ಟೀಂ ಇಂಡಿಯಾಗೆ ಸವಾಲಿನ ಗುರಿ ನೀಡಿದ ಆಫ್ರಿಕಾ

By Suvarna Web DeskFirst Published Feb 1, 2018, 8:56 PM IST
Highlights

ಒಂದು ಕಡೆ ನಿರಂತರ ವಿಕೆಟ್ ಉದುರುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಆಡಿದ ನಾಯಕ ಫಾಪ್ ಡುಪ್ಲೆಸಿಸ್ ವೃತ್ತಿಜೀವನದ 9ನೇ ಶತಕ ಸಿಡಿಸಿ ಸಂಭ್ರಮಿಸಿದರು.

ಡರ್ಬನ್(ಫೆ.01): ನಾಯಕ ಫಾಪ್ ಡು ಪ್ಲೆಸಿಸ್ ಭರ್ಜರಿ ಶತಕದ(120) ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ 270 ರನ್'ಗಳ ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾಗೆ ಆರಂಭದಲ್ಲೇ ಹಾಶೀಂ ಆಮ್ಲಾ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಡಿಕಾಕ್ ಹಾಗೂ ಡುಪ್ಲೆಸಿಸ್ 53 ರನ್'ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.  ಈ ವೇಳೆ ದಾಳಿಗಿಳಿದ ಯುಜುವೇಂದ್ರ ಚಾಹಲ್ ಆಫ್ರಿಕಾಗೆ ಮತ್ತೆ ಶಾಕ್ ನೀಡಿದರು. ಉತ್ತಮವಾಗಿ ಇನಿಂಗ್ಸ್ ಕಟ್ಟುತ್ತಿದ್ದ ಡಿಕಾಕ್ ಅಂಪೈರ್ ನೀಡಿದ ಕೆಟ್ಟ ತೀರ್ಮಾನದಿಂದ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಎಬಿಡಿ ಬದಲು ಸ್ಥಾನ ಪಡೆದ ಮಾರ್ಕ್'ರಮ್ ಕೆಟ್ಟ ಹೊಡೆತಕ್ಕೆ ಮುಂದಾಗಿ ಕೈಸುಟ್ಟುಕೊಂಡರು. ಈ 2 ವಿಕೆಟ್ ಚಾಹಲ್ ಪಾಲಾದವು. ಈ ವೇಳೆ ಆಫ್ರಿಕಾ 20.4 ಓವರ್'ಗಳಲ್ಲಿ 4 ವಿಕೆಟ್ ಕಳೆದುಕೊಂಡು 122 ರನ್ ಬಾರಿಸಿತ್ತು.

ಆನಂತರ ದಾಳಿಗಿಳಿದ ಚೈನಾಮ್ಯಾನ್ ಖ್ಯಾತಿಯ ಸ್ಪಿನ್ನರ್ ಕುಲ್ದೀಪ್ ಯಾದವ್ 2 ಓವರ್'ನಲ್ಲಿ ಡುಮಿನಿ ಹಾಗೂ ಮಿಲ್ಲರ್'ರನ್ನು ಪೆವಿಲಿಯನ್'ಗೆ ಅಟ್ಟುವ ಮೂಲಕ ತಂಡಕ್ಕೆ ಮೇಲಗೈ ಒದಗಿಸಿದರು. ಒಂದು ಕಡೆ ನಿರಂತರ ವಿಕೆಟ್ ಉದುರುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಆಡಿದ ನಾಯಕ ಫಾಪ್ ಡುಪ್ಲೆಸಿಸ್ ವೃತ್ತಿಜೀವನದ 9ನೇ ಶತಕ ಸಿಡಿಸಿ ಸಂಭ್ರಮಿಸಿದರು. ಇವರಿಗೆ ಕ್ರಿಸ್ ಮೋರಿಸ್ (37 ರನ್) ಉತ್ತಮ ಸಾಥ್ ನೀಡಿದರು. ಈ ಜೋಡಿಯನ್ನು ಮತ್ತೆ ಕುಲ್ದೀಪ್ ಬೇರ್ಪಡಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ಕಳೆದುಕೊಂಡು 269 ರನ್ ಕಲೆಹಾಕಿತು.

ಭಾರತ ಪರ ಕುಲ್ದೀಪ್ 3 ವಿಕೆಟ್ ಪಡೆದರೆ, ಚಾಹಲ್ 2 ಹಾಗೂ ವೇಗಿಗಳಾದ ಭುವಿ ಮತ್ತು ಬುಮ್ರಾ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 269/8

ಫಾಪ್ ಡುಪ್ಲೆಸಿಸ್: 120

ಕ್ರಿಸ್ ಮೋರಿಸ್: 37

ಕುಲ್ದೀಪ್ ಯಾದವ್: 34/3

(*ವಿವರ ಅಪೂರ್ಣ)

click me!