ವಾರ್ನರ್’ಗೆ ಒಲಿದ ಟಿ20 ಆಡುವ ಅವಕಾಶ..!

First Published Jun 17, 2018, 4:01 PM IST
Highlights

ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್’ಟೌನ್’ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ವಾರ್ನರ್, ಸ್ಟೀವ್ ಸ್ಮಿತ್ ಹಾಗೂ ಕ್ಯಾಮರೋನ್ ಬೆನ್’ಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬ್ಬಿದ್ದಿದ್ದರು. ಆ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಮಿತ್ ಹಾಗೂ ವಾರ್ನರ್ ಅವರ ಮೇಲೆ ಒಂದು ವರ್ಷ ನಿಷೇಧ ಹೇರಿದ್ದರೆ, ಬೆನ್’ಕ್ರಾಫ್ಟ್ ಮೇಲೆ 9 ತಿಂಗಳ ನಿಷೇಧ ಹೇರಿದೆ. ಹೀಗಾಗಿ ವಾರ್ನರ್ ಹಾಗೂ ಸ್ಮಿತ್ 2018ನೇ ಸಾಲಿನ ಐಪಿಎಲ್’ನಿಂದಲೂ ಹೊರಬಿದ್ದಿದ್ದರು.

ಮೆಲ್ಬರ್ನ್(ಜೂ.17]: ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ನಿಷೇಧಕ್ಕೆ ಗುರಿಯಾಗಿರುವ ಡೇವಿಡ್ ವಾರ್ನರ್, ಫ್ರಾಂಚೈಸಿ ಟಿ20 ಲೀಗ್‌ಗಳಲ್ಲಿ ಆಡುವ ಮೂಲಕ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರಲು ಪ್ರಯತ್ನಿಸುತ್ತಿದ್ದಾರೆ. 

ಇದನ್ನು ಓದಿ: ಗಾಯದ ಮೇಲೆ ಬರೆ ಎಳೆದಂತಾದ ವಾರ್ನರ್ ಪರಿಸ್ಥಿತಿ..!

ಇದೇ ತಿಂಗಳು ನಡೆಯಲಿರುವ ಕೆನಡಾದ ಗ್ಲೋಬಲ್ ಟಿ20 ಲೀಗ್‌ನಲ್ಲಿ ಆಡುವುದಾಗಿ ಖಚಿತ ಪಡಿಸಿರುವ ವಾರ್ನರ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇಂಟ್ ಲೂಸಿಯಾ ಸ್ಟಾರ್ಸ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆಸ್ಟ್ರೇಲಿಯಾದ ಸಹ ಆಟಗಾರ ಡಾರ್ಚಿ ಶಾರ್ಟ್, ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ‘ಎ’ ತಂಡದಲ್ಲಿ ಸ್ಥಾನ ಪಡೆದ ಕಾರಣ ಸಿಪಿಎಲ್ ಟಿ20ಯಿಂದ ಹಿಂದೆ ಸರಿದರು. ಶಾರ್ಟ್ ಸ್ಥಾನವನ್ನು ವಾರ್ನರ್ ತುಂಬಲಿದ್ದಾರೆ. ಆಗಸ್ಟ್ 8ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ.

ಇದನ್ನು ಓದಿ: ನಿಷೇಧದ ಬಳಿಕ ವಾರ್ನರ್ ಏನು ಮಾಡ್ತಿದ್ದಾರೆ ಗೊತ್ತಾ..?

click me!