ಡೇವಿಸ್ ಕಪ್ ಅರ್ಹತಾ ಸುತ್ತುನಲ್ಲಿ ಭಾರತ ಮುಗ್ಗರಿಸಿದೆ. ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದ ಭಾರತ ಇಟಲಿ ವಿರುದ್ಧಸೋಲು ಕಂಡಿದೆ. ಸೋಲಿಗೆ ಮಹೇಶ್ ಭೂಪತಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೋಲ್ಕತಾ(ಫೆ.03): ಡೇವಿಸ್ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಇಟಲಿ ವಿರುದ್ಧ ಭಾರತ 1-3ರಲ್ಲಿ ಸೋಲುಂಡಿದೆ. ಇದರೊಂದಿಗೆ ವಲಯ ಹಂತಕ್ಕೆ ಹಿಂಬಡ್ತಿ ಪಡೆದಿದೆ. ಇಟಲಿ ಚೊಚ್ಚಲ ಡೇವಿಸ್ ಕಪ್ ಫೈನಲ್ಸ್‌ಗೆ ಪ್ರವೇಶ ಪಡೆದಿದೆ.
ಇದನ್ನೂ ಓದಿ: 5ನೇ ಏಕದಿನ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ-ತಂಡದಲ್ಲಿ 3 ಬದಲಾವಣೆ!
ಪಂದ್ಯದ ಮೊದಲ ದಿನವಾದ ಶುಕ್ರವಾರ ಮೊದಲೆರಡು ಸಿಂಗಲ್ಸ್‌ಗಳಲ್ಲಿ ಸೋಲುಂಡಿದ್ದ ಭಾರತ 0-2ರ ಹಿನ್ನಡೆ ಅನುಭವಿಸಿತ್ತು. ಶನಿವಾರ ನಡೆದ ಡಬಲ್ಸ್ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತು. ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ 4-6, 6-3, 6-4 ಸೆಟ್‌ಗಳಲ್ಲಿ ಸಿಮೋನ್ ಬೊಲ್ಲೆಲಿ ಹಾಗೂ ಮಾಟ್ಟಿಯೋ ಬೆರ್ರೆಟ್ಟಿನಿ ಜೋಡಿ ವಿರುದ್ಧ ಗೆಲುವು ಸಾಧಿಸಿ, ಭಾರತವನ್ನು ಸ್ಪರ್ಧೆಯಲ್ಲಿ ಉಳಿಸಿದರು.
ಇದನ್ನೂ ಓದಿ: ರಣಜಿ ಟ್ರೋಫಿ: ವಿದರ್ಭ-ಸೌರಾಷ್ಟ್ರ ಫೈನಲ್ ಫೈಟ್!
ಆದರೆ ರಿವರ್ಸ್ ಸಿಂಗಲ್ಸ್‌ನಲ್ಲಿ ವಿಶ್ವ ನಂ.37 ಆ್ಯಂಡ್ರೆಸ್ ಸೆಪ್ಪಿ ವಿರುದ್ಧ ಭಾರತದ ನಂ.1 ಪ್ರಜ್ನೇಶ್ ಗುಣೇಶ್ವರನ್ 1-6, 4-6 ನೇರ ಸೆಟ್‌ಗಳಲ್ಲಿ ಪರಾಭವಗೊಂಡರು. ಸಿಂಗಲ್ಸ್‌ನಲ್ಲೂ ಪ್ರಜ್ನೇಶ್ ನಿರಾಸೆ ಮೂಡಿಸಿದ್ದರು. ಕೇವಲ 62 ನಿಮಿಷಗಳಲ್ಲಿ ಪಂದ್ಯ ಗೆದ್ದ ಸೆಪ್ಪಿ, ಇಟಲಿಯನ್ನು ಫೈನಲ್ಸ್‌ಗೇರಿಸಿದರು. ಸೋಲಿನ ಬಳಿಕ ಭಾರತ ತಂಡದ ನಾಯಕ ಮಹೇಶ್ ಭೂಪತಿ ಬೇಸರ.