
ಕಜಾನ್(ಜು.01): ಫ್ರಾನ್ಸ್ ವಿರುದ್ಧ ಪ್ರಿ ಕ್ವಾರ್ಟರ್‌ನಲ್ಲಿ ಅರ್ಜೆಂಟೀನಾ 2-1ರ ಮುನ್ನಡೆ ಸಾಧಿಸಿದಾಗ ಕುಣಿದು ಕುಪ್ಪಳಿಸುತ್ತಿದ್ದ, ಅರ್ಜೆಂಟೀನಾದ ಮಾಜಿ ನಾಯಕ ಡಿಗೋ ಮರಡೋನಾ ತಂಡ ಸೋಲುತ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ.
ಅರ್ಜೆಂಟೀನಾ ಪ್ರತಿ ಪಂದ್ಯಕ್ಕೂ ಹಾಜರಾಗಿದ್ದ ಡಿಗೋ ಮರಡೋನಾ, ಗ್ಯಾಲರಿಯಲ್ಲಿ ಕುಳಿತು ತಂಡಕ್ಕೆ ಬೆಂಬಲ ನೀಡಿದ್ದರು. ಅರ್ಜೆಂಟೀನಾ ತಂಡದ ಪ್ರತಿ ಗೆಲುವು ಹಾಗೂ ಗೋಲುಗಳನ್ನ ಅಸ್ವಾದಿಸಿದ ಮರಡೋನಾಗೆ ಇದೀಗ ಫ್ರಾನ್ಸ್ ವಿರುದ್ಧದ ಸೋಲು ತೀವ್ರ ನಿರಾಸೆ ತಂದಿದೆ.
ಮರಡೋನಾ ಕಣ್ಣೀರಿಡುತ್ತಿರುವ ಫೋಟೋ ಹಾಗೂ ವಿಡೀಯೋಗಳು ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಈ ವಿಶ್ವಕಪ್‌ನಲ್ಲಿ ಮರಡೋನಾ ನೀಡಿದಷ್ಟುಮನರಂಜನೆಯನ್ನು ಮೆಸ್ಸಿ ನೀಡಲಿಲ್ಲ ಎಂದು ಹಲವರು ಟೀಕಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.