
ಕಾರ್ಡಿಫ್[ಮೇ.30]: ಎಂ.ಎಸ್.ಧೋನಿ ನಾಯಕತ್ವ ತ್ಯಜಿಸಿದರೂ ಅವರೊಳಗಿರುವ ನಾಯಕ ಮಾತ್ರ ಸದಾ ಜಾಗೃತನಾಗಿರುತ್ತಾನೆ. ಮಂಗಳವಾರ ಇಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ಬ್ಯಾಟಿಂಗ್ ನಿಲ್ಲಿಸಿ ಬಾಂಗ್ಲಾದೇಶದ ಬೌಲರ್ ಸಬ್ಬೀರ್ ರಹಮಾನ್‌ಗೆ ಫೀಲ್ಡರ್‌ನ ಕ್ಷೇತ್ರ ಬದಲಿಸುವಂತೆ ಸಲಹೆ ನೀಡಿದರು.
ಇನ್ನಿಂಗ್ಸ್‌ನ 40ನೇ ಓವರ್ ವೇಳೆ ಬಾಂಗ್ಲಾ ಫೀಲ್ಡರ್ ಶಾರ್ಟ್ ಮಿಡ್ ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಆ ಕ್ಷೇತ್ರದಲ್ಲಿ ಫೀಲ್ಡಿಂಗ್ ಮಾಡುವುದು ಅನಗತ್ಯ ಎನ್ನುವುದನ್ನು ಮನಗಂಡ ಧೋನಿ ಬ್ಯಾಟಿಂಗ್ ನಿಲ್ಲಿಸಿ, ಸಬ್ಬೀರ್‌ಗೆ ಫೀಲ್ಡರ್‌ನನ್ನು ಸ್ಕ್ವೇರ್ ಲೆಗ್‌ಗೆ ಕಳುಹಿಸುವಂತೆ ಸೂಚಿಸಿದರು. ಧೋನಿಯ ಸಲಹೆಗೆ ಕಿವಿಕೊಟ್ಟ ಸಬ್ಬೀರ್ ಫೀಲ್ಡಿಂಗ್‌ನಲ್ಲಿ ಬದಲಾವಣೆ ಮಾಡಿದರು. ಸಾಮಾಜಿಕ ತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಧೋನಿ ವಿಶ್ವ ನಾಯಕ ಎಂದು ಅಭಿಮಾನಿಗಳು ಹೊಗಳಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಧೋನಿ ಭರ್ಜರಿ ಶತಕ ಸಿಡಿಸುವ ಮೂಲಕ ಮಿಂಚಿದರು. ಈ ಪಂದ್ಯವನ್ನು ಟೀಂ ಇಂಡಿಯಾ 95 ರನ್ ಗಳಿಂದ ಗೆದ್ದುಕೊಂಡಿತ್ತು. ಧೋನಿ 8 ಬೌಂಡರಿ 7 ಸಿಕ್ಸರ್ ನೆರವಿನಿಂದ ಭರ್ಜರಿ ಶತಕ ಸಿಡಿಸಿದರು. ಭಾರತ ವಿಶ್ವಕಪ್ ಟೂರ್ನಿಯಲ್ಲಿ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.