ಯುವೆಂಟಸ್ ಸೇರಿದ ಬಳಿಕ 20 ವರ್ಷದ ಯುವಕನಾದ ರೋನಾಲ್ಡೋ!

By Suvarna NewsFirst Published Jul 24, 2018, 9:20 PM IST
Highlights

ಪೋರ್ಟುಗಲ್ ಸ್ಟಾರ್ ಫುಟ್ಬಾಲ್ ಕ್ರಿಸ್ಟಿಯಾನೋ ರೋನಾಲ್ಡೋ ವಯಸ್ಸು 33. ಇತ್ತೀಚೆಗೆ ರಿಯಲ್ ಮ್ಯಾಡ್ರಿಡ್ ತಂಡ ತೊರೆದು ಯುವೆಂಟಸ್ ತಂಡ ಸೇರಿಕೊಂಡ ರೋನಾಲ್ಡೋ ವಯಸ್ಸು 20ಕ್ಕೆ ಇಳಿದಿದ್ದು ಹೇಗೆ? ಇಲ್ಲಿದೆ ವಿವರ.

ಇಟಲಿ(ಜು.24): ಪೋರ್ಚುಗಲ್ ಸ್ಟಾರ್ ಫುಟ್ಬಾಲರ್ ಕ್ರಿಸ್ಟಿಯಾನೋ ರೋನಾಲ್ಡೋ, ರಿಯಲ್ ಮ್ಯಾಡ್ರಿಡ್ ತಂಡ ತೊರೆದು ಇಟಲಿಯ ಯುವೆಂಟಸ್ ತಂಡ ಸೇರಿಕೊಂಡು ಹಲವು ದಿನಗಳಾಗಿದೆ. ಇದೀಗ ಯುವೆಂಟಸ್ ತಂಡ ನಡೆಸಿದ ದೈಹಿಕ ಪರೀಕ್ಷೆಯಲ್ಲಿ ರೋನಾಲ್ಡೋ ಪಾಸ್ ಆಗಿದ್ದಾರೆ. ಇಷ್ಟೇ ಅಲ್ಲ ಯುವೆಂಟಸ್ ಮೆಡಿಕಲ್ ವರದಿ ಪ್ರಕಾರ ರೋನಾಲ್ಡೋ ವಯಸ್ಸು ಕೇವಲ 20.

33 ವರ್ಷದ ಕ್ರಿಸ್ಟಿಯಾನೋ ರೋನಾಲ್ಡೋ ಮೆಡಿಕಲ್ ಎಕ್ಸಾಮಿನೇಶನ್‌ನಲ್ಲಿ 20 ಚಿರ ಯುವಕನ ರೀತಿ ಪಾಸ್ ಆಗಿದ್ದಾರೆ. ರೋನಾಲ್ಡೋ ದೈಹಿಕ ಕ್ಷಮತೆ ಚಿರ ಯುವಕನ ರೀತಿ ಇದೆ ಎಂದು ಮೆಡಿಕಲ್ ರಿಪೋರ್ಟ್‌ನಲ್ಲಿ ಹೇಳಿದೆ.

ರೋನಾಲ್ಡೋ ಬಾಡಿ ಫ್ಯಾಟ್ 7%. ಸಹಜವಾಗಿ ಗೋಲ್ ಸ್ಕೋರರ್‌ಗಿಂತ 4% ಕಡಿಮೆ ಇದೆ ಎಂದು ಮೆಡಿಕಲ್ ರಿಪೋರ್ಟ್ ಹೇಳಿದೆ. ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ರೋನಾಲ್ಡೋ ಓಟ 33.98 ಕೀಮಿ ಪ್ರತಿ ಗಂಟೆಗೆ. ಇದು ಟೂರ್ನಿಯಲ್ಲೇ ಗರಿಷ್ಠ ಸಾಧನೆ. ಹೀಗಾಗಿಯೇ ರೋನಾಲ್ಡೋ ವಯಸ್ಸು 33 ಆಗಿದ್ದರೂ, ಇನ್ನು 20 ಯುವಕನ ಫಿಟ್ನೆಸ್ ಉಳಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪೋರ್ಚುಗಲ್ ತಂಡದ ಸೋಲಿನ ಬಳಿಕ ಕ್ರಿಸ್ಟಿಯಾನೋ ರೋನಾಲ್ಡೋ ರಿಯಲ್ ಮ್ಯಾಡ್ರಿಡ್ ತಂಡ ತೊರೆದಿದ್ದರು. ಬಳಿಕ ಬರೋಬ್ಬರಿ 895 ಕೋಟಿ ರೂಪಾಯಿಗೆ ಯುವೆಂಟಸ್ ತಂಡದ ಜೊತೆ ಒಪ್ಪಂದ ಮಾಡಿಕೊಂಡಿದ್ದರು.

click me!