ವಿಶ್ವಕಪ್ 2019 - ದುಬೈನಲ್ಲಿ ಕಬಡ್ಡಿ ಕಬಡ್ಡಿ ಕಬಡ್ಡಿ ?

First Published Jun 26, 2018, 11:05 AM IST
Highlights

‘ಈವರೆಗೆ ನಡೆದಿರುವ ವಿಶ್ವಕಪ್‌ ಕಬಡ್ಡಿಯ 3 ಆವೃತ್ತಿಗಳಿಗೆ ಭಾರತವೇ ಆತಿಥ್ಯ ವಹಿಸಿದೆ. ಜಾಗತಿಕ ಮಟ್ಟಕ್ಕೆ ಕ್ರೀಡೆಯನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಹೊರ ದೇಶದಲ್ಲಿ ಟೂರ್ನಿ ಆಯೋಜಿಸುವ ಚಿಂತನೆ ಇದೆ’ ಎಂದು ಐಕೆಎಫ್‌ ಅಧ್ಯಕ್ಷ ಜನಾರ್ಧನ ಸಿಂಗ್‌ ಗೆಹ್ಲೋಟ್‌ ಹೇಳಿದ್ದಾರೆ.

ದುಬೈ[ಜೂ.26]: 2019ರಲ್ಲಿ ನಡೆಯಲಿರುವ 4ನೇ ಆವೃತ್ತಿಯ ಕಬಡ್ಡಿ ವಿಶ್ವಕಪ್‌ಗೆ ದುಬೈ ಆತಿಥ್ಯ ವಹಿಸುವ ಸಾಧ್ಯತೆ ಇದೆ. ಜೂನ್‌ 29ರಂದು ನಡೆಯಲಿರುವ ಅಂತಾರಾಷ್ಟ್ರೀಯ ಕಬಡ್ಡಿ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ವಿಷಯ ಅಂತಿಮಗೊಳ್ಳಲಿದೆ. 

‘ಈವರೆಗೆ ನಡೆದಿರುವ ವಿಶ್ವಕಪ್‌ ಕಬಡ್ಡಿಯ 3 ಆವೃತ್ತಿಗಳಿಗೆ ಭಾರತವೇ ಆತಿಥ್ಯ ವಹಿಸಿದೆ. ಜಾಗತಿಕ ಮಟ್ಟಕ್ಕೆ ಕ್ರೀಡೆಯನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಹೊರ ದೇಶದಲ್ಲಿ ಟೂರ್ನಿ ಆಯೋಜಿಸುವ ಚಿಂತನೆ ಇದೆ’ ಎಂದು ಐಕೆಎಫ್‌ ಅಧ್ಯಕ್ಷ ಜನಾರ್ಧನ ಸಿಂಗ್‌ ಗೆಹ್ಲೋಟ್‌ ಹೇಳಿದ್ದಾರೆ.

2004ರಲ್ಲಿ ನಡೆದ ಮೊದಲ ಕಬಡ್ಡಿ ವಿಶ್ವಕಪ್’ಗೆ ಮುಂಬೈ ಆತಿಥ್ಯ ವಹಿಸಿತ್ತು. 2007ರಲ್ಲಿ ನಡೆದ ಎರಡನೇ ವಿಶ್ವಕಪ್ ಟೂರ್ನಿಯು ಮಹರಾಷ್ಟ್ರದ ಪಾನ್ವೆಲ್’ನಲ್ಲಿ ಜರುಗಿತ್ತು. ಇನ್ನು 12 ರಾಷ್ಟ್ರಗಳು ಪಾಲ್ಗೊಂಡಿದ್ದ ಮೂರನೇ ಕಬಡ್ಡಿ ವಿಶ್ವಕಪ್ ಟೂರ್ನಿಗೆ ಅಹಮದಾಬಾದ್ ಆತಿಥ್ಯ ವಹಿಸಿತ್ತು.  

click me!