2019ರ ವಿಶ್ವಕಪ್: ಈ ಕ್ರಿಕೆಟಿಗರನ್ನ ಅಭಿಮಾನಿಗಳು ಮಿಸ್ ಮಾಡೋದು ಖಂಡಿತ

First Published Jun 17, 2018, 5:40 PM IST
Highlights

ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರೋ ಕೆಲ ಕ್ರಿಕೆಟಿಗರ ಅನುಪಸ್ಥಿತಿ ಬಹುವಾಗಿ ಕಾಡಲಿದೆ. ಅಭಿಮಾನಿಗಳನ್ನ ಪದೇ ಪದೇ ಕಾಡುವ ಆ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ

ಬೆಂಗಳೂರು(ಜೂ.17): ಕ್ರಿಕೆಟ್ ವಿಶ್ವಕಪ್ ಟೂರ್ನಿ ಎಂದರೆ ಅಭಿಮಾನಿಗಳಿಗಂತೂ ಹಬ್ಬದ ವಾತಾವರಣ. ತಮ್ಮ ತಮ್ಮ ತಂಡದ ಗೆಲುವಿಗಾಗಿ ಅಭಿಮಾನಿಗಳು ಪ್ರಾರ್ಥನೆ, ಪೂಜೆ ಕೂಡ ಸಲ್ಲಿಸುವುದು ಸಾಮಾನ್ಯ. ತಮ್ಮ ನೆಚ್ಚಿನ ಕ್ರಿಕೆಟಿಗ ಅತ್ಯುತ್ತಮ ಪ್ರದರ್ಶನ ನೀಡಲಿ ಅನ್ನೋ ಹಾರೈಕೆಗಳು ಸದಾ ಇರುತ್ತೆ. ಆದರೆ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಕಾಯುತ್ತಿರುವ ಅಭಿಮಾನಿಗಳು ಕೆಲ ದಿಗ್ಗಜ ಆಟಗಾರರನ್ನ ಮಿಸ್ ಮಾಡಿಕೊಳ್ಳಲಿದ್ದಾರೆ.

2019ರ ವಿಶ್ವಕಪ್ ಟೂರ್ನಿಯಲ್ಲಿ ಕೆಲ ಪ್ರಮುಖ ಆಟಗಾರರು ಕಣಕ್ಕಿಳಿಯುತ್ತಿಲ್ಲ. ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳನ್ನ ಸೆಳೆದಿರುವ ಈ ಕ್ರಿಕೆಟಿಗರನ್ನ ಅಭಿಮಾನಿಗಳು ಖಂಡಿತ ಮಿಸ್ ಮಾಡಿಕೊಳ್ಳಲಿದ್ದಾರೆ.

ಎಬಿ ಡಿವಿಲಿಯರ್ಸ್:


ಕ್ರಿಕೆಟ್ ಅಭಿಮಾನಿಗಳು ಅತೀ ಹೆಚ್ಚು ಪ್ರೀತಿಸೋ ಕ್ರಿಕೆಟಿಗರ ಪಟ್ಟಿಯಲ್ಲಿ ಸೌತ್ಆಫ್ರಿಕಾದ ಎಬಿ ಡಿವಿಲಿಯರ್ಸ್ ಮುಂಚೂಣಿಯಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 31 ಎಸೆತದಲ್ಲಿ ಸೆಂಚುರಿ ಸಿಡಿಸಿ ಅತೀವೇಗದ ಶತಕ ಸೇರಿದಂತೆ ಹಲವು ದಾಖಲೆ ಬರೆದಿರುವ ಎಬಿಡಿ , ಮೇ 23, 2018ರಂದು ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಡಿವಿಲಿಯರ್ಸ್ ನಿರ್ಧಾರ ಅಭಿಮಾನಿಗಳಿಗೆ ಆಘಾತ ತಂದಿತ್ತು. ಹೀಗಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ಅಭಿಮಾನಿಗಳು ಎಬಿಡಿಯನ್ನ ಮಿಸ್ ಮಾಡಿಕೊಳ್ಳಲಿದ್ದಾರೆ.

ಕುಮಾರ ಸಂಗಕ್ಕಾರ:


ಶ್ರೀಲಂಕಾ ಹಲವು ದಿಗ್ಗಜ ಕ್ರಿಕೆಟಿಗರನ್ನ ವಿಶ್ವಕ್ಕೆ ಪರಿಚಯಿಸಿದೆ. ಅದರಲ್ಲಿ ಕುಮಾರ ಸಂಗಕ್ಕಾರ ಕೂಡ ಅಗ್ರಸ್ಥಾನ ಪಡೆದಿದ್ದಾರೆ. ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾದ ಸಂಗಕ್ಕಾರ, 2003,2007,2011 ಹಾಗೂ 2015ರ ವಿಶ್ವಕಪ್ ಟೂರ್ನಿ ಆಡಿದ್ದಾರೆ. 2015ರ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಸತತ 4 ಶತಕ  ದಾಖಲಿಸಿದ್ದರು. ಆದರೆ ಕ್ವಾರ್ಟರ್ ಫೈನಲ್ ಪಂದ್ಯದ ಸೋಲಿನಿಂದ ಲಂಕಾ ಟೂರ್ನಿಯಿಂದ ಹೊರಬಿತ್ತು. ಇಷ್ಟೇ ಅಲ್ಲ ಸಂಗಕ್ಕಾರ ಕ್ರಿಕೆಟ್‌ಗೆ ವಿದಾಯ ಹೇಳಿದರು. 

ಬ್ರೆಂಡನ್ ಮೆಕ್‌ಕಲಮ್‌:


ಸ್ಫೋಟಕ ಬ್ಯಾಟಿಂಗ್ ಮೂಲಕವೇ ಜನಪ್ರೀಯರಾಗಿದ್ದ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್‌ಕಲಮ್ 2015ರ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನ ಫೈನಲ್‌ಗೆ ಕೊಂಡೊಯ್ದ ಸಾಧನೆ ಮಾಡಿದ್ದಾರೆ. 2003,2007,2011 ಹಾಗೂ 2015ರ ವಿಶ್ವಕಪ್ ಟೂರ್ನಿ ಆಡಿರುವ ಮೆಕ್‌ಕಕಲಮ್ 2019ರ ವಿಶ್ವಕಪ್ ಆಡಲ್ಲ. ಕಾರಣ 2016ರ ಫೆಬ್ರವರಿಯಲ್ಲಿ ಮೆಕ್‌ಕಲಮ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಕ್ರಿಕೆಟಿಗನನ್ನ ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಅಭಿಮಾನಿಗಳು ಮಿಸ್ ಮಾಡಲಿದ್ದಾರೆ.

ಶಾಹಿದ್ ಆಫ್ರಿದಿ:


ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ 1999ರಿಂದ 2015ರ ವರೆಗೆ 5 ವಿಶ್ವಕಪ್ ಟೂರ್ನಿ ಆಡಿದ್ದಾರೆ. ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ಸ್ಪಿನ್ ಬೌಲರ್ ಆಗಿ ಮಿಂಚಿದ್ದ ಅಫ್ರಿಧಿ ಅಭಿಮಾನಿಗಳ ನೆಚ್ಚಿನ ಆಟಗಾರ. 2017ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿರುವ ಅಫ್ರಿದಿಯನ್ನ 2019ರ ವಿಶ್ವಕಪ್ ಟೂರ್ನಿಯಲ್ಲಿ ಅಭಿಮಾನಿಗಳು ಮಿಸ್ ಮಾಡಲಿದ್ದಾರೆ.
 

click me!