
ನವದೆಹಲಿ(ಜೂ.15): ಟೀಂ ಇಂಡಿಯಾದ ತಂಡದಲ್ಲಿ ವಿರಾಟ್ ಕೊಹ್ಲಿ ಸದ್ಯ ಅತ್ಯುತ್ತಮ ಫಿಟ್ನೆಸ್ ಕಾಪಾಡಿಕೊಂಡು ಬಂದಿರುವ ಆಟಗಾರ. ವಿರಾಟ್ ಫಿಟ್ನೆಸ್‌ಗಾಗಿ ತಮ್ಮ ಅತ್ಯಂತ ಇಷ್ಟವಾದ ಚಿಕನ್ ಕೂಡ ಸೇವನೆ ಮಾಡುವುದನ್ನು ಬಿಟ್ಟು ಬಿಟ್ಟಿದ್ದಾರೆ. ಕಳೆದ ಐದು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಚಿಕನ್ ಮುಟ್ಟಿಲ್ಲ. ಅಂತೇ ಇದೀಗ ಕೊಹ್ಲಿಯಿಂದ ಸ್ಪೂರ್ತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಚಿಕನ್ ತಿನ್ನುವುದನ್ನು ಬಿಟ್ಟು ಬಿಟ್ಟಿದ್ದಾರೆ.
ಧೋನಿ ಕೂಡ ತಮ್ಮ ಫಿಟ್ನೆಸ್ ಕುರಿತು ಅತ್ಯಂತ ಜಾಗರೂಕರಾಗಿರುತ್ತಾರೆ. ಟೀಂ ಇಂಡಿಯಾದ ಇತರೆಲ್ಲ ಆಟಗಾರರಿಗಿಂತ ಅತ್ಯಂತ ಚುರುಕಾಗಿ ಮತ್ತು ಪಾದರಸದಂತೆ ಧೋನಿ ಮೈದಾನದಲ್ಲಿ ಮಿಂಚುತ್ತಾರೆ. ದೈಹಿಕ ಶ್ರಮಕ್ಕೆ ಭಾರೀ ಒತ್ತು ಕೊಡುವ ಧೊನಿ, 2019 ರ ವಿಶ್ವಕಪ್ ಗೆಲ್ಲುವಲ್ಲಿ ತಮ್ಮ ಪಾತ್ರ ಅತ್ಯಂತ ಮಹತ್ವದ್ದು ಎಂಬುದನ್ನು ಅರಿತಿದ್ದಾರೆ.
ಎಂಎಸ್ ಧೋನಿ 2014ರಲ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಅಲ್ಲಿಂದ ತಮ್ಮ ಡಯೇಟ್ ಅನ್ನು ಕಟ್ಟು ನಿಟ್ಟು ಮಾಡಿಕೊಂಡಿರುವ ಧೋನಿ ಸಹ ಚಿಕನ್ ತಿನ್ನುವುದನ್ನು ಬಿಟ್ಟುಬಿಟ್ಟಿದ್ದಾರೆ. ಇದಕ್ಕೆ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಾವಳಿ ಕಾರಣ ಎಂದು ಹೇಳಲಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.