ಆಂಗ್ಲರ ಶುಭಾರಂಭ: ಮಾಲಿಂಗ ಶ್ರಮ ನೀರಲ್ಲಿ ಹೋಮ..!

By Web DeskFirst Published Oct 13, 2018, 7:56 PM IST
Highlights

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವು ನಾಯಕ ಇಯಾನ್ ಮಾರ್ಗನ್[92] ಶತಕ ವಂಚಿತ ಬ್ಯಾಟಿಂಗ್ ಹಾಗೂ ಜೋ ರೂಟ್[71] ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್’ಗಳಲ್ಲಿ 278 ರನ್ ಕಲೆಹಾಕಿತ್ತು.

ದಂಬುಲಾ[ಅ.13]: ಲಸಿತ್ ಮಾಲಿಂಗ ಅತ್ಯದ್ಭುತ ಪ್ರದರ್ಶನದ ಹೊರತಾಗಿಯೂ ಇಂಗ್ಲೆಂಡ್ ತಂಡವು ಡಕ್ವರ್ತ್ ಲೂಯಿಸ್ ನಿಯಮದಂತೆ 31 ರನ್’ಗಳ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವು ನಾಯಕ ಇಯಾನ್ ಮಾರ್ಗನ್[92] ಶತಕ ವಂಚಿತ ಬ್ಯಾಟಿಂಗ್ ಹಾಗೂ ಜೋ ರೂಟ್[71] ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್’ಗಳಲ್ಲಿ 278 ರನ್ ಕಲೆಹಾಕಿತ್ತು. ವರ್ಷದ ಬಳಿಕ ತಂಡ ಕೂಡಿಕೊಂಡಿರುವ ಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ 44 ರನ್ ನೀಡಿ ಆಂಗ್ಲರ ಪ್ರಮುಖ 5 ವಿಕೆಟ್ ಕಬಳಿಸುವಲ್ಲಿ ಸಫಲರಾಗಿದ್ದರು. 

ಇದನ್ನು ಓದಿ: ODI ಕ್ರಿಕೆಟ್’ನಲ್ಲಿ ಅತಿ ವೇಗವಾಗಿ 2000 ರನ್ ಪೂರೈಸಿದ ಟಾಪ್ 10 ಬ್ಯಾಟ್ಸ್’ಮನ್’ಗಳಿವರು

ಇಂಗ್ಲೆಂಡ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ಮೊದಲ ಓವರ್’ನಲ್ಲಿ ಉಪುಲ್ ತರಂಗಾ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಡಿಕ್’ವೆಲ್ಲಾ ಹಾಗೂ ಚಾಂಡಿಮಲ್ ಕೂಡಾ ಎರಡಂಕಿ ಮೊತ್ತ ಮುಟ್ಟಲು ಸಫಲವಾಗಲಿಲ್ಲ. ಲಂಕಾದ ಮೊತ್ತ 31 ರನ್’ಗಳಾಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ತಿಸಾರ ಪೆರೇರಾ[44*] ಹಾಗೂ ಧನಂಜಯ ಡಿ ಸಿಲ್ವಾ[36*] ಜೋಡಿ 6ನೇ ವಿಕೆಟ್’ಗೆ ಮುರಿಯದ 66 ರನ್’ಗಳ ಜತೆಯಾಟವಾಡಿತು. ಈ ವೇಳೆ ಎಡಬಿಡದೇ ಸುರಿದ ಮಳೆಯಿಂದಾಗಿ ಪಂದ್ಯವನ್ನು ಆಟವನ್ನು ನಿಲ್ಲಿಸಲಾಯಿತು. ಆ ಬಳಿಕ ಡಕ್ವರ್ತ್ ಲೂಯಿಸ್ ನಿಯಮದಂತೆ ಇಂಗ್ಲೆಂಡ್ ತಂಡವನ್ನು ವಿಜಯಶಾಲಿ ಎಂದು ಘೋಷಿಸಲಾಯಿತು. 

ಬುಧವಾರ ನಡೆದ ಮೊದಲ ಪಂದ್ಯವೂ ಮಳೆಯಿಂದ ರದ್ದಾಗಿತ್ತು. ಇದೀಗ ಮೂರನೇ ಪಂದ್ಯ ಬುಧವಾರ[ಅ. 17] ನಡೆಯಲಿದೆ. 
 

click me!