ಮಹಿಳೆಯರ ವಿಶ್ವಕಪ್: ಹರಿಣಿಗಳನ್ನು ಮಣಿಸಿ ಇಂಗ್ಲೆಂಡ್ ಫೈನಲ್'ಗೆ

By Suvarna Web DeskFirst Published Jul 18, 2017, 10:33 PM IST
Highlights

2009ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ವಿಶ್ವಕಪ್'ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಟ್ರೋಪಿ ಗೆದ್ದಿದ್ದರು. ಈ ಬಾರಿಯು ಟ್ರೋಪಿ ಗೆಲ್ಲುವ ಸನಿಹದಲ್ಲಿದ್ದು, ಜು.20 ರಂದು ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ನಡೆಯುವ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರು ಜುಲೈ 23 ರ ಫೈನಲ್'ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದ್ದಾರೆ

ಬ್ರಿಸ್ಟಾಲ್(ಜು.18): ದಕ್ಷಿಣ ಆಫ್ರಿಕಾವನ್ನು 2 ವಿಕೇಟ್'ಗಳಿಂದ ಮಣಿಸಿದ ಅತಿಥೇಯ ಇಂಗ್ಲೆಂಡ್ ತಂಡದ ವನಿತೆಯರು 8 ವರ್ಷಗಳ ನಂತರ 2017ರ ಮಹಿಳಾ ವಿಶ್ವಕಪ್'ನ ಫೈನಲ್ ಪ್ರವೇಶಿಸಿದ್ದಾರೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಡಿ ವ್ಯಾನ್ ನಿಕೆರ್ಕ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಟಗಾರ್ತಿ  ಎಲ್ ವೋಲ್ವರ್ರ್ಡ್(66: 100 ಎಸತ, 8 ಬೌಂಡರಿ) ಹಾಗೂ ಮಧ್ಯಮ ಕ್ರಮಾಂಕದ ಆಟಗಾರ್ತಿ ಎಂ ಡು ಪ್ರೈಜ್ (76: 95 ಎಸತ, 5 ಬೌಂಡರಿ) ಅವರ ರಕ್ಷಣಾತ್ಮಕ ಆಟದ ನೆರವಿನಿಂದ  50 ಓವರ್'ಗಳಲ್ಲಿ 6 ವಿಕೇಟ್ ನಷ್ಟಕ್ಕೆ 218 ಮೊತ್ತ ಕಲೆ ಹಾಕಿದರು.

Latest Videos

ಸಾಧಾರಣ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 61 ರನ್ ಆಗುವಷ್ಟರ ವೇಳೆಗೆ 2 ವಿಕೇಟ್ ಕಳೆದುಕೊಂಡಿತು. ವಿಕೇಟ್ ಕೀಪರ್ ಎಸ್.ಟೇಲರ್ (54:76 ಎಸೆತ, 7 ಬೌಂಡರಿ) ನಾಯಕಿ ಹೆಚ್.ಸಿ. ನೈಟ್(30: 56 ಎಸೆತ, 2 ಬೌಂಡರಿ), ವಿಲ್ಸನ್(30: 38 ಎಸೆತ, 3 ಬೌಂಡರಿ),27(27 ಎಸೆತ: 3 ಬೌಂಡರಿ)ಅವರು ಸಮಯೋಚಿತ ಆಟವಾಡಿ 49.4 ಓವರ್'ಗಳಲ್ಲಿ ಗೆಲುವಿನ ದಡ ಮುಟ್ಟಿಸಿದರು.  ವಿಕೇಟ್ ಬೀಳುತ್ತಿದ್ದರು ಇಂಗ್ಲೆಂಡ್'ನ ಮಹಿಳೆಯರು ತಾಳ್ಮೆ ಕಳೆದುಕೊಳ್ಳದೆ ಆಟವಾಡಿದರು.     

2009ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ವಿಶ್ವಕಪ್'ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಟ್ರೋಪಿ ಗೆದ್ದಿದ್ದರು. ಈ ಬಾರಿಯು ಟ್ರೋಪಿ ಗೆಲ್ಲುವ ಸನಿಹದಲ್ಲಿದ್ದು, ಜು.20 ರಂದು ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ನಡೆಯುವ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರು ಜುಲೈ 23 ರ ಫೈನಲ್'ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದ್ದಾರೆ   

ಸ್ಕೋರ್

ದಕ್ಷಿಣ ಆಫ್ರಿಕಾ: 218/6 (50 ov)

ಇಂಗ್ಲೆಂಡ್:221/8(49.4)

ಇಂಗ್ಲೆಂಡ್'ಗೆ 2 ವಿಕೇಟ್'ಗಳ ಜಯ

ಪಂದ್ಯ ಶ್ರೇಷ್ಠೆ: ಎಸ್.ಜೆ. ಟೇಲರ್

click me!