
ನವದೆಹಲಿ(ಜು.08): ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದಿದ್ದಾಗಿದೆ. ಈಗ ಆ ಸರಣಿಯಲ್ಲಿ ಯಾರ ಪ್ರದರ್ಶನ ಹೇಗಿತ್ತು. ಯಾರು ಕ್ಲಿಕ್ ಆದರು, ಯಾರು ಫ್ಲಾಪ್ ಆದ್ರು ಗಮನಿಸಬೇಕಾಗುತ್ತದೆ. ಎಲ್ಲರಿಗೂ ವಿಂಡೀಸ್ ಟೂರ್ ಉತ್ತಮವಾಗಿಯೇ ಇತ್ತು. ಆದರೆ ಒಬ್ಬ ಆಟಗಾರ ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಸಿಕ್ಕ ಅವಕಾಶ ಬಳಸಿಕೊಂಡ ನಾಲ್ವರು: ಸಂಕಷ್ಟಕ್ಕೆ ಸಿಲುಕಿರೋದು ಒಬ್ಬೇ ಒಬ್ಬ ಆಟಗಾರ
ಈ ವೆಸ್ಟ್ ಇಂಡೀಸ್ ಪ್ರವಾಸವೆಂದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕಿರಿಕಿರಿ. ಅಲ್ಲಿ ಏನೇ ಆದರೂ ಗೊತ್ತಾಗಲ್ಲ. ಗೊತ್ತಾದರೂ ಅದಕ್ಕೆ ಮೂರ್ನಾಲ್ಕು ದಿನ ಕಾಯಬೇಕು. ಭಾರತ-ವಿಂಡೀಸ್ 5 ಪಂದ್ಯಗಳ ಏಕದಿನ ಸರಣಿ ಮುಗಿದಿದೆ. ಟೀಂ ಇಂಡಿಯಾ ಸರಣಿ ಗೆದ್ದು ಸಂಭ್ರಮಿಸಿದೆ. ಈ ಸರಣಿಯನ್ನು ಯಾರು ಸದ್ಭಳಕೆ ಮಾಡಿಕೊಂಡ್ರು. ಯಾರು ಸಂಕಷ್ಟಕ್ಕೆ ಸಿಲುಕಿದರು ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಓಪನರ್ ಪ್ಲೇಸ್'ಗೆ ಕಾಂಪಿಟೇಶನ್ ಶುರು ಮಾಡಿದ ರಹಾನೆ
ಅಜಿಂಕ್ಯಾ ರಹಾನೆಗೆ ಟಾಲೆಂಟ್ ಇದ್ದರೂ, ಟೀಮ್ನಲ್ಲಿದ್ದರೂ ಜರ್ನಿಮ್ಯಾನ್ ಆಗಿದ್ದರು. ಸದ್ಯ ಟೀಂ ಇಂಡಿಯಾದಲ್ಲಿರುವ ಆಟಗಾರರಿಗೆ ಟೆಕ್ನಿಕಲಿ ಸ್ಟ್ರಾಂಗ್ ಬ್ಯಾಟ್ಸ್ಮನ್ ರಹಾನೆ ಮಾತ್ರ. ಆದರೂ ಅವರಿಗೆ ಖಾಯಂ ಸ್ಥಾನವಿಲ್ಲ. ಆಡಿದ್ರೂ ಖಾಯಂ ಕ್ರಮಾಂಕವಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ವಾಟರ್ ಬಾಯ್ ಆಗಿದ್ದ ಅಜಿಂಕ್ಯಾಗೆ ವಿಂಡೀಸ್ನಲ್ಲಿ ಓಪನರ್ ಆಗಿ ಆಡೋ ಚಾನ್ಸ್ ಸಿಕ್ತು. ಸಿಕ್ಕ ಅವಕಾಶವನ್ನ ಸದ್ಭಳಕೆ ಮಾಡಿಕೊಂಡ ರಹಾನೆ, ಐದು ಮ್ಯಾಚ್ನಲ್ಲಿ ಮೂರು ಹಾಫ್ ಸೆಂಚುರಿ ಒಂದು ಸೆಂಚುರಿ ಹೊಡೆದು ಮಿಂಚಿದ್ರು. ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡ್ರು.
ಮಿಡ್ಲ್ ಆರ್ಡರ್ ಪ್ಲೇಸ್ಗೆ ಕಾರ್ತಿಕ್ ರೇಸ್
ರಹಾನೆ ಹಾಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ವಾಟರ್ ಬಾಯ್ ಆಗಿದ್ದ ದಿನೇಶ್ ಕಾರ್ತಿಕ್'ಗೆ ವಿಂಡೀಸ್'ನಲ್ಲಿ ಆಡಲು ಚಾನ್ಸ್ ಸಿಕ್ಕಿದ್ದು ಕೇವಲ ಎರಡು ಪಂದ್ಯದಲ್ಲಿ ಮಾತ್ರ. 4ನೇ ಪಂದ್ಯದಲ್ಲಿ ವಿಫಲವಾಗಿದ್ದ ಕಾರ್ತಿಕ್, ಕೊನೆ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿ ಮಿಂಚಿದ್ರು. ನಾಯಕ ವಿರಾಟ್ ಕೊಹ್ಲಿಗೆ ಸಾಥ್ ನೀಡಿ ಅವರು ಶತಕ ಬಾರಿಸಲು ನೆರವಾದ್ರು. ಸಿಕ್ಕ ಅವಕಾಶವನ್ನ ಸದ್ಭಳಕೆ ಮಾಡಿಕೊಂಡು, ಆಯ್ಕೆಗಾರರ ಗಮನ ಸೆಳೆದ್ರು.
ಚೊಚ್ಚಲ ಸರಣಿಯಲ್ಲೇ ಕುಲ್'ದೀಪ್ ಮ್ಯಾಜಿಕ್: ಕುಲ್ದೀಪ್ 4 ಪಂದ್ಯದಿಂದ 8 ವಿಕೆಟ್
ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಗಾಯಾಳುವಾದರೆ ಅಥವಾ ವಿಶ್ರಾಂತಿ ಪಡೆದರೆ ಅವರಿಗೆ ಸೂಕ್ತ ರಿಪ್ಲೇಸ್ ಯಾರು ಅನ್ನೋ ಪ್ರಶ್ನೆ ಎದ್ದಿತ್ತು. ಆದ್ರೆ ವೆಸ್ಟ್ ಇಂಡೀಸ್ನಲ್ಲಿ ಆ ಪ್ರಶ್ನೆಗೆ ಉತ್ತರ ಸಿಕ್ಕಿತು. ಕುಲ್ದೀಪ್ ಯಾದವ್ ನಾನೇ ಅವರಿಬ್ಬರ ಉತ್ತರಾಧಿಕಾರಿ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಚೊಚ್ಚಲ ಸರಣಿಯಲ್ಲೇ ತಮ್ಮ ಸ್ಪಿನ್ ಮ್ಯಾಜಿಕ್ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇಡೀ ಸರಣಿಯಲ್ಲಿ ವಿಂಡೀಸ್ ಬ್ಯಾಟ್ಸ್ಮನ್ಗಳನ್ನ ಕಾಡಿ, 4 ಮ್ಯಾಚ್'ನಿಂದ 8 ವಿಕೆಟ್ ಪಡೆದು ಮಿಂಚಿದರು.
2 ವರ್ಷದ ನಂತರ ಶಮಿ ಸ್ವಿಂಗ್
2015ರ ಒಂಡೇ ವರ್ಲ್ಡ್ಕಪ್ ಆಡಿದ್ದೇ ಕೊನೆ. ಅಲ್ಲಿಂದ ವೆಸ್ಟ್ ಇಂಡೀಸ್ ಸರಣಿಯವರೆಗೂ ಮೊಹಮ್ಮದ್ ಶಮಿ ಒಂದೇ ಒಂದು ಏಕದಿನ ಪಂದ್ಯವಾಡಿರಲಿಲ್ಲ. ಬರೀ ಟೆಸ್ಟ್-ಟಿ20 ಮಾತ್ರ ಆಡಿದ್ದರು. ಚಾಂಪಿಯನ್ಸ್ ಟ್ರೋಫಿಗೆ ಸೆಲೆಕ್ಟ್ ಆಗಿದ್ದರೂ ವಾಟರ್ ಬಾಯ್ ಆಗಿದ್ದರು. 2 ವರ್ಷದ ನಂತರ ವಿಂಡೀಸ್ ವಿರುದ್ಧ 4ನೇ ಪಂದ್ಯದಲ್ಲಿ ಆಡೋ ಚಾನ್ಸ್ ಸಿಕ್ತು. ಆದ್ರೆ ವಿಕೆಟ್ ಪಡೆಯಲು ವಿಫಲರಾದ್ರು. 5ನೇ ಪಂದ್ಯದಲ್ಲಿ 4 ವಿಕೆಟ್ ಪಡೆಯೋ ಮೂಲ್ಕ ವಿಂಡೀಸ್ ಮಹಾಪತನಕ್ಕೆ ಕಾರಣರಾದ್ರು. ತಮ್ಮ ಟೀಂ ಇಂಡಿಯಾಗೆ ಆಯ್ಕೆಯಾಗುವ ರೇಸ್ಗೆ ಮರಳಿದ್ದಾರೆ.
ಸಂಕಷ್ಟಕ್ಕೆ ಯುವರಾಜ್ ಸಿಂಗ್
ವಿಂಡೀಸ್ ಸರಣಿಯಲ್ಲಿ ಆಲ್ಮೋಸ್ಟ್ ಎಲ್ಲರೂ ಯಶಸ್ವಿಯಾದರು. ಆದರೆ ಈ ಪ್ರವಾಸ ಮಾತ್ರ ಪಂಜಾಬ್ ಪುತ್ತರ್ಗೆ ಸಂಕಷ್ಟಕ್ಕೆ ಸಿಲುಕಿಸಿತು. ಯುವರಾಜ್ ಸಿಂಗ್ ಆಡಿದ ಮೂರು ಮ್ಯಾಚ್'ನಲ್ಲೂ ವಿಫಲರಾಗಿ ಕೇವಲ 57 ರನ್ ಹೊಡೆದು ನಿರಾಸೆ ಅನುಭವಿಸಿದರು. ಹೀಗಾಗಿಯೇ ಕೊನೆ ಎರಡು ಪಂದ್ಯಗಳಿಂದ ಅವರಿಗೆ ಕೊಕ್ ಕೊಡಲಾಯ್ತು. ಸದ್ಯ ಯುವಿ ಕೆರಿಯರ್ ಕವಲು ದಾರಿ ಹಿಡಿದಿದೆ.
ರವೀಂದ್ರ ಜಡೇಜಾ ಸಹ ವಿಫಲರಾಗಿರಬಹುದು. ಆದ್ರೆ ಅವರು ಫಾರ್ಮ್ಗೆ ಮರಳಲಿದ್ದಾರೆ. ಇತರೆ ಆಟಗಾರರು ಅದ್ಭುತ ಪ್ರದರ್ಶನ ನೀಡದಿದ್ದರೂ ಟೀಂ ಇಂಡಿಯಾ ಗೆಲುವಿಗೆ ಕಾಣಿಕೆ ನೀಡಿದ್ದಾರೆ. ಆದರೆ ವಿಂಡೀಸ್ ಪ್ರವಾಸದಿಂದ ವಾಪಾಸ್ ಬಂದ್ಮೇಲೆ ಯುವರಾಜ್ ಸಿಂಗ್ ಕೆರಿಯರ್ ಏನಾಗುತ್ತದೋ ಗೊತ್ತಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.