ನಿವೃತ್ತಿ ಬಗ್ಗೆ ಕೊನೆಗೂ ತುಟಿಬಿಚ್ಚಿದ ಯುವಿ..!

By Web DeskFirst Published Dec 21, 2018, 12:47 PM IST
Highlights

ಯುವರಾಜ್, ಕೊನೆ ಬಾರಿಗೆ 2017ರಲ್ಲಿ ವಿಂಡೀಸ್ ಪ್ರವಾಸದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ‘2019ರವರೆಗೂ ಯಾವುದೇ ರೀತಿಯ ಕ್ರಿಕೆಟ್ ಆದರೂ ಪರವಾಗಿಲ್ಲ, ಪಾಲ್ಗೊಳ್ಳುತ್ತೇನೆ. ವೃತ್ತಿ ಜೀವನ ಆರಂಭಿಸಿ 17-18 ವರ್ಷಗಳಾದವು. ಮುಂದಿನ ವರ್ಷ ರಾಷ್ಟ್ರೀಯ ತಂಡಕ್ಕೆ ಮರಳುವ ವಿಶ್ವಾಸವಿದೆ’ ಎಂದು ಯುವಿ ಹೇಳಿದ್ದಾರೆ.

ನವದೆಹಲಿ(ಡಿ.21): 2011ರ ವಿಶ್ವಕಪ್ ವಿಜೇತ ಭಾರತ ತಂಡದ ಹೀರೋ ಯುವರಾಜ್ ಸಿಂಗ್, ಇಂಗ್ಲೆಂಡ್‌ನಲ್ಲಿ ನಡೆಯಲಿರುವ 2019ರ ಐಸಿಸಿ ವಿಶ್ವಕಪ್ ಟೂರ್ನಿ ಬಳಿಕ ತಮ್ಮ ಕ್ರಿಕೆಟ್
ವೃತ್ತಿ ಜೀವನಕ್ಕೆ ವಿದಾಯ ಹೇಳುವುದರ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ.

ಕೊನೆಗೂ ಹರಾಜಾದ ಯುವರಾಜ್ ಸಿಂಗ್-ಯಾವ ತಂಡಕ್ಕೆ?

ಯುವರಾಜ್ ಕೊನೆ ಬಾರಿಗೆ 2017ರಲ್ಲಿ ವಿಂಡೀಸ್ ಪ್ರವಾಸದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ‘2019ರವರೆಗೂ ಯಾವುದೇ ರೀತಿಯ ಕ್ರಿಕೆಟ್ ಆದರೂ ಪರವಾಗಿಲ್ಲ, ಪಾಲ್ಗೊಳ್ಳುತ್ತೇನೆ. ವೃತ್ತಿ ಜೀವನ ಆರಂಭಿಸಿ 17-18 ವರ್ಷಗಳಾದವು. ಮುಂದಿನ ವರ್ಷ ರಾಷ್ಟ್ರೀಯ ತಂಡಕ್ಕೆ ಮರಳುವ ವಿಶ್ವಾಸವಿದೆ’ ಎಂದು ಯುವಿ ಹೇಳಿದ್ದಾರೆ. 

ಅಬ್ ಆಯೇಗಾ ಮಜಾ: ಮುಂಬೈ ಸೇರಿದ ಯುವಿ ಖಡಕ್ ವಾರ್ನಿಂಗ್..!

ಇತ್ತೀಚೆಗಷ್ಟೇ ನಡೆದ 12ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಯುವರಾಜ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಒಂದು ಕೋಟಿ ರುಪಾಯಿ ನೀಡಿ ಖರೀದಿಸಿತ್ತು. 2011ರ ಏಕದಿನ ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಕೆಲವು ದಿನಗಳ ಹಿಂದಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್’ಗೆ ಗುಡ್’ಬೈ ಹೇಳಿದ್ದರು, ಇದರ ಬೆನ್ನಲ್ಲೇ ಯುವಿ ಕೂಡ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಲಿದ್ದಾರೆ ಎನ್ನುವ ಗಾಳಿ ಸುದ್ದಿಹರಿದಾಡಿತ್ತು.  

click me!