ದಿಗ್ಗಜ ಕ್ರಿಕೆಟಿಗ, ಕನ್ನಡಿಗ GR ವಿಶ್ವನಾಥ್‌ಗೆ ಹುಟ್ಟು ಹಬ್ಬದ ಸಂಭ್ರಮ!

By Web DeskFirst Published Feb 12, 2019, 4:12 PM IST
Highlights

ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳು, ವಿವಾದಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಫೆಬ್ರವರಿ 12ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

ಬೆಂಗಳೂರು(ಫೆ.12): ಟೀಂ ಇಂಡಿಯಾ ಕಂಡ ಶ್ರೇಷ್ಠ ಕ್ರಿಕೆಟಿಗ, ಸ್ವತಃ ಸುನಿಲ್ ಗವಾಸ್ಕರ್‌ಗೆ ಮಾದರಿ ಕ್ರಿಕೆಟಿಗ, ಇಷ್ಟೇ ಅಲ್ಲ ಗಾವಸ್ಕರ್‌ಗಿಂತ ಕ್ಲಾಸಿಕ್ ಬ್ಯಾಟ್ಸ್‌ಮನ್ ಎಂದೇ ಗುರುತಿಸಿಕೊಂಡಿದ್ದ ಗುಂಡಪ್ಪ ವಿಶ್ವನಾಥ್‍‌ಗೆ 70ನೇ ಹುಟ್ಟು ಹಬ್ಬದ ಸಂಭ್ರಮ. ಫೆಬ್ರವರಿ 12, 1949ರಲ್ಲಿ ಹುಟ್ಟಿದ GRV, ಕನ್ನಡಿಗ ಅನ್ನೋದು ಮತ್ತೊಂದು ಹೆಮ್ಮೆ.

ಇದನ್ನೂ ಓದಿ: ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆಗೆ -20 ವರ್ಷದ ಸಂಭ್ರಮ!

ಮೈಸೂರಿನಲ್ಲಿ ಹುಟ್ಟಿ GRV 1969ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಭಾರತದ ಪರ 91 ಟೆಸ್ಟ್, 25 ಏಕದಿನ ಪಂದ್ಯ ಆಡಿರುವ GRV ಆಫ್ ಸೈಡ್ ಕಟ್ ಶಾಟ್‌ಗೆ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ. ವಿಶಿ ಎಂದೇ ಹೆಸರುವಾಸಿಯಾಗಿದ್ದ ವಿಶ್ವನಾಥ್ ಟೆಸ್ಟ್ ಮಾದರಿಯಲ್ಲಿ 6080 ರನ್ ಸಿಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಸಿಡಿಸಿದ 222 ರನ್ ವೈಯುಕ್ತಿ ಗರಿಷ್ಠ ಸ್ಕೋರ್.

 

Happy 70th birthday to one of India's finest batsmen, Gundappa Viswanath!

In 91 Tests between 1969 and 1983 he made 6,080 runs, with his best of 222 coming against England in Chennai in 1982. pic.twitter.com/SvJGBxYBWO

— ICC (@ICC)

 

ಇದನ್ನೂ ಓದಿ: ರೋಹಿತ್’ಗೆ ರೆಸ್ಟ್; ಈ ಇಬ್ಬರಿಗೆ ವಿಶ್ವಕಪ್ ಎಂಟ್ರಿ ಕೊಡಲು ಕೊನೆಯ ಚಾನ್ಸ್..?

ಏಕದಿನದಲ್ಲಿ 439 ರನ್ ಸಿಡಿಸಿದ್ದಾರೆ.  ಏಕದಿನದಲ್ಲಿ 75 ರನ್ ವಿಶಿ ಬೆಸ್ಟ್ ಸ್ಕೋರ್. ಕ್ರಿಕೆಟ್ ನಿವೃತ್ತಿ ಬಳಿಕ ಜಿ.ಆರ್.ವಿಶ್ವನಾಥ್ 1999 ರಿಂದ 2004ರ ವರೆಗೆ ಐಸಿಸಿ ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸಿದ್ದರು.  2009ರಲ್ಲಿ ವಿಶ್ವನಾಥ್, ಸಿಕೆ ನಾಯ್ಡು ಜೀವಮಾನ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಿ.ಆರ್.ವಿಶ್ವನಾಥ್ ಹುಟ್ಟುಹಬ್ಬಕ್ಕೆ ಐಸಿಸಿ, ಭಾರತೀಯ ಕ್ರಿಕೆಟ್ ದಿಗ್ಗಜರು ಸೇರಿದಂತೆ ಹಲವು ಕ್ರಿಕೆಟಿಗರು ಶುಭಕೋರಿದ್ದಾರೆ.  
 

click me!