ದ್ರಾವಿಡ್ ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್ ನಿರಾಕರಿಸಲು ಕಾರಣವೇನು ಗೊತ್ತೆ ?

By Suvarna Web DeskFirst Published Jan 25, 2017, 3:43 PM IST
Highlights

ದ್ರಾವಿಡ್ ಅವರ ಸಾಧನೆಗೆ ಪುರಸ್ಕಾರ ನೀಡುವ ಸಲುವಾಗಿ ಬೆಂಗಳೂರು ವಿಶ್ವವಿದ್ಯಾಲಯವು ಈ ವರ್ಷ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿತ್ತು

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್  ಗೌರವ ಡಾಕ್ಟರೇಟ್'ಅನ್ನು ನಿರಾಕರಿಸಿದ್ದಾರೆ. ದ್ರಾವಿಡ್ ಅವರ ಸಾಧನೆಗೆ ಪುರಸ್ಕಾರ ನೀಡುವ ಸಲುವಾಗಿ ಬೆಂಗಳೂರು ವಿಶ್ವವಿದ್ಯಾಲಯವು ಈ ವರ್ಷ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿತ್ತು. ಆದರೆ ಈ ಗೌರವವನ್ನು ಭಾರತದ ಗೋಡೆ ಎಂದು ಖ್ಯಾತರಾಗಿದ್ದ ದ್ರಾವಿಡ್ ನಿರಾಕರಿಸಿದ್ದಾರೆ.

ಅವರು ನಿರಾಕರಿಸಲು ಕಾರಣ ಇಷ್ಟೆ 'ತಾವು ಏನೇ ಸಾಧನೆ ಮಾಡಿದರೂ ಅದಕ್ಕೆ ತಕ್ಕುದಾದ ಶ್ರಮವಿರಬೇಕು. ಸುಖಾಸುಮ್ಮನೆ ಯಾವುದೇ ಪ್ರಶಸ್ತಿ ಗೌರವಗಳು ಬೇಡ. ಡಾಕ್ಟರೇಟ್ ಪಡೆಯಬೇಕಾದರೆ ಓದಿಯೇ ಪಡೆಯುತ್ತೇನೆ' ಎಂದು ಪ್ರಶಸ್ತಿ ಬೇಡ ಎಂದಿದ್ದಾರೆ. ಈ ಮೊದಲು ಕಲಬುರಗಿ ವಿವಿ ಕೂಡ ಡಾಕ್ಟರೇಟ್ ಘೋಷಿಸಿತ್ತು. ಅದನ್ನು ಕೂಡ ದ್ರಾವಿಡ್ ತಿರಸ್ಕರಿಸಿದ್ದರು.

click me!