ಭಾರತ ವಿರುದ್ಧ ಸರಣಿ ಗೆಲುವಿಗೆ ಸ್ಮಿತ್,ವಾರ್ನರ್ ನಿಷೇಧ ವಾಪಾಸ್?

By Web DeskFirst Published Nov 7, 2018, 7:16 PM IST
Highlights

ಬಾಲ್ ಟ್ಯಾಂಪರಿಂಗ್ ಆರೋಪದಡಿ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ನಿಷೇಧ ವಾಪಾಸ್ ಪಡೆಯಲು ತಯಾರಿಗಳು ನಡೆಯುತ್ತಿದೆ. ಭಾರತದ ವಿರುದ್ಧದ ಸರಣಿಗೆ ಕೆಲ ದಿನಗಳಿರುವಾಗಲೇ ಕ್ರಿಕೆಟ್ ಆಸ್ಟ್ರೇಲಿಯಾದಲ್ಲಿ ಚಟುವಟಿಕೆ ಗರಿಗೆದರಿದೆ.
 

ಸಿಡ್ನಿ(ನ.07): ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ಈಗಾಗಲೇ ತಯಾರಿ ಆರಂಭಿಸಿದೆ. ಆದರೆ ಬಾಲ್ ಟ್ಯಾಂಪರಿಂಗ್‌ನಿಂದ ನಿಷೇಧಕ್ಕೊಳಗಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಹೀಗಾಗಿ ಭಾರತ ವಿರುದ್ದದ ಸರಣಿ ವೇಳೆ ಇವರ ನಿಷೇಧ ವಾಪಾಸ್ ಪಡೆಯಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ.

ಚೆಂಡು ವಿರೂಪಗೊಳಿಸಿದ ಆರೋಪದಡಿ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ 12 ತಿಂಗಳ ನಿಷೇಧ ಹೇರಿದೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟಿಗರ ಆಸೋಸಿಯೇಶನ್ ನಿಷೇಧ ವಾಪಸ್ ಪಡೆಯಲು ಕ್ರಿಕೆಟ್ ಆಸ್ಟ್ರೇಲಿಯಾದ ಮೇಲೆ ಒತ್ತಡ ಹೇರಿದೆ.

ಭಾರತ ವಿರುದ್ಧದ ಸರಣಿಯಲ್ಲಿ ಆಸಿಸ್‌ ಗೆಲುವು ಸಾಧಿಸಲು ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಸೇವೆ ಅಗತ್ಯ. ಹೀಗಾಗಿ ಇತರ ನೆಪವೊಡ್ಡಿ ನಿಷೇಧ ವಾಪಸ್ ಪಡೆಯಲು ಕ್ರಿಕೆಟಿಗರ ಆಸೋಸಿಯೇಶನ್ ಒತ್ತಡ  ಹೇರುತ್ತಿದೆ. ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಶೀಘ್ರದಲ್ಲೆ ಸ್ಮಿತ್ ಹಾಗೂ ವಾರ್ನರ್ ನಿಷೇಧ ವಾಪಾಸ್ ಪಡೆಯುವ ಸಾಧ್ಯತೆ ಹೆಚ್ಚಿದೆ.

ನವೆಂಬರ್ 21 ರಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭಗೊಳ್ಳಲಿದೆ. 3 ಟಿ20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯ ನಡೆಯಲಿದೆ. ಸ್ಮಿತ್ ಹಾಗೂ ವಾರ್ನರ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ಹಾಗೂ ಇತರ ತಂಡದ ವಿರುದ್ದ ಹಿನ್ನಡೆ ಅನುಭವಿಸಿದೆ. ಹೀಗಾಗಿ ಭಾರತದ ವಿರುದ್ಧ ಗೆಲುವಿನ ನಗೆ ಬೀರಲು ಆಸಿಸ್ ಮುಂದಾಗಿದೆ.

click me!