
ಡೆನ್ಮಾರ್ಕ(ಅ.21): ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶನಿವಾರ ಭಾರತಕ್ಕೆ ಮಿಶ್ರ ಫಲ ದೊರಕಿದೆ. ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಫೈನಲ್‌ಗೇರಿದರೆ, ಕಿದಂಬಿ ಶ್ರೀಕಾಂತ್ ಪುರುಷರ ಸೆಮೀಸ್‌ನಲ್ಲಿ ಸೋತು ಹೊರಬಿದ್ದರು.
ಸೆಮೀಸ್‌ನಲ್ಲಿ ಸೈನಾ ಇಂಡೋನೇಷ್ಯಾದ ಗ್ರಿಗೋರಿ ಟುನ್ಜುಂಗ್ ವಿರುದ್ಧ 21-11, 21-12 ಗೇಮ್‌ಗಳಲ್ಲಿ ಗೆಲುವು ಪಡೆದರು. ಕ್ವಾರ್ಟರ್‌ನಲ್ಲಿ ಸೈನಾ, ಜಪಾನ್‌ನ ಒಕುಹಾರ ವಿರುದ್ಧ ಗೆದ್ದಿದ್ದರು. ಫೈನಲಲ್ಲಿ ವಿಶ್ವ ನಂ.1 ತೈ ತ್ಸು ಯಿಂಗ್ ಎದುರಾಗಲಿದ್ದಾರೆ.
ಕ್ವಾರ್ಟರಲ್ಲಿ ಸಮೀರ್ ವರ್ಮಾ ವಿರುದ್ಧ ಗೆದ್ದಿದ್ದ ಶ್ರೀಕಾಂತ್, ಸೆಮೀಸ್‌ನಲ್ಲಿ ವಿಶ್ವ ನಂ.1 ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 16-21, 12-21 ಸೋತರು. ಮಹಿಳಾ ಡಬಲ್ಸ್‌ನ ಕ್ವಾರ್ಟರ್‌ನಲ್ಲಿ ಅಶ್ವಿನಿ-ಸಿಕ್ಕಿ ಜೋಡಿ ಸೋಲುಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.