
ಬ್ರಿಟನ್(ಡಿ.15): ಬ್ರಿಟನ್'ನ ಪ್ರಖ್ಯಾತ ಫೂಟ್'ಬಾಲ್ ಪ್ಲೇಯರ್ ಕ್ರಿಸ್ ಸ್ಮಾಲಿಂಗ್'ನ ಸೂಪರ್ ಮಾಡೆಲ್ ಪತ್ನಿ ಸ್ಯಾಮ್ ಕುಕ್'ಗೆ ವಿಚಿತ್ರವಾದ ಆಸೆಯೊಂದಿದೆ. ಈಕೆಗೆ ಇಡೀ ಒಂದು ರಾತ್ರಿ ಫೂಟ್'ಪಾತ್ ಮೇಲೆ ಮಲಗಬೇಕಂತೆ. ಸೇವಾಶ್ರಮಕ್ಕೆ ಹಣ ಹೊಂದಿಸಲು ಈಕೆ ಹೀಗೆ ಮಾಡ ಬಯಸುತ್ತಿದ್ದಾಳೆ. ಪತ್ನಿಯ ಈ ನಿರ್ಧಾರವನ್ನು ಆಟಗಾರ ಕ್ರಿಸ್ ಕೂಡಾ ಸಮರ್ಥಿಸಿದ್ದಾರೆ. ಇಷ್ಟೇ ಅಲ್ಲದೆ ಈ ಸೂಪರ್ ಮಾಡೆಲ್'ನ ಕನಸನ್ನು ಸಾಕಾಗೊಳಿಸಲು ಆಕೆಯ ಮೂವರು ಸ್ನೇಹಿತರೂ ಸಾಥ್ ನೀಡಲಿದ್ದಾರೆ.
ಈ ಕುರಿತಾಗಿ ಮಾತನಾಡಿದ ಸ್ಯಾಮ್ ಕುಕ್ 'ನಾನು ಈ ರೀತಿ ಮಾಡಿ ಅನಾಥ ಹಾಗೂ ನಿರ್ಗತಿಕ ಜನರಿಗೆ ಸಹಾಯ ಮಾಡ ಬಯಸುತ್ತೇನೆ. ನಿರ್ಗತಿಕರಂತೆ ನಾನೂ ಫೂಟ್'ಪಾತ್'ನಲ್ಲಿ ಮಲಗಿ ಅವರ ಕಷ್ಟವನ್ನು ಖುದ್ದಾಗಿ ಅನುಭವಿಸಿ. ಅವರಿಗಿರುವ ಸಮಸ್ಯೆಯನ್ನು ಇತರರಿಗೆ ತಿಳಿಸಬೇಕೆಂದಿದ್ದೇನೆ' ಎಂದಿದ್ದಾರೆ.
'ನಾನು ಫೂಟ್'ಪಾತ್ ಮೇಲೆ ದಿನಗಳೆಯುವ ಜನರು ಅತೀವ ಚಳಿಯಿಂದಾಗಿ ಸಾಯುತ್ತಿದ್ದಾರೆ ಎಂಬುವುದನ್ನು ಬಹಳಷ್ಟು ಬವಾರಿ ಕೇಳಿದ್ದೇನೆ. ಇದೇ ಕಾರಣದಿಂದ ಈ ಬಾರಿಯ ಕ್ರಿಸ್'ಮಸ್ ಹಬ್ಬದ ಮುನ್ನ ನಾನೂ ಒಂದು ರಾತ್ರಿ ಅವರಂತೆ ಕಳೆಯಬೇಕೆಂದಿದ್ದೇನೆ' ಎಂದಿದ್ದಾರೆ.
ಈ ಉದ್ದೇಶದಿಂದ ತಾನು ಫೂಟ್'ಪಾತ್ ಮೇಲೆ ಮಲಗಿದ ದಿನ ಫೋಟೋಗಳನ್ನು ತೆಗೆಸಿ ಅದರಿಂದ ಹಣ ಸಂಪಾದಿಸುವ ಉದ್ದೇಶ ಹೊಂದಿರುವ ಸ್ಯಾಮ್ ಕುಕ್ ಈ ಹಣವನ್ನು ಅಲ್ಲಿನ ನಿರ್ಗತಿಕರಿಗೆ ನೀಡಲಿದ್ದಾರೆ. ಈಕೆಗೆ ತನ್ನ ಫೋಟೋಗಳಿಗೆ ಲಕ್ಷ ಸಿಗುವ ಭರವಸೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.