ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳು, ವಿವಾದಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಫೆಬ್ರವರಿ 07 ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.
ಬೆಂಗಳೂರು(ಫೆ.07): ಟೀಂ ಇಂಡಿಯಾ ಮಾಜಿ ನಾಯಕ, ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಈ ದಿನ (ಫೆ.07)ವಿಶ್ವ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಬದ್ಧವೈರಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಕಬಳಿಸಿ ಭಾರತದ ಭರ್ಜರಿ ಗೆಲುವಿಗೆ ಕಾರಣರಾಗಿದ್ದರು. ಇದೀಗ ಈ ಐತಿಹಾಸಿಕ ದಾಖಲೆಗೆ 20ನೇ ವರ್ಷದ ಸಂಭ್ರಮ.
ಇದನ್ನೂ ಓದಿ: ಟೂರ್ನಿ ಗೆಲ್ಲಲು ಆಸಿಸ್ ಅಂಡರ್ ಆರ್ಮ್ ಎಸೆತ - ವಿವಾದಕ್ಕೆ 38 ವರ್ಷ!
undefined
ಫೆ.07, 1999. ದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ದದ ಟೆಸ್ಟ್ ಪಂದ್ಯದ ಅಂತಿಮ ದಿನ ಅನಿಲ್ ಕುಂಬ್ಳೆ ಸ್ಪಿನ್ ಮೋಡಿ ಮಾಡಿದ್ದರು. ಗೆಲುವಿಗೆ 420 ರನ್ ಟಾರ್ಗೆಟ್ ಪಡೆದ ಪಾಕಿಸ್ತಾನಕ್ಕೆ ಸಯ್ಯದ್ ಅನ್ವರ್ ಹಾಗೂ ಶಾಹಿದ್ ಆಫ್ರಿದಿ ಶತಕದ ಜೊತೆಯಾಟ ನೀಡೋ ಮೂಲಕ ಡ್ರಾ ಮಾಡಿಕೊಳ್ಲೋ ಸೂಚನೆ ನೀಡಿದ್ದರು. ಆದರೆ ಕುಂಬ್ಳೆ ಸ್ಪಿನ್ ಜಾದೂಗೆ ಪಾಕ್ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು.
ಇದನ್ನೂ ಓದಿ:ಐಪಿಎಲ್ 2019: ಪ್ರಶಸ್ತಿ ಗೆಲ್ಲಲು ಮುಂಬೈ ಇಂಡಿಯನ್ಸ್‌ಗಿದೆ 5 ಕಾರಣ!
ಕುಂಬ್ಳೆ ಅಬ್ಬರಕ್ಕೆ ಪಾಕಿಸ್ತಾನ 207 ರನ್‌ಗೆ ಆಲೌಟ್ ಆಯಿತು. ಕುಂಬ್ಳೆ 26.3 ಓವರ್‌ಗಳಲ್ಲಿ 74 ರನ್ ನೀಡಿ 10 ವಿಕೆಟ್ ಕಬಳಿಸಿದರು. ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಎದುರಾಳಿಯ 10 ವಿಕೆಟ್ ಕಬಳಿಸಿದ ಸಾಧನೆ ಮಾಡಿದ ವಿಶ್ವದ 2ನೇ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು. ಇದೀಗ ಈ ದಾಖಲೆಗೆ 20ನೇ ವರ್ಷ ಸಂಭ್ರಮ. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಇದೇ ರೀತಿಯ ಹಲವು ಸ್ಮರಣೀಯ ದಾಖಲೆಗಳನ್ನ ಬರೆದಿದ್ದಾರೆ.