ಚೇತೇಶ್ವರ ದ್ವಿಶತಕ ವೈಭವ: ಬೃಹತ್‌ ಮೊತ್ತಕ್ಕೆ ಇಂಡಿಯಾ ಬ್ಲೂ ಡಿಕ್ಲೇರ್‌

By Internet DeskFirst Published Sep 11, 2016, 4:54 PM IST
Highlights

ಸೌರಾಷ್ಟ್ರ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ (ಅಜೇಯ 256: 363 ಎಸೆತ, 28 ಬೌಂಡರಿ) ದಾಖಲಿಸಿದ ವೈಭವದ ದ್ವಿಶತಕವಲ್ಲದೆ, ಮಧ್ಯಮ ಕ್ರಮಾಂಕಿತ ಆಟಗಾರ ಶೆಲ್ಡಾನ್‌ ಜಾಕ್ಸನ್‌ (134: 204 ಎಸೆತ, 15 ಬೌಂಡರಿ, 2 ಸಿಕ್ಸರ್‌) ಅವರ ಸೊಗಸಾದ ಶತಕದ ನೆರವಿನಿಂದ ಇಂಡಿಯಾ ಬ್ಲೂ ಬೃಹತ್‌ ಮೊತ್ತ ಪೇರಿಸಿ, ಇಂಡಿಯಾ ರೆಡ್‌ ವಿರುದ್ಧ ಮೇಲುಗೈ ಮೆರೆದಿದೆ.

ಸೌರಾಷ್ಟ್ರ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ (ಅಜೇಯ 256: 363 ಎಸೆತ, 28 ಬೌಂಡರಿ) ದಾಖಲಿಸಿದ ವೈಭವದ ದ್ವಿಶತಕವಲ್ಲದೆ, ಮಧ್ಯಮ ಕ್ರಮಾಂಕಿತ ಆಟಗಾರ ಶೆಲ್ಡಾನ್‌ ಜಾಕ್ಸನ್‌ (134: 204 ಎಸೆತ, 15 ಬೌಂಡರಿ, 2 ಸಿಕ್ಸರ್‌) ಅವರ ಸೊಗಸಾದ ಶತಕದ ನೆರವಿನಿಂದ ಇಂಡಿಯಾ ಬ್ಲೂ ಬೃಹತ್‌ ಮೊತ್ತ ಪೇರಿಸಿ, ಇಂಡಿಯಾ ರೆಡ್‌ ವಿರುದ್ಧ ಮೇಲುಗೈ ಮೆರೆದಿದೆ.

ಇಲ್ಲಿನ ಗ್ರೇಟರ್‌ ನೋಯ್ಡಾ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಹೊನಲು ಬೆಳಕಿನ ದುಲೀಪ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ಎರಡನೇ ದಿನದಂದು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 168.2 ಓವರ್‌ಗಳಲ್ಲಿ 693 ರನ್‌ಗಳಿಗೆ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿರುವ ಗೌತಮ್‌ ಗಂಭೀರ್‌ ನಾಯಕತ್ವದ ಇಂಡಿಯಾ ಬ್ಲೂ ವಿರುದ್ಧ, ಇನ್ನಿಂಗ್ಸ್‌ ಆರಂಭಿಸಿದ ಯುವರಾಜ್‌ ಸಿಂಗ್‌ ಸಾರಥ್ಯದ ಇಂಡಿಯಾ ರೆಡ್‌ ಎರಡನೇ ದಿನದಾಟದ ಅಂತ್ಯಕ್ಕೆ 9 ಓವರ್‌ಗಳಲ್ಲಿ 16 ರನ್‌ಗೆ ಎರಡು ಪ್ರಮುಖ ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿದೆ. ಇನ್ನೂ 677 ರನ್‌ ಹಿನ್ನಡೆಯಲ್ಲಿರುವ ಇಂಡಿಯಾ ರೆಡ್‌ ಪರ ಶಿಖರ್‌ ಧವನ್‌ (14) ಮತ್ತು ನಾಯಕ ಯುವರಾಜ್‌ ಸಿಂಗ್‌ (0) ಕ್ರೀಸ್‌ನಲ್ಲಿದ್ದಾರೆ.

ಆರಂಭಿಕ ಅಭಿನವ್‌ ಮುಕುಂದ್‌ (2) ಮೊದಲ ಓವರ್‌ನ ಎರಡನೆ ಎಸೆತದಲ್ಲೇ ವೇಗಿ ಪಂಕಜ್‌ ಸಿಂಗ್‌ ದಾಳಿಯಲ್ಲಿ ಎಲ್‌ಬಿ ಬಲೆಗೆ ಬಿದ್ದು ಹೊರನಡೆದರೆ, ಸುದೀಪ್‌ ಚಟರ್ಜಿ (0) ಇದೇ ಪಂಕಜ್‌ಗೆ ಬೌಲ್ಡ್‌ ಆಗಿ ಕ್ರೀಸ್‌ ತೊರೆದರು.

ಚೇತೇಶ್ವರ-ಜಾಕ್ಸನ್‌ ಮನೋಜ್ಞ ಆಟ

ಇನ್ನು 3 ವಿಕೆಟ್‌ಗೆ 362 ರನ್‌ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಇಂಡಿಯಾ ಬ್ಲೂ, ನಿರೀಕ್ಷೆಯಂತೆಯೇ ಬೃಹತ್‌ ಮೊತ್ತ ಪೇರಿಸಿತು. ಕ್ರಮವಾಗಿ 111 ಮತ್ತು 55 ರನ್‌ ಗಳಿಸಿದ್ದ ಚೇತೇಶ್ವರ ಪೂಜಾರ ಮತ್ತು ದಿನೇಶ್‌ ಕಾರ್ತಿಕ್‌ ಪೈಕಿ ವಿಕೆಟ್‌ಕೀಪರ್‌ ಕಾರ್ತಿಕ್‌ ವೈಫಲ್ಯತೆ ಅನುಭವಿಸಿದರು. ಪ್ರದೀಪ್‌ ಸಂಗ್ವಾನ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿ ಕ್ರೀಸ್‌ ತೊರೆಯುವಂತೆ ಮಾಡಿದರು. ಆದರೆ, ಈ ಹಂತದಲ್ಲಿ ಪೂಜಾರಗೆ ಜತೆಯಾದ ಶೆಲ್ಡಾನ್‌ ಜಾಕ್ಸನ್‌ ಇಂಡಿಯಾ ರೆಡ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಈ ಜೋಡಿ ಐದನೇ ವಿಕೆಟ್‌ಗೆ 243 ರನ್‌ ಕಲೆಹಾಕಿ ತಂಡದ ಮೊತ್ತವನ್ನು ಸವಾಲಿನತ್ತ ಕೊಂಡೊಯ್ದರು. ಅತ್ಯದ್ಭುತ ಪ್ರದರ್ಶನ ನೀಡಿದ ಈ ಜೋಡಿಯನ್ನು ಅಮಿತ್‌ ಮಿಶ್ರಾ ಬೇರ್ಪಡಿಸಿದರು. 150ನೇ ಓವರ್‌ನ ಐದನೇ ಎಸೆತದಲ್ಲಿ ಮಿಶ್ರಾ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ಜಾಕ್ಸನ್‌ ಹೊರಬಿದ್ದರೆ, ಬಳಿಕ ಬಂದ ರವೀಂದ್ರ ಜಡೇಜಾ (48) ಕೂಡ ಯುವಿ ಪಡೆಯನ್ನು ಕಾಡಿದರು. ಆದರೆ, ಪೂಜಾರ ಅವರನ್ನು ಔಟ್‌ ಮಾಡಲು ಕಡೆಗೂ ಯುವಿ ಪಡೆ ವಿಫಲವಾಯಿತು.

ಸಂಕ್ಷಿಪ್ತ ಸ್ಕೋರ್‌

ಇಂಡಿಯಾ ಬ್ಲೂ ಮೊದಲ ಇನ್ನಿಂಗ್ಸ್‌

168.2 ಓವರ್‌ಗಳಲ್ಲಿ 6 ವಿಕೆಟ್‌ಗೆ 693

(ಚೇತೇಶ್ವರ ಪೂಜಾರ 256*, ಶೆಲ್ಡಾನ್‌ ಜಾಕ್ಸನ್‌ 134; ಅಮಿತ್‌ ಮಿಶ್ರಾ 171ಕ್ಕೆ 2)

ಇಂಡಿಯಾ ರೆಡ್‌ ಮೊದಲ ಇನ್ನಿಂಗ್ಸ್‌

9 ಓವರ್‌ಗಳಲ್ಲಿ 2 ವಿಕೆಟ್‌ಗೆ 16

(ಅಭಿನವ್‌ ಮುಕುಂದ್‌ 2, ಶಿಖರ್‌ ಧವನ್‌ ಬ್ಯಾಟಿಂಗ್‌ 14, ಯುವರಾಜ್‌ ಸಿಂಗ್‌ ಬ್ಯಾಟಿಂಗ್‌ 00; ಪಂಕಜ್‌ ಸಿಂಗ್‌ 12ಕ್ಕೆ 2)

click me!