
ರಿಯೊ ನಗರಿಯಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಎರಡನೇ ದಿನದಂದು ಪದಕ ಗೆದ್ದ ಸಾಧಕರನ್ನು ದೇಶದ ನಂ.1 ಮಹಿಳಾ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಕೊಂಡಾಡಿದ್ದಾರೆ.
‘‘ನಾನು ಸಾಧಿಸಲು ಸಾಧ್ಯವಾಗದ್ದನ್ನು ನೀವು ಸಾಧಿಸಿ ತೋರಿಸಿರುವಿರಿ. ವೈಯಕ್ತಿಕವಾಗಿ ನಾನು ನಿಮ್ಮಿಬ್ಬರನ್ನೂ ಭೇಟಿಯಾಗಿ ಅಭಿನಂದಿಸ ಬಯಸುತ್ತೇನೆ’’ ಎಂದು ಚಿನ್ನ ಗೆದ್ದ ಮರಿಯಪ್ಪನ್ ತಂಗವೇಲು ಹಾಗೂ ಕಂಚು ವಿಜೇತ ವರುಣ್ ಸಿಂಗ್ ಭಾಟಿಯನ್ನು ಉದ್ದೇಶಿಸಿ ದೀಪಾ ಹೇಳಿದ್ದಾರೆ.
ಇನ್ನು ಆಕೆಯ ಕೋಚ್ ಬಿಶ್ವೇಶ್ವರ್ ನಂದಿ, ‘‘ನೀವು ಭಾರತೀಯರಾದ ನಾವು ಹೆಮ್ಮೆಪಡುವಂತೆ ಮಾಡಿದ್ದೀರಿ. ನಿಮ್ಮ ದೆಸೆಯಿಂದ ನಾನೊಬ್ಬ ಭಾರತೀಯ ಎಂದುಕೊಳ್ಳಲು ಹೆಮ್ಮೆಪಡುತ್ತೇನೆ’’ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.