ವೇತನ ಬಿಕ್ಕಟ್ಟು: ಆಫ್ರಿಕಾ ಪ್ರವಾಸ ಬಹಿಷ್ಕರಿಸಿದ ಕಾಂಗರು ಪಡೆ

By Suvarna Web DeskFirst Published Jul 6, 2017, 7:30 PM IST
Highlights

ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ ಜುಲೈ 12ರಿಂದ ಆಗಸ್ಟ್ 5 ರವರೆಗೆ ಆಸ್ಟ್ರೇಲಿಯಾ ತಂಡವು ಭಾರತ, ದಕ್ಷಿಣ ಆಫ್ರಿಕಾ ತಂಡದೊಂದಿಗೆ ಏಕದಿನ ತ್ರಿಕೋನ ಸರಣಿ ಹಾಗೂ ಎರಡು 4 ದಿನಗಳ ಟೆಸ್ಟ್ ಪಂದ್ಯವನ್ನು ಆಡಬೇಕಿತ್ತು.

ಸಿಡ್ನಿ(ಜು.06): ಕ್ರಿಕೆಟ್ ಆಸ್ಟ್ರೇಲಿಯಾ ಜತೆಗಿನ ವೇತನ ಬಿಕ್ಕಟ್ಟು ಬಗೆಹರಿಯದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ‘ಎ’ ತಂಡ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಬಹಿಷ್ಕರಿಸಿದೆ.

ಈ ಕುರಿತು ತನ್ನ ನಿರ್ಧಾರ ಪ್ರಕಟಿಸಿದ ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಸ್ಥೆ ವೇತನ ಹಂಚಿಕೆ ವಿಚಾರದಲ್ಲಿ ತಮ್ಮ ಬೇಡಿಕೆ ಈಡೇರುವವರೆಗೂ ಆಟಗಾರರು ಆಸ್ಟ್ರೇಲಿಯಾ ತಂಡದಲ್ಲಿ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Latest Videos

ವೇತನ ಬಿಕ್ಕಟ್ಟಿನ ಕುರಿತಂತೆ ಇದುವರೆಗೂ ಕ್ರಿಕೆಟ್ ಆಸ್ಟ್ರೇಲಿಯಾ ಸಮಸ್ಯೆ ಪರಿಹರಿಸಲು ಮುಂದೆ ಬಂದಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಸ್ಥೆ ತಿಳಿಸಿದೆ.

ಜೂನ್ 30ರಂದು ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಆಟಗಾರರ ನಡುವಿನ ಒಪ್ಪಂದ ಅಂತ್ಯಗೊಂಡಿದ್ದು, 200ಕ್ಕೂ ಹೆಚ್ಚು ಕ್ರಿಕೆಟಿಗರು ನಿರುದ್ಯೋಗಿಗಳಾಗಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ ಜುಲೈ 12ರಿಂದ ಆಗಸ್ಟ್ 5 ರವರೆಗೆ ಆಸ್ಟ್ರೇಲಿಯಾ ತಂಡವು ಭಾರತ, ದಕ್ಷಿಣ ಆಫ್ರಿಕಾ ತಂಡದೊಂದಿಗೆ ಏಕದಿನ ತ್ರಿಕೋನ ಸರಣಿ ಹಾಗೂ ಎರಡು 4 ದಿನಗಳ ಟೆಸ್ಟ್ ಪಂದ್ಯವನ್ನು ಆಡಬೇಕಿತ್ತು.

click me!