ಭಾರತೀಯ ಬೌಲರ್'ಗಳ ದಾಳಿ : ಅಲ್ಪ ಮೊತ್ತಕ್ಕೆ ಇಂಗ್ಲೆಂಡ್ ಖಾಲಿ

Published : Aug 30, 2018, 10:57 PM ISTUpdated : Sep 09, 2018, 10:11 PM IST
ಭಾರತೀಯ ಬೌಲರ್'ಗಳ ದಾಳಿ : ಅಲ್ಪ ಮೊತ್ತಕ್ಕೆ ಇಂಗ್ಲೆಂಡ್ ಖಾಲಿ

ಸಾರಾಂಶ

ಸೌತಾಂಪ್ಟನ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಜೋ ರೂಟ್ ಪಡೆ ಜಸ್ಪ್ರೀತ್ ಬುಮ್ರಾ ಹಾಗೂ ಇಶಾಂತ್ ಶರ್ಮಾ ದಾಳಿಗೆ ತತ್ತರಿಸಿ ಕೇವಲ 36 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. 

ಸೌತಾಂಪ್ಟನ್(ಆ.30): ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ನಾಲ್ಕನೇ ಟೆಸ್ಟ್’ನ ಮೊದಲ ದಿನ ಕೇವಲ 246 ರನ್ ಬಾರಿಸಿ ಸರ್ವಪತನ ಕಂಡಿತು.  

ಸೌತಾಂಪ್ಟನ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಜೋ ರೂಟ್ ಪಡೆ ಜಸ್ಪ್ರೀತ್ ಬುಮ್ರಾ ಹಾಗೂ ಇಶಾಂತ್ ಶರ್ಮಾ ದಾಳಿಗೆ ತತ್ತರಿಸಿ ಕೇವಲ 36 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು.  ಅನಂತರ ಮಧ್ಯಮ ಕ್ರಮಾಂಕದ ಆಟಗಾರರನ್ನು ಮೊಹಮದ್ ಶಮಿ ಪೆವಿಲಿಯನ್ ಗೆ ಕಳುಹಿಸಿದರು.

ಕುರ್ರಾನ್ ಅರ್ಧ ಶತಕ [78] ಹಾಗೂ ಮೋಯಿನ್ ಅಲಿ [40] 9 ನೇ ವಿಕೆಟಿಗೆ 63 ರನ್ ಗಳ ಜೊತೆಯಾಟದ ನೆರವಿನಿಂದ  ತಂಡದ ಮೊತ್ತ 246 ರನ್ ಗಳಿಸಲು ಸಾಧ್ಯವಾಯಿತು.  ಭಾರತದ ಪರ ಶಮಿ. ಅಶ್ವಿನ್, ಇಶಾಂತ್ ತಲಾ 2 ಹಾಗೂ ಬುಮ್ರಾ 3 ವಿಕೇಟ್ ಪಡೆದು ಇಂಗ್ಲೆಂಡ್ ಯಶಸ್ವಿ ಬೌಲರ್ ಎನಿಸಿದರು.

ಸ್ಕೋರ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್   76.4 ಓವರ್ ಗಳಲ್ಲಿ 246
[ವಿವರ ಅಪೂರ್ಣ]

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಶ್‌ ದಯಾಳ್‌ ಬಳಿಕ ಮತ್ತೊಬ್ಬ ಆರ್‌ಸಿಬಿ ಪ್ಲೇಯರ್‌ ಸೋಶಿಯಲ್‌ ಮೀಡಿಯಾ ರಂಗಿನಾಟ ಬಯಲು..!
ಕಿವೀಸ್ ತ್ರಿವಳಿಗಳ ಆರ್ಭಟ: ಮೊದಲ ಪಂದ್ಯದಲ್ಲೇ ಭಾರತಕ್ಕೆ ಕಠಿಣ ಗುರಿ!