ಕರ್ನಾಟಕದ ಉತ್ತಮ ಮೊತ್ತ : ಇನ್ನಿಂಗ್ಸ್ ಮುನ್ನಡೆಗಾಗಿ ರೈಲ್ವೇಸ್ ಹೋರಾಟ

Published : Nov 26, 2017, 10:24 PM ISTUpdated : Apr 11, 2018, 01:01 PM IST
ಕರ್ನಾಟಕದ ಉತ್ತಮ ಮೊತ್ತ : ಇನ್ನಿಂಗ್ಸ್ ಮುನ್ನಡೆಗಾಗಿ ರೈಲ್ವೇಸ್ ಹೋರಾಟ

ಸಾರಾಂಶ

. 83 ರನ್ ಗಳಿಸುವಷ್ಟರಲ್ಲಿ ನಾಲ್ವರು ಪ್ರಮುಖ ಬ್ಯಾಟ್ಸ್'ಮನ್‌ಗಳು ಪೆವಿಲಿಯನ್ ಸೇರಿದರು. ಅಭಿಮನ್ಯು ಮಿಥುನ್, ಕೆ. ಗೌತಮ್ ತಲಾ 2 ವಿಕೇಟ್ ಪಡೆದರು.  

ನವದೆಹಲಿ(ನ.26): ರೈಲ್ವೇಸ್ ತಂಡ ವಿರುದ್ಧ ಇಲ್ಲಿ ನಡೆಯುತ್ತಿರುವ ‘ಎ’ ಗುಂಪಿನ ಕೊನೆ ಲೀಗ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಇನ್ನಿಂಗ್ಸ್ ಮುನ್ನಡೆಗಾಗಿ ಹೋರಾಟ ನಡೆಸುತ್ತಿದೆ.

ಮೊದಲ ದಿನ 355/6 ಉತ್ತಮ ಆಟವಾಡಿದ್ದ ರಾಜ್ಯದ ಆಟಗಾರರು 2ನೇ ದಿನದಲ್ಲಿ ಸಾಲು ಸಾಲಾಗಿ ಪೆವಿಲಿಯನ್'ಗೆ ತೆರಳಿದರು. ಕೇವಲ 79 ರನ್'ಗಳಿಗೆ ತನ್ನೆಲ್ಲ ವಿಕೇಟ್ ಕಳೆದುಕೊಂಡರು. ವಿನಯ್ ಕುಮಾರ್ (03), ಕೆ.ಗೌತಮ್ (00)ಗೆ ಔಟಾದರು. ತಂಡ 400 ರನ್ ಗಳಿಸುವುದು ಸಹ ಕಷ್ಟ ಎನಿಸಿತ್ತು. ಆದರೆ 10ನೇ ವಿಕೆಟ್‌ಗೆ ಶ್ರೇಯಸ್ ಗೋಪಾಲ್ ಹಾಗೂ ಅಭಿಮನ್ಯು ಮಿಥುನ್ 46 ರನ್ ಜೊತೆಯಾಟವಾಡಿದ ಕಾರಣ 434/10 ರನ್ ಗಳಿಸಿತು. ಶ್ರೇಯಸ್ ಅಜೇಯ 44 ರನ್ ಗಳಿಸಿದರೆ, ಮಿಥುನ್ 30 ಎಸೆತಗಳಲ್ಲಿ 31 ರನ್ ಸಿಡಿಸಿದರು.  

ಇನ್ನಿಂಗ್ಸ್ ಮುನ್ನಡೆಯತ್ತ ರೈಲ್ವೇಸ್  

ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ರೈಲ್ವೇಸ್ 2ನೇ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿದ್ದು, 193 ರನ್ ಹಿನ್ನಡೆಯಲ್ಲಿದೆ. ಕಳೆದ ಎರಡು ಪಂದ್ಯಗಳಲ್ಲೂ ಡ್ರಾ ಮಾಡಿಕೊಳ್ಳುವತ್ತ ಗಮನ ಹರಿಸಿದ ಕರ್ನಾಟಕ, ಈ ಪಂದ್ಯದಲ್ಲೂ ಅದೇ ಲೆಕ್ಕಾಚಾರ ನಡೆಸಿದೆ. ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ತಂಡ, ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿ 3 ಅಂಕ ಗಳಿಸಲು ಎದುರು ನೋಡುತ್ತಿದೆ. ‘ಎ’ ಗುಂಪಿನಲ್ಲಿ 26 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಕರ್ನಾಟಕ, 3 ಅಂಕ ಗಳಿಸಿದರೆ ಒಟ್ಟು 29 ಅಂಕ ಸಂಪಾದಿಸಲಿದೆ. 24 ಅಂಕ ಗಳಿಸಿ 2ನೇ ಸ್ಥಾನದಲ್ಲಿರುವ ದೆಹಲಿ, ಹೈದರಾಬಾದ್ ವಿರುದ್ಧ ಕೊನೆ ಪಂದ್ಯವಾಡುತ್ತಿದ್ದು, ಗೆಲುವಿನ ವಿಶ್ವಾಸದಲ್ಲಿದೆ. ಒಂದೊಮ್ಮೆ ಕರ್ನಾಟಕ ತನ್ನ ಪಂದ್ಯವನ್ನು ಡ್ರಾ ಮಾಡಿಕೊಂಡು, ದೆಹಲಿ ಗೆಲುವು ಸಾಧಿಸಿದರೆ, ‘ಎ’ ಗುಂಪಿನಲ್ಲಿ ವಿನಯ್ ಪಡೆ 2ನೇ ಸ್ಥಾನಕ್ಕೆ ತೃಪ್ತಿಪಡಬೇಕಾಗುತ್ತದೆ.

ಮಹೇಶ್, ಅರಿಂದಾಮ್ ಆಸರೆ

434 ರನ್'ಗಳ ಮೊತ್ತವನ್ನು ಬೆನ್ನಟ್ಟಲು ಕಣಕ್ಕಿಳಿದ ರೈಲ್ವೇಸ್ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. 83 ರನ್ ಗಳಿಸುವಷ್ಟರಲ್ಲಿ ನಾಲ್ವರು ಪ್ರಮುಖ ಬ್ಯಾಟ್ಸ್'ಮನ್‌ಗಳು ಪೆವಿಲಿಯನ್ ಸೇರಿದರು. ಅಭಿಮನ್ಯು ಮಿಥುನ್, ಕೆ. ಗೌತಮ್ ತಲಾ 2 ವಿಕೇಟ್ ಪಡೆದರು.  ಆದರೆ 5ನೇ ವಿಕೆಟ್‌ಗೆ ಜತೆಯಾದ ಅರಿಂದಾಮ್ ಘೋಷ್ ಹಾಗೂ ನಾಯಕ ಮಹೇಶ್ ರಾವತ್ ಕರ್ನಾಟಕಕ್ಕೆ ಅಡ್ಡಿಯಾದರು. ಈ ಜೋಡಿ ಶತಕದ ಜೊತೆಯಾಟವಾಡಿ ಅಜೇಯವಾಗಿ ಉಳಿದಿದ್ದಾರೆ.

ಸ್ಕೋರ್:

ರೈಲ್ವೇಸ್ ಮೊದಲ ಇನ್ನಿಂಗ್ಸ್ 241/4 (ಮಹೇಶ್ 86, ಅರಿಂದಾಮ್ 70, ಗೌತಮ್ 2-42)

ಕರ್ನಾಟಕ 434/10

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?