ಜಿಮ್ನಾಸ್ಟಿಕ್‌ನಲ್ಲಿ ದೀಪಾ ಕರ್ಮಾಕರ್‌ ಏಷ್ಯನ್‌ ಚಾಂಪಿಯನ್‌; ಈ ಸಾಧನೆ ಮಾಡಿದ ಮೊದಲ ಭಾರತೀಯ ಪಟು!

By Kannadaprabha News  |  First Published May 27, 2024, 8:55 AM IST

30ರ ದೀಪಾ ಭಾನುವಾರ ಮಹಿಳೆಯರ ವಾಲ್ಟ್ ಸ್ಪರ್ಧೆಯಲ್ಲಿ ಸರಾಸರಿ 13.566 ಅಂಕಗಳೊಂದಿಗೆ ಅಗ್ರಸ್ಥಾನಿಯಾದರು. ಉತ್ತರ ಕೊರಿಯಾದ ಕಿಮ್‌ ಸನ್‌ ಹ್ಯಾಂಗ್‌(13.466) ಬೆಳ್ಳಿ, ಕ್ಯೊಂಗ್‌ ಬ್ಯೊಲ್‌(12.966) ಕಂಚಿಗೆ ತೃಪ್ತಿಪಟ್ಟುಕೊಂಡರು. 


ತಾಷ್ಕೆಂಟ(ಉಜ್ಬೇಕಿಸ್ತಾನ): ಏಷ್ಯನ್‌ ಜಿಮ್ನಾಸ್ಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಅಥ್ಲೀಟ್‌ ದೀಪಾ ಕರ್ಮಾಕರ್‌ ಚಿನ್ನ ತಮ್ಮದಾಗಿಸಿಕೊಂಡಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

30ರ ದೀಪಾ ಭಾನುವಾರ ಮಹಿಳೆಯರ ವಾಲ್ಟ್ ಸ್ಪರ್ಧೆಯಲ್ಲಿ ಸರಾಸರಿ 13.566 ಅಂಕಗಳೊಂದಿಗೆ ಅಗ್ರಸ್ಥಾನಿಯಾದರು. ಉತ್ತರ ಕೊರಿಯಾದ ಕಿಮ್‌ ಸನ್‌ ಹ್ಯಾಂಗ್‌(13.466) ಬೆಳ್ಳಿ, ಕ್ಯೊಂಗ್‌ ಬ್ಯೊಲ್‌(12.966) ಕಂಚಿಗೆ ತೃಪ್ತಿಪಟ್ಟುಕೊಂಡರು. 

History created at The Asian Gymnastics Championship 🇺🇿🥳

Dipa Karmakar becomes the 1⃣st 🇮🇳 gymnast to win🥇at this prestigious championship, topping the podium in women's vault.

Earlier, her best performance at the event was when she gave us a🥉in 2015!

Inspirational, Dipa!… pic.twitter.com/nNV1nTqYdT

— SAI Media (@Media_SAI)

Latest Videos

undefined

2016ರ ರಿಯೋ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದು ಗಮನ ಸೆಳೆದಿದ್ದ ದೀಪಾ, 2015ರ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದರು. ಉಳಿದಂತೆ ಭಾರತದ ಆಶಿಶ್‌ ಕುಮಾರ್ 2015ರಲ್ಲಿ ಏಷ್ಯನ್‌ ಕೂಟದ ಫ್ಲೋರ್‌ ಎಕ್ಸರ್‌ಸೈಸ್‌ನಲ್ಲಿ ಕಂಚು, 2019, 2022ರಲ್ಲಿ ಪ್ರಣತಿ ನಾಯಕ್‌ ವಾಲ್ಟ್‌ ವಿಭಾಗದಲ್ಲಿ ಕಂಚು ಜಯಿಸಿದ್ದರು.

ಮಲೇಷ್ಯಾ ಮಾಸ್ಟರ್ಸ್‌: ಫೈನಲ್‌ನಲ್ಲಿ ಮುಗ್ಗರಿಸಿದ ಸಿಂಧುಗೆ ಮತ್ತೆ ಟ್ರೋಫಿ ಮಿಸ್‌!

ಕೌಲಾಲಂಪುರ: 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತ ಭಾರತದ ತಾರಾ ಶಟ್ಲರ್‌ ಪಿ.ವಿ. ಸಿಂಧು ಅವರ 2 ವರ್ಷಗಳ ಬಳಿಕ ಬಿಡಬ್ಲ್ಯುಎಫ್‌ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದೆ. ಭಾನುವಾರ ವಿಶ್ವ ನಂ.15 ಸಿಂಧು ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಸೋತು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಅವರು ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ವಿಶ್ವ ನಂ.7, ಚೀನಾದ ವ್ಯಾಂಗ್‌ ಝಿ ಯಿ ವಿರುದ್ಧ 21-16, 5-21, 16-21ರಲ್ಲಿ ಸೋಲನುಭವಿಸಿದರು. ಮೊದಲ ಗೇಮ್‌ ಗೆದ್ದು, ನಿರ್ಣಾಯಕ 3ನೇ ಗೇಮ್‌ನಲ್ಲಿ ಒಂದು ಹಂತದಲ್ಲಿ 11-3ರಿಂದ ಮುಂದಿದ್ದ ಸಿಂಧು ಬಳಿಕ ಆಘಾತಕಾರಿ ಸೋಲಿನೊಂದಿಗೆ ಪ್ರಶಸ್ತಿ ಕೈಚೆಲ್ಲಿದರು.

ಸಿಂಧು 2022ರಲ್ಲಿ ಸಿಂಗಾಪೂರ ಓಪನ್‌, ಬಳಿಕ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ಗೆದ್ದಿದ್ದರು. ಆ ಬಳಿಕ ಯಾವುದೇ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ವರ್ಷ ಅವರು ಮ್ಯಾಡ್ರಿಡ್‌ ಸ್ಪೇನ್‌ ಮಾಸ್ಟರ್ಸ್‌ನಲ್ಲಿ ರನ್ನರ್‌-ಅಪ್‌ ಆಗಿದ್ದರು. ಈ ವರ್ಷ ಮೊದಲ ಸಲ ಫೈನಲ್‌ ಪ್ರವೇಶಿಸಿದ್ದ ಸಿಂಧುಗೆ ಪ್ರಶಸ್ತಿ ಗೆಲ್ಲಲು ಆಗಲಿಲ್ಲ.
 

click me!