
ಇಲ್ಲಿನ ಅಲನ್ ಬಾರ್ಡರ್ ಫೀಲ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 159 ರನ್ ಗುರಿ ಪಡೆದಿದ್ದ ಆತಿಥೇಯ ಆಸ್ಪ್ರೇಲಿಯಾ ‘ಎ’ ತಂಡ, ಮೂರನೇ ದಿನದಾಟದ ಅಂತ್ಯಕ್ಕೆ 59 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ, ಪಂದ್ಯದ ಕೊನೆಯ ದಿನದಂದು ಎಚ್ಚರಿಕೆಯಿಂದ ಆಡಿದ ಆತಿಥೇಯರು 57.3 ಓವರ್‌ಗಳಲ್ಲಿ 7 ವಿಕೆಟ್‌ಗೆ 161 ರನ್ ಪೇರಿಸಿ ಜಯದ ನಗೆಬೀರಿದರು. ಇದರಿಂದ ಎರಡು ಅನಧಿಕೃತ ಟೆಸ್ಟ್ ಸರಣಿಯಲ್ಲಿ ಆಸ್ಪ್ರೇಲಿಯಾ ‘ಎ’ ತಂಡ 1-0 ಮುನ್ನಡೆ ಕಂಡಂತಾಗಿದೆ. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ 87 ರನ್ ಗಳಿಸಿ ತಂಡಕ್ಕೆ ಆಸರೆಯಾದ ಪೀಟರ್ ಹ್ಯಾಂಡ್‌ಸ್ಕಾಂಬ್ ಪಂದ್ಯಶ್ರೇಷ್ಠರೆನಿಸಿದರು.
ಕಾಡಿದ ಬ್ಯಾಂಕ್ರಫ್ಟ್
ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪ ಮೊತ್ತ ಕಲೆಹಾಕಿದರೂ, ಬೌಲರ್‌ಗಳ ದಿಟ್ಟಆಟದಿಂದಾಗಿ ಪ್ರವಾಸಿ ತಂಡ 2 ರನ್ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು. ಹೀಗಾಗಿ ಪಂದ್ಯದ ನಾಲ್ಕನೇ ಹಾಗೂ ಕೊನೆಯ ದಿನದಂದು ಇದೇ ಬೌಲರ್‌ಗಳ ಮೇಲೆ ವಿಶ್ವಾಸ ಇರಿಸಿಕೊಳ್ಳಲಾಗಿತ್ತು. ಆದರೆ, 16 ರನ್ ಗಳಿಸಿ ವೆಬ್‌ಸ್ಟರ್ (6) ಜತೆಗೆ ಔಟಾಗದೆ ಉಳಿದಿದ್ದ ಬ್ಯಾಕ್ರಂಫ್ಟ್ ಅಕ್ಷರಶಃ ನಾಯಕನ ಆಟವಾಡಿ ಭಾರತಕ್ಕೆ ಸೋಲುಣಿಸಿದರು.
ಅತ್ಯಂತ ಸಹನಾಮಯಿಯಾಗಿ ಬ್ಯಾಟ್ ಬೀಸಿ ವಿಕೆಟ್ ಕಾಯ್ದುಕೊಂಡ ಬ್ಯಾಂಕ್ರಫ್ಟ್‌ಗೆ ವೆಬ್‌ಸ್ಟರ್ (30) ಕೆಲಹೊತ್ತು ಸಾಥ್ ನೀಡಿದರು. ಈ ಜೋಡಿಯನ್ನು ಬೇರ್ಪಡಿಸಲು ನಮಾನ್ ಓಜಾ, ಬೌಲಿಂಗ್‌ನಲ್ಲಿ ನಾನಾ ಬದಲಾವಣೆ ತಂದರಾದರೂ, ಅದು ತ್ವರಿತಗತಿಯಲ್ಲಿ ಕೈಗೂಡಲಿಲ್ಲ. ಇದು ಪ್ರವಾಸಿ ತಂಡದ ಅಸಹನೀಯತೆ ಹೆಚ್ಚಿಸಿತು. ಆದಾಗ್ಯೂ ಇನ್ನಿಂಗ್ಸ್‌ನ 42ನೇ ಓವರ್‌ನ ಕೊನೆಯ ಎಸೆತದಲ್ಲಿ ವೇಗಿ ಏರಾನ್ ವರುಣ್ ಅವರಿಂದ ವೆಬ್‌ಸ್ಟರ್ ಎಲ್‌ಬಿಡಬ್ಲ್ಯೂ ಆಗಿ ಕ್ರೀಸ್ ತೊರೆದರು. ಆನಂತರ ವೈಟ್‌ಮನ್ (14) ಮತ್ತು ಚಾದ್ ಸಾಯೆರ್ಸ್ (15) ಕೂಡ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆದರೆ, ಅಷ್ಟರಲ್ಲಾಗಲೇ ತಂಡವನ್ನು ಜಯದ ದಡ ತಲುಪಿಸುವಲ್ಲಿ ಬ್ಯಾಂಕ್ರಫ್ಟ್ ಯಶಸ್ವಿಯಾಗಿದ್ದರು.
ಪ್ರವಾಸಿ ತಂಡದ ಪರ ವೇಗಿ ಶಾರ್ದೂಲ್ ಠಾಕೂರ್ 42ಕ್ಕೆ 3 ವಿಕೆಟ್ ಗಳಿಸಿದರೆ, ವರುಣ್ ಏರಾನ್ 52ಕ್ಕೆ 2, ಹಾರ್ದಿಕ್ ಪಾಂಡ್ಯ 30ಕ್ಕೆ 1 ಮತ್ತು ಜಯಂತ್ ಯಾದವ್ 19ಕ್ಕೆ 1 ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಇಂಡಿಯಾ ಎ ಮೊದಲ ಇನ್ನಿಂಗ್ಸ್: 230
ಆಸ್ಪ್ರೇಲಿಯಾ ಎ ಮೊದಲ ಇನ್ನಿಂಗ್ಸ್: 228
ಇಂಡಿಯಾ ಎ ದ್ವಿತೀಯ ಇನ್ನಿಂಗ್ಸ್: 156
ಆಸ್ಪ್ರೇಲಿಯಾ ಎ ದ್ವಿತೀಯ ಇನ್ನಿಂಗ್ಸ್
57.3 ಓವರ್‌ಗಳಲ್ಲಿ 7 ವಿಕೆಟ್‌ಗೆ 161
(ಕೆಮರೂನ್ ಬ್ಯಾಂಕ್ರಫ್ಟ್ ಅಜೇಯ 58, ಬಿ.ಜೆ. ವೆಬ್‌ಸ್ಟರ್ 30; ಶಾರ್ದೂಲ್ 42ಕ್ಕೆ 3)
ಫಲಿತಾಂಶ: ಆಸ್ಪ್ರೇಲಿಯಾ ಎ ತಂಡಕ್ಕೆ 3 ವಿಕೆಟ್ ಜಯ ಮತ್ತು ಎರಡು ಅನಧಿಕೃತ ಟೆಸ್ಟ್‌ನಲ್ಲಿ 1-0 ಮುನ್ನಡೆ
ಪಂದ್ಯಶ್ರೇಷ್ಠ: ಪೀಟರ್ ಹ್ಯಾಂಡ್‌ಸ್ಕಾಂಬ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.