ಕನ್ನಡಿಗ ಕರುಣ್ ನಾಯರ್’ಗೆ ಒಲಿದ ನಾಯಕ ಪಟ್ಟ

By Web DeskFirst Published 22, Sep 2018, 10:00 AM IST
Highlights

ಬಿಸಿಸಿಐ ಆಯ್ಕೆ ಸಮಿತಿ ಶುಕ್ರವಾರ 13 ಸದಸ್ಯರ ತಂಡವನ್ನು ಪ್ರಕಟಿಸಿತು. ವೆಸ್ಟ್‌’ಇಂಡೀಸ್‌-ಭಾರತ ನಡುವಿನ 2 ಟೆಸ್ಟ್‌ ಪಂದ್ಯಗಳ ಸರಣಿ ಅಕ್ಟೋಬರ್‌ 4ರಿಂದ ಆರಂಭಗೊಳ್ಳಲಿದೆ.

ನವದೆಹಲಿ[ಸೆ.22]: ಭಾರತ ಪ್ರವಾಸ ಕೈಗೊಳ್ಳಲಿರುವ ವೆಸ್ಟ್‌ಇಂಡೀಸ್‌ ತಂಡ, ಸೆ.29ರಿಂದ ಬರೋಡಾದಲ್ಲಿ 2 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದ್ದು ಬಿಸಿಸಿಐ ಅಧ್ಯಕ್ಷರ ಇಲೆವೆನ್‌ ತಂಡವನ್ನು ಕರ್ನಾಟಕದ ಕರುಣ್‌ ನಾಯರ್‌ ಮುನ್ನಡೆಸಲಿದ್ದಾರೆ. 

ಬಿಸಿಸಿಐ ಆಯ್ಕೆ ಸಮಿತಿ ಶುಕ್ರವಾರ 13 ಸದಸ್ಯರ ತಂಡವನ್ನು ಪ್ರಕಟಿಸಿತು. ವೆಸ್ಟ್‌’ಇಂಡೀಸ್‌-ಭಾರತ ನಡುವಿನ 2 ಟೆಸ್ಟ್‌ ಪಂದ್ಯಗಳ ಸರಣಿ ಅಕ್ಟೋಬರ್‌ 4ರಿಂದ ಆರಂಭಗೊಳ್ಳಲಿದೆ. ತಂಡದಲ್ಲಿ ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌ಗೆ ಸ್ಥಾನ ನೀಡಲಾಗಿದೆ.

ತಂಡ: ಮಯಾಂಕ್‌ ಅಗರ್‌ವಾಲ್‌, ಪೃಥ್ವಿ ಶಾ, ಹನುಮ ವಿಹಾರಿ, ಕರುಣ್‌ ನಾಯರ್‌ (ನಾಯಕ), ಶ್ರೇಯಸ್‌ ಅಯ್ಯರ್‌, ಅಂಕಿತ್‌ ಬಾವ್ನೆ, ಇಶಾನ್‌ ಕಿಶನ್‌, ಜಲಜ್‌ ಸಕ್ಸೇನಾ, ಸೌರಭ್‌ ಕುಮಾರ್‌, ಬಸಿಲ್‌ ಥಂಪಿ, ಆವೇಶ್‌ ಖಾನ್‌, ಕೆ.ವಿಗ್ನೇಶ್‌, ಇಶಾನ್‌ ಪೊರೆಲ್‌.

Last Updated 22, Sep 2018, 10:00 AM IST