ಜೂನ್‌ನಿಂದ ಆರಂಭವಾಗಲಿರುವ ವಿಶ್ವಕಪ್ ಫುಟ್ಬಾಲ್ ರಾಷ್ಟ್ರಗಳು ಸಜ್ಜಾಗುತ್ತಿದೆ. ಲಿವರ್‌ಪೂಲ್ ತಂಡದ ಫಾರ್ವಡ್ ಪ್ಲೇಯರ್ ಮೊಹಮ್ಮದ್ ಸಲಾಹ್, ಈಜಿಪ್ಟ್ ತಂಡದ ಸ್ಟಾರ್ ಪ್ಲೇಯರ್. ಆದರೆ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಗಾಯಗೊಂಡಿರುವ ಮೊಹಮ್ಮದ್ ಸಲಾಹ್, ಗಾಯದ ನಡುವೆಯೂ ಜೂನ್ 15 ರಂದು ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಆಡೋ ವಿಶ್ವಾಸ ವ್ಯಕ್ಚಪಡಿಸಿದ್ದಾರೆ.
ಈಜಿಪ್ಟ್[ಮೇ 28]: ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಗಾಯಗೊಂಡು ಪಂದ್ಯದಿಂದ ಹೊರನಡೆದ ಲಿವರ್‌ಪೂಲ್ ತಂಡ ಫಾರ್ವಡ್ ಪ್ಲೇಯರ್ ಮೊಹಮ್ಮದ್ ಸಲಾಹ್, ಇದೀಗ ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್ ಟೂರ್ನಿ ಆಡೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಿಯಲ್ ಮ್ಯಾಡ್ರಿಡ್ ವಿರುದ್ಧದ ಫೈನಲ್ ಪಂದ್ಯದ ಮೊದಲಾರ್ಧದಲ್ಲಿ ಮೊಹಮ್ಮದ್ ಸಲಾಹ್ ಗಾಯಗೊಂಡಿದ್ದರು. ಮ್ಯಾಡ್ರಿಡ್ ತಂಡದ ಡಿಫೆಂಡರ್ ಸರ್ಜಿಯೋ ರೊಮೊಸ್ ಉದ್ದೇಶಪೂರ್ವಕವಾಗಿ ಮೊಹಮ್ಮದ್ ಸಲಾಹ್‌ರನ್ನ ಗಾಯಗೊಳಿಸಿದ್ದರು. 25 ವರ್ಷದ ಈಜಿಪ್ಟನ್ ಮೊಹಮ್ಮದ್ ಸಲಾಹ್, ನಿರ್ಗಮನದ ಬಳಿಕ ಲಿವರ್ ಪೂಲ್ ತಂಡ 1-3 ಅಂತರದಲ್ಲಿ ರಿಯಲ್ ಮ್ಯಾಡ್ರಿಡ್ ವಿರುದ್ಧ ಸೋಲೋಪ್ಪಿಕೊಂಡಿತು.
undefined
ಮೊಹಮ್ಮದ್ ಸಲಾಹ್ ಇಂಜುರಿ ಗಂಭೀರವಾಗಿದೆ. ಭುಜದ ಎಲುಬು ಜಾರಿರುವ ಕಾರಣ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ ಎಂದು ಲಿವರ್ ಪೂಲ್ ಮ್ಯಾನೇಜರ್ ಜರ್ಗನ್ ಕ್ಲೊಪ್ ಹೇಳಿದ್ದಾರೆ.
1990ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದ ಮೊಹಮ್ಮದ್ ಇಂಜುರಿಯಿಂದ ಹೊರಗುಳಿದಿದ್ದರು. ಬಳಿಕ ಸತತವಾಗಿ ವಿಶ್ವಕಪ್ ತಂಡದ ಭಾಗವಾಗಿದ್ದ ಮೊಹಮ್ಮದ್, ಇದೀಗ ಎರಡನೇ ಬಾರಿಗೆ ವಿಶ್ವಕಪ್ ಟೂರ್ನಿಗೆ ಅಲಭ್ಯರಾಗೋ ಸಾಧ್ಯತೆ ಇದೆ. ಆದರೆ ಶೀಘ್ರದಲ್ಲೇ ಚೇತರಿಸಿಕೊಂಡು ವಿಶ್ವಕಪ್ ಟೂರ್ನಿ ಆಡಲಿದ್ದೇನೆ ಎಂದು ಮೊಹಮ್ಮದ್ ಸಲಾಹ್ ಹೇಳಿದ್ದಾರೆ. ನಾನೊಬ್ಬ ಫೈಟರ್. ಹೀಗಾಗಿ ಇಂಜುರಿ ನನ್ನ ವಿಶ್ವಕಪ್ ಆಸೆಗೆ ತೊಡಕಾಗಲ್ಲ ಎಂದು ಸಲಾಹ್ ಹೇಳಿದ್ದಾರೆ.
ಮೊಹಮ್ಮದ್ ಸಲಾಹ್ ಇಂಜುರಿ ಈ ಬಾರಿಯ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಲಿವರ್ ಪೂಲ್ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. 2007ರಿಂದ ಲಿವರ್ ಪೂಲ್ ತಂಡದ ಗೆಲುವಿನಲ್ಲಿ ಮೊಹಮ್ಮದ್ ಪ್ರಮುಖ ಪಾತ್ರವಹಿಸಿದ್ದಾರೆ. ಲಿವರ್‌ಪೂಲ್ ತಂಡದ ವರ್ಷದ ಫುಟ್ಬಾಲ್ ಪಟು ಪ್ರಶಸ್ತಿ ಪಡೆದುಕೊಂಡಿರುವ ಪ್ರತಿಭಾನ್ವಿತ ಫಾರ್ವಡ್ ಪ್ಲೇಯರ್, ಇದೀಗ ವಿಶ್ವಕಪ್ ಟೂರ್ನಿ ಆಡೋ ಇಂಗಿತ ವ್ಯಕ್ತಪಡಿಸಿದ್ದಾರೆ. ಜೂನ್ 15 ರಂದು ಈಜಿಪ್ಟ್ ತಂಡ ಉರುಗ್ವೆ ವಿರುದ್ಧ ಮೊದಲ ವಿಶ್ವಕಪ್ ಪಂದ್ಯ ಆಡಲಿದೆ. ಆದರೆ ಇನ್ನುಳಿದ ಕೆಲವೇ ದಿನಗಳಲ್ಲಿ ಮೊಹಮ್ಮದ್ ಸಲಾಹ್ ಚೇತರಿಸಿಕೊಳ್ಳೋದು ಅನುಮಾನ ಎಂದು ಮ್ಯಾನೇಜರ್ ಹೇಳಿದ್ದಾರೆ.