ಅಡಿಲೇಡ್ ಟೆಸ್ಟ್: ಆಸಿಸ್ ಮೇಲೆ ಟೀಂ ಇಂಡಿಯಾ ಬಿಗಿಹಿಡಿತ

By Web DeskFirst Published Dec 8, 2018, 3:30 PM IST
Highlights

ದಿನದ ಆರಂಭದಲ್ಲಿ ಆಸಿಸ್’ನ ಮೂರು ವಿಕೆಟ್’ಗಳನ್ನು ಬಹುಬೇಗ ಕಬಳಿಸಿದ ಭಾರತ ಆ ಬಳಿಕ ದ್ವಿತಿಯ ಇನ್ನಿಂಗ್ಸ್’ನ್ನು ಎಚ್ಚರಿಕೆಯಿಂದ ಪ್ರಾರಂಭಿಸಿತು. ವಿಜಯ್-ರಾಹುಲ್ ಜೋಡಿ ಮೊದಲ ವಿಕೆಟ್’ಗೆ 63 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿತು.

ಅಡಿಲೇಡ್[ಡಿ.08]: ಟೀಂ ಇಂಡಿಯಾ ಬ್ಯಾಟ್ಸ್’ಮನ್’ಗಳ ಎಚ್ಚರಿಕೆಯ ಪ್ರದರ್ಶನದ ನೆರವಿನಿಂದ ಆಸಿಸ್ ಎದುರು ವಿರಾಟ್ ಪಡೆ ಬಿಗಿ ಹಿಡಿತ ಸಾಧಿಸಿದ್ದು, ಮೂರನೇ ದಿನದ ಮುಕ್ತಾಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದ್ದು, ಒಟ್ಟಾರೆ 166 ರನ್’ಗಳ ಮುನ್ನಡೆ ಸಾಧಿಸಿದೆ.

ದಿನದ ಆರಂಭದಲ್ಲಿ ಆಸಿಸ್’ನ ಮೂರು ವಿಕೆಟ್’ಗಳನ್ನು ಬಹುಬೇಗ ಕಬಳಿಸಿದ ಭಾರತ ಆ ಬಳಿಕ ದ್ವಿತಿಯ ಇನ್ನಿಂಗ್ಸ್’ನ್ನು ಎಚ್ಚರಿಕೆಯಿಂದ ಪ್ರಾರಂಭಿಸಿತು. ವಿಜಯ್-ರಾಹುಲ್ ಜೋಡಿ ಮೊದಲ ವಿಕೆಟ್’ಗೆ 63 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿತು. ವಿಜಯ್ 18 ರನ್ ಬಾರಿಸಿದರೆ, ರಾಹುಲ್ 44 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ವಿಕೆಟ್’ಗೆ ಕೊಹ್ಲಿ-ಪೂಜಾರ ಜೋಡಿ 71 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿತು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 34 ರನ್ ಬಾರಿಸಿ ನೇಥನ್ ಲಯನ್’ಗೆ ವಿಕೆಟ್ ಒಪ್ಪಿಸಿದರು. ಒಂದು ಕಡೆ ಮೂರು ವಿಕೆಟ್ ಉರುಳಿದರು ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 40 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರಹಾನೆ 1 ರನ್ ಬಾರಿಸಿ ಅಜೇಯರಾಗುಳಿದಿದ್ದಾರೆ.

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್, ಜೋಸ್ ಹ್ಯಾಜಲ್’ವುಡ್ ಹಾಗೂ ನೇಥನ್ ಲಯನ್ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ. ಬಹುತೇಕ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಟೀಂ ಇಂಡಿಯಾ ನಾಲ್ಕನೇ ದಿನವೂ ಇದೇ ತೋರಿದರೆ ಆಸಿಸ್ ನೆಲದಲ್ಲಿ ಜಯದೊಂದಿಗೆ ಟೆಸ್ಟ್ ಸರಣಿ ಶುಭಾರಂಭ ಮಾಡಲಿದೆ ವಿರಾಟ್ ಬಳಗ.

ಸಂಕ್ಷಿಪ್ತ ಸ್ಕೋರ್:
ಭಾರತ: 250& 151/3
ಆಸ್ಟ್ರೇಲಿಯಾ: 235
[* ಮೂರನೇ ದಿನ ಮುಕ್ತಾಯಕ್ಕೆ]  

click me!