪಿಯನ್ಸ್​​ ಟ್ರೋಫಿಯಲ್ಲಿ ಎರಡೂ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. 
 

click me!