ಪರ್ತ್ ಟೆಸ್ಟ್: ಕೊಹ್ಲಿ ಖಾತೆಗೆ ಮತ್ತೊಂದು ಶತಕ

By Web DeskFirst Published 16, Dec 2018, 9:36 AM IST
Highlights

173 ರನ್’ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಭಾರತ ಮೊದಲ ಓವರ್’ನಲ್ಲೇ ವಿಕೆಟ್ ಕಳೆದುಕೊಂಡಿತು. 51 ರನ್ ಬಾರಿಸಿದ್ದ ರಹಾನೆ ವಿಕೆಟ್ ಒಪ್ಪಿಸಿದರು.

ಪರ್ತ್[ಡಿ.16]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ವೃತ್ತಿ ಜೀವನದ 25ನೇ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಕೊಹ್ಲಿ ಅತಿ ಕಡಿಮೆ ಇನ್ನಿಂಗ್ಸ್’ಗಳಲ್ಲಿ ಶತಕ ಸಿಡಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ ಸಾಧನೆ ಮಾಡಿದ್ದಾರೆ.

173 ರನ್’ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಭಾರತ ಮೊದಲ ಓವರ್’ನಲ್ಲೇ ವಿಕೆಟ್ ಕಳೆದುಕೊಂಡಿತು. 51 ರನ್ ಬಾರಿಸಿದ್ದ ರಹಾನೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಹನುಮಾ ವಿಹಾರಿ ಕೂಡಿಕೊಂಡು ಇನ್ನಿಂಗ್ಸ್ ಕಟ್ಟಿದ ಕೊಹ್ಲಿ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ದಿನದಂತ್ಯಕ್ಕೆ 82 ರನ್ ಬಾರಿಸಿದ್ದ ಕೊಹ್ಲಿ ಅಮೋಘ ಶತಕ ಸಿಡಿಸಿ ಸಂಭ್ರಮಿಸಿದರು. ಈ ಶತಕದೊಂದಿಗೆ ಭಾರತ ಪರ ಆಸ್ಟ್ರೇಲಿಯಾ ವಿರುದ್ಧ ಅತಿಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಮೂರನೇ[7] ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್[11] ಹಾಗೂ ಸುನಿಲ್ ಗವಾಸ್ಕರ್ ಮೊದಲೆರಡು ಸ್ಥಾನದಲ್ಲಿದ್ದಾರೆ.

ಮೂರನೇ ದಿನದಲ್ಲಿ 2 ವಿಕೆಟ್ ಪತನ:
ಮೂರನೇ ದಿನದಾಟದ ಆರಂಭದಲ್ಲೇ ಭಾರತ ಅಜಿಂಕ್ಯ ರಹಾನೆ ವಿಕೆಟ್ ಕಳೆದುಕೊಂಡಿತು. ಇದಾದ ನಂತರ ಹನುಮ ವಿಹಾರಿ ಕೊಹ್ಲಿ 50 ರನ್’ಗಳ ಜತೆಯಾಟವಾಡಿತು. ಈ ವೇಳೆ ಜೋಸ್ ಹ್ಯಾಜಲ್’ವುಡ್ ಬೌಲಿಂಗ್’ನಲ್ಲಿ ಟಿಮ್ ಪೈನೆಗೆ ಕ್ಯಾಚಿತ್ತು ವಿಹಾರಿ[20] ಪೆವಿಲಿಯನ್ ಸೇರಿದರು. ಇದೀಗ ಭಾರತ 90 ಓವರ್ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 243 ರನ್ ಬಾರಿಸಿದ್ದು, ಇನ್ನೂ 83 ರನ್’ಗಳ ಹಿನ್ನಡೆಯಲ್ಲಿದೆ. ನಾಯಕ ಕೊಹ್ಲಿ 117 ಹಾಗೂ ಪಂತ್ 11 ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
 

Last Updated 16, Dec 2018, 9:36 AM IST