113 ವರ್ಷಗಳಾದರೂ ಕ್ರಿಕೆಟ್'ನ ಈ ದಾಖಲೆ ಮುರಿದಿಲ್ಲ...!

Published : Dec 14, 2016, 02:41 PM ISTUpdated : Apr 11, 2018, 01:00 PM IST
113 ವರ್ಷಗಳಾದರೂ ಕ್ರಿಕೆಟ್'ನ ಈ ದಾಖಲೆ ಮುರಿದಿಲ್ಲ...!

ಸಾರಾಂಶ

ಫೋಸ್ಟರ್ ನಿರ್ಮಿಸಿದ ಈ ದಾಖಲೆ ಇಂದಿಗೆ 113 ವಸಂತಗಳನ್ನು ಕಳೆದಿದೆ. ಆದರೂ ಯಾವೊಬ್ಬ ಆಟಗಾರನು ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

ಲಂಡನ್(ಡಿ.14): ವಿಶ್ವ ಕ್ರಿಕೆಟ್‌ನಲ್ಲಿ ದಾಖಲಾದ ಕೆಲವೊಂದು ರೆಕಾರ್ಡ್‌ಗಳು ಶತಮಾನಗಳಾದರೂ ಬ್ರೇಕ್ ಮಾಡಲು ಅಸಾಧ್ಯ ಎನಿಸಿವೆ. ಅಂತಹುದೇ ದಾಖಲೆಯೊಂದು ಕಳೆದ 113 ವರ್ಷಗಳಿಂದ ಹಾಗೆ ಉಳಿದಿದೆ. ಇಂಗ್ಲೆಂಡ್ ಕ್ರಿಕೆಟಿಗ ಟಿಪ್ ಫೋಸ್ಟರ್ 1903 ಡಿ. 14ರಂದು ನಡೆದ ಮೊದಲ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಎದುರು ಪದಾರ್ಪಣೆ ಪಂದ್ಯದಲ್ಲಿ 287 ರನ್‌ಗಳಿಸಿದ್ದರು.

ಫೋಸ್ಟರ್ ನಿರ್ಮಿಸಿದ ಈ ದಾಖಲೆ ಇಂದಿಗೆ 113 ವಸಂತಗಳನ್ನು ಕಳೆದಿದೆ. ಆದರೂ ಯಾವೊಬ್ಬ ಆಟಗಾರನು ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

ಸಿಡ್ನಿ ಮೈದಾನದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌'ಗೆ ಇಳಿದಿದ್ದ ಫೋಸ್ಟರ್ 37 ಬೌಂಡರಿಯೊಂದಿಗೆ ದ್ವಿಶತಕಗಳಿಸಿದ್ದರು. ಇಂಗ್ಲೆಂಡ್ ಈ ಪಂದ್ಯವನ್ನು 5 ವಿಕೆಟ್‌ಗಳಿಂದ ಜಯಿಸಿತ್ತು.

ಪಾದಾರ್ಪಣಾ ಪಂದ್ಯದಲ್ಲಿ ಗರಿಷ್ಠ ರನ್'ಗಳಿಸಿದವರ ಪಟ್ಟಿ ಇಂತಿದೆ

ಆಟಗಾರ                      ರನ್           ಎದುರಾಳಿ             ವರ್ಷ

ಟಿಫ್ ಫೋಸ್ಟರ್(ENG)         287            ಆಸ್ಟ್ರೇಲಿಯಾ          1903

ಜಾಕ್ ರುಡಾಲ್ಫ್(SA)         222*          ಬಾಂಗ್ಲಾದೇಶ          2003

ಲಾರೆನ್ಸ್ ರೋ (WI)          214            ನ್ಯೂಜಿಲ್ಯಾಂಡ್        1972

ಮ್ಯಾಥ್ಯೂ ಸಿಂಕ್ಲೆರ್(NZ)       214            ವೆಸ್ಟ್'ಇಂಡೀಸ್        1999

ಬ್ರೆಂಡನ್ ಕುರೇಪು(SL)        201*           ನ್ಯೂಜಿಲ್ಯಾಂಡ್        1987

ಶಿಖರ್ ಧವನ್(IND)           187             ಆಸ್ಟ್ರೇಲಿಯಾ          2013  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೋಹಿತ್ ಬಾಯ್ ವಡಾ ಪಾವ್ ತಿನ್ತೀರಾ? ಹಿಟ್‌ಮ್ಯಾನ್ ಕೊಟ್ಟ ರಿಪ್ಲೆ ವಿಡಿಯೋ ವೈರಲ್
'ಆತ ಊಟಿಗೆ ಕರೆದುಕೊಂಡು ಹೋಗಿ..': ಅಪ್ರಾಪ್ತೆ ಮೇಲೆ ಆರ್‌ಸಿಬಿ ಆಟಗಾರ ಲೈಂಗಿಕ ದೌರ್ಜನ್ಯ, ಬೇಲ್ ಕ್ಯಾನ್ಸಲ್! ಶುರುವಾಯ್ತು ಬಂಧನ ಭೀತಿ