
ಲಂಡನ್(ಸೆ.04): ಭಾರತ ವಿರುದ್ಧ ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಅಲಿಸ್ಟೈರ್ ಕುಕ್‌ಗೆ ಗೆಲುವಿನ ವಿದಾಯ ಹೇಳಲು ನಿರ್ಧರಿಸಿದೆ. ಇದಕ್ಕಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಬಲಿಷ್ಠ ತಂಡಡವನ್ನ ಪ್ರಕಟಿಸಿದೆ.
5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ 13 ಕ್ರಿಕೆಟಿಗರ ತಂಡವನ್ನ ಪ್ರಕಟಿಸಿದೆ. ಜಾನಿ ಬೈರ್‌ಸ್ಟೋ ಇಂಜುರಿ ಕಾರಣದಿಂದ 4ನೇ ಟೆಸ್ಟ್ ಪಂದ್ಯದ ವೇಳೆ ಜೇಮ್ಸ್ ವಿನ್ಸ್‌ಗೆ ಅವಕಾಶ ನೀಡಲಾಗಿತ್ತು. ಇದೀಗ 5ನೇ ಟೆಸ್ಟ್ ಪಂದ್ಯದಿಂದ ಜೇಮ್ಸ್ ವಿನ್ಸ್ ಕೈಬಿಟ್ಟು, ಒಲ್ಲಿ ಪೋಪ್‌ಗೆ ಸ್ಥಾನ ನೀಡಲಾಗಿದೆ.
ವಿನ್ಸ್ ಹೊರತು ಪಡಿಸಿದರೆ, ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಜೋ ರೂಟ್ ತಂಡವನ್ನ ಮುನ್ನಡೆಸಲಿದ್ದಾರೆ. ಅಲಿಸ್ಟೈರ್ ಕುಕ್ ಅಂತಿಮ ಟೆಸ್ಟ್ ಪಂದ್ಯ ಆಡಲಿದ್ದಾರೆ. ಕುಕ್ ಹಾಗೂ ಕೆಟನ್ ಜೆನ್ನಿಂಗ್ಸ್ ಆರಂಭಿಕರಾಗಿ ವೈಫಲ್ಯ ಅನುಭವಿಸಿದ್ದರೂ, ಬದಲಿ ಆರಂಭಿಕರನ್ನ ಇಂಗ್ಲೆಂಡ್ ಆಯ್ಕೆ ಮಾಡಿಲ್ಲ.
ಇಂಗ್ಲೆಂಡ್ ತಂಡ:
ಜೋ ರೂಟ್(ನಾಯಕ), ಆಲಿಸ್ಟೈರ್ ಕುಕ್, ಮೊಯಿನ್ ಆಲಿ, ಜಾನಿ ಬೈರ್‌ಸ್ಟೋ, ಜೋಸ್ ಬಟ್ಲರ್, ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಕೆಟನ್ ಜೆನ್ನಿಂಗ್ಸ್, ಸ್ಯಾಮ್ ಕುರ್ರನ್, ಒಲ್ಲಿ ಪೋಪ್, ಆದಿಲ್ ರಶೀದ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.