
ಸೇಂಟ್ ಮೊರಿಟ್ಜ್(ಸ್ವಿಟ್ಜರ್‌ಲೆಂಡ್): ಟಿ20ಯಿಂದಾಗಿ ಕ್ರಿಕೆಟ್ ಜಗತ್ತಿನ ಮೂಲೆ ಮೂಲೆಗೆ ತಲುಪುತ್ತಿದೆ. ಇಲ್ಲಿನ ಹೆಪ್ಪುಗಟ್ಟಿದ ಕೆರೆಯ ಮೇಲೆ ಕ್ರಿಕೆಟ್ ಆಡುವ ದಿಗ್ಗಜ ಆಟಗಾರರ ಸಾಹಸ ಕ್ರಿಕೆಟ್ ಅಭಿಮಾನಿ ಗಳ ಮನ ಸೆಳೆದಿದೆ.
ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ನೇತೃತ್ವದ ಡೈಮಂಡ್ಸ್ ತಂಡದ ವಿರುದ್ಧ ಶಾಹಿದ್ ಅಫ್ರಿದಿಯ ರಾಯಲ್ಸ್ ತಂಡ 6 ವಿಕೆಟ್‌ಗಳ ಗೆಲುವು ಸಾಧಿಸಿ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು.
ಚಳಿಯಲ್ಲಿ ನಡುಗಿದ ತಾರೆಯರು: ಸ್ವಿಸ್‌ನ ಮನ ಮೋಹಕ ಹಿಮಪರ್ವತದ ಮಧ್ಯೆ ಇರುವ ಸೇಂಟ್ ಮೊರಿಟ್ಜ್ ಕೆರೆ, ಕ್ರಿಕೆಟಿಗರಿಗೆ ಹೊಸ ಅನುಭವ ನೀಡಿತು. ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಂಡ ಕ್ರಿಕೆಟಿಗರು ಚಳಿಯಲ್ಲಿ ನಡುಗಿದರು. ಪಂದ್ಯದ ಆರಂಭದಲ್ಲಿ ಕಷ್ಟವಾದರೂ, ಮೈಚಳಿ ಬಿಟ್ಟು ತೋರಿದ ಪ್ರದರ್ಶನ ನೆರೆದಿದ್ದ ಸುಮಾರು 500 ಪ್ರೇಕ್ಷಕರನ್ನು ರಂಜಿಸಿತು.
ವೀರೂ ಮೊದಲ ಬಾಲ್ ಬೌಂಡರಿ: ಕ್ರಿಕೆಟ್‌ನಲ್ಲಿ ಕೆಲವೊಂದು ಬದಲಾಗುವುದಿಲ್ಲ. ಸೆಹ್ವಾಗ್ ನಿವೃತ್ತಿ ಪಡೆದಿರಬಹುದು, ಆದರೆ ಅವರ ಬ್ಯಾಟಿಂಗ್ ಶೈಲಿ ಬದಲಾಗಿಲ್ಲ. ಮೊದಲು ಬ್ಯಾಟಿಂಗ್‌ಗಿಳಿದ ಡೈಮಂಡ್ಸ್ ಪರ ಇನ್ನಿಂಗ್ಸ್ ಆರಂಭಿಸಿದ ಸೆಹ್ವಾಗ್, ತಮ್ಮ ಹಳೆ ವೈರಿ ಪಾಕಿಸ್ತಾನದ ಅಖ್ತರ್ ಎಸೆದ ಪಂದ್ಯದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು.
ಸೆಹ್ವಾಗ್ ಕೇವಲ 31 ಎಸೆತಗಳಲ್ಲಿ 62 ರನ್ ಚಚ್ಚಿದರು. ಡೈಮಂಡ್ಸ್ ತಂಡ 9 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಈ ಗುರಿಯನ್ನು ರಾಯಲ್ಸ್ 15.2 ಓವರ್‌ಗಳಲ್ಲೇ ಬೆನ್ನಟ್ಟಿತು. ಶುಕ್ರವಾರ 2ನೇ ಟಿ20 ಪಂದ್ಯ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.