ಆಸ್ಟ್ರೇಲಿಯಾ 235 ರನ್’ಗಳಿಗೆ ಆಲೌಟ್: ನಿರ್ಮಾಣವಾದವು ಅಪರೂಪದ ದಾಖಲೆಗಳು

By Web DeskFirst Published Dec 8, 2018, 10:19 AM IST
Highlights

ಎರಡನೇ ದಿನದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 191 ರನ್ ಬಾರಿಸಿದ್ದ ಆಸ್ಟ್ರೇಲಿಯಾ ತನ್ನ ಖಾತೆಗೆ ಇಂದು 13 ರನ್ ಸೇರಿಸುವಷ್ಟರಲ್ಲೇ ಮಿಚೆಲ್ ಸ್ಟಾರ್ಕ್ ವಿಕೆಟ್ ಕಳೆದುಕೊಂಡಿತು. 

ಅಡಿಲೇಡ್[ಡಿ.08]: ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯವು ರೋಚಕ ಘಟ್ಟದತ್ತ ಸಾಗುತ್ತಿದ್ದು, ಆಸಿಸ್ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 235 ರನ್’ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್’ನಲ್ಲಿ 15 ರನ್’ಗಳ ಮುನ್ನಡೆ ಸಾಧಿಸಿದೆ. ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ಎಚ್ಚರಿಕೆಯ ಆಟಕ್ಕೆ ಮುಂದಾಗಿದೆ.

ಎರಡನೇ ದಿನದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 191 ರನ್ ಬಾರಿಸಿದ್ದ ಆಸ್ಟ್ರೇಲಿಯಾ ತನ್ನ ಖಾತೆಗೆ ಇಂದು 13 ರನ್ ಸೇರಿಸುವಷ್ಟರಲ್ಲೇ ಮಿಚೆಲ್ ಸ್ಟಾರ್ಕ್ ವಿಕೆಟ್ ಕಳೆದುಕೊಂಡಿತು. 235 ರನ್’ಗಳಿದ್ದಾಗ ಮೊಹಮ್ಮದ್ ಶಮಿ ಬೌಲಿಂಗ್’ನಲ್ಲಿ ಆಸಿಸ್’ನ ಹೆಡ್ ಹಾಗೂ ಹ್ಯಾಜಲ್’ವುಡ್ ಸತತ ಎರಡು ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು ಭಾರತಕ್ಕೆ ಅಲ್ಪ ಮುನ್ನಡೆ ಬಿಟ್ಟುಕೊಟ್ಟಿತು.

ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ 13 ಓವರ್ ಮುಕ್ತಾಯಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 36 ರನ್ ಬಾರಿಸಿದ್ದು, ಒಟ್ಟಾರೆ 51 ರನ್’ಗಳ ಮುನ್ನಡೆ ಸಾಧಿಸಿದೆ.

ದಾಖಲೆಗಳಿಗೆ ಸಾಕ್ಷಿಯಾದ ದಿನ:
ಆಸಿಸ್ ನೆಲದಲ್ಲಿ ಇನ್ನಿಂಗ್ಸ್’ವೊಂದರಲ್ಲಿ ಅತಿಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್ ಎನ್ನುವ ಶ್ರೇಯ ರಿಷಭ್ ಪಂತ್ ಪಾಲಾಗಿದೆ. ಪಂತ್ ಅಡಿಲೇಡ್ ಟೆಸ್ಟ್’ನಲ್ಲಿ 6 ಕ್ಯಾಚ್ ಹಿಡಿದಿದ್ದರೆ, ಧೋನಿ 2008ರಲ್ಲಿ ಪರ್ತ್ ಮೈದಾನದಲ್ಲಿ 5 ಕ್ಯಾಚ್ ಹಿಡಿದಿದ್ದರು.

ಭಾರತ ಇದುವರೆಗೆ 14 ಸಲ ಮೊದಲ ಬಾರಿಗೆ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಇದರಲ್ಲಿ ತಲಾ 3 ಬಾರಿ ಸೋಲು-ಗೆಲುವು ಕಂಡಿದ್ದು, 7 ಬಾರಿ ಡ್ರಾ ಸಾಧಿಸಿದೆ.

ತಂಡವೊಂದು ಅಡಿಲೇಡ್ ಮೈದಾನದಲ್ಲಿ ಇನ್ನಿಂಗ್ಸ್ ಲೀಡ್ ಪಡೆದು ಸೋತಿದ್ದು ಕೇವಲ ಮೂರು ಬಾರಿ ಮಾತ್ರ. 
Eng(388) Vs Aus(321), 1902 - ಇಂಗ್ಲೆಂಡ್’ಗೆ 4 ವಿಕೆಟ್’ಗಳ ಸೋಲು
Aus(556) Vs Ind(523), 2003 -ಆಸ್ಟ್ರೇಲಿಯಾಗೆ 4 ವಿಕೆಟ್’ಗಳ ಸೋಲು
Eng(551/6) Vs Aus(513), 2006 - ಇಂಗ್ಲೆಂಡ್’ಗೆ 6 ವಿಕೆಟ್’ಗಳ ಸೋಲು
 

click me!