ಫಿಫಾ ವಿಶ್ವಕಪ್ 2018: ಆತಿಥೇಯ ರಷ್ಯಾಗೆ ಬಲಿಷ್ಠ ಸ್ಪೇನ್ ಸವಾಲು

Published : Jul 01, 2018, 02:02 PM IST
ಫಿಫಾ ವಿಶ್ವಕಪ್ 2018: ಆತಿಥೇಯ ರಷ್ಯಾಗೆ ಬಲಿಷ್ಠ ಸ್ಪೇನ್ ಸವಾಲು

ಸಾರಾಂಶ

ಫಿಫಾ ವಿಶ್ವಕಪ್ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿಂದು ಆತಿಥೇಯ ರಷ್ಯಾ ಹಾಗೂ ಬಲಿಷ್ಠ ಸ್ಪೇನ್ ಎದುರಾಗಲಿದೆ. ಈ ರೋಚಕ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ. ಯಾರ ಹೋರಾಟ ಅಂತ್ಯವಾಗಲಿದೆ. ಇಲ್ಲಿದೆ ವಿವರ.  

ಮಾಸ್ಕೋ(ಜು.01) : ತವರಿನ ಅಭಿಮಾನಿಗಳ ಮುಂದೆ ಫಿಫಾ ವಿಶ್ವಕಪ್ ಪ್ರಶಸ್ತಿ ಗೆಲ್ಲೋ ಕನಸಿನಲ್ಲಿರುವ ಆತಿಥೇಯ ರಷ್ಯಾ ತಂಡಕ್ಕೆ ಇಂದು ಕಠಿಣ ಸವಾಲು ಎದುರಾಗಿದೆ. ಇಂದಿನ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಷ್ಯಾ ತಂಡ, 2010ರ ಚಾಂಪಿಯನ್ ತಂಡ ಸ್ಪೇನ್ ವಿರುದ್ಧ ಹೋರಾಟ ನಡೆಸಲಿದೆ.

ಗ್ರೂಪ್ ಹಂತದಲ್ಲಿ ಸೌದಿ ಅರೇಬಿಯಾ ಹಾಗೂ ಈಜಿಪ್ಟ್ ವಿರುದ್ದ ಗೆಲುವು ಸಾಧಿಸಿದ್ದ ರಷ್ಯಾ, ಉರುಗ್ವೆ ವಿರುದ್ಧ ಹೀನಾಯ ಸೋಲು ಕಂಡಿತ್ತು. ಇದೇ ಮೊದಲ ಬಾರಿಗೆ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿರುವ ರಷ್ಯಾ ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. 

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಸ್ಪೇನ್, ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. 2 ಗೆಲುವು ಹಾಗೂ 1 ಡ್ರಾ ದೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದಿರುವ ಸ್ಪೇನ್, ರಷ್ಯಾ ವಿರುದ್ಧ ಭರ್ಜರಿ ಗೆಲುವಿನ ವಿಶ್ವಾಸದಲ್ಲಿದೆ. ಲುಜ್ನಿಕಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ತವರಿನ ಅಭಿಮಾನಿಗಳಿಂದ ತುಂಬಿ ತುಳುಕಲಿದೆ.  
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20 World Cup 2026: ಟಿ20 ವಿಶ್ವಕಪ್ ಫೈನಲ್ ಮಳೆಯಿಂದ ರದ್ದಾದ್ರೆ, ಟ್ರೋಫಿ ಯಾರಿಗೆ? ಇಲ್ಲಿದೆ ICC ರೂಲ್ಸ್
T20 World Cup Final: ಒಂದೇ ಮ್ಯಾಚ್, 3 ವಿಶ್ವ ದಾಖಲೆ! ಭಾರತ ಗೆದ್ದರೆ ಕ್ರಿಕೆಟ್ ಲೋಕದಲ್ಲಿ ಇತಿಹಾಸ