ಕೊರೋನಾ ಹೋರಾಟಕ್ಕೆ ಭಾರತೀಯ ಒಲಿಂಪಿಕ್‌ ಸಂಸ್ಥೆ 71 ಲಕ್ಷ ರುಪಾಯಿ ದೇಣಿಗೆ

By Suvarna News  |  First Published Apr 4, 2020, 1:25 PM IST

ಕೊರೋನಾ ವೈರಸ್‌ ವಿರುದ್ಧ ಸೆಣಸುತ್ತಿರುವ ದೇಶಕ್ಕೆ ಭಾರತೀಯ ಒಲಿಂಪಿಕ್‌ ಸಂಸ್ಥೆ ಸಂಸ್ಥೆ 71 ಲಕ್ಷ ರುಪಾಯಿಗಳನ್ನು ಪಿಎಂ ಕೇರ್ಸ್‌ಗೆ ನೀಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.


ನವದೆಹಲಿ(ಏ.04): ಭಾರತೀಯ ಒಲಿಂಪಿಕ್‌ ಸಂಸ್ಥೆ (ಐಒಎ) ತನ್ನ ರಾಜ್ಯ ಸಂಸ್ಥೆಗಳು ಹಾಗೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ಮೂಲಕ 71 ಲಕ್ಷ ರುಪಾಯಿ ಸಂಗ್ರಹಿಸಿದ್ದು ಅದನ್ನು ಕೊರೋನಾ ವಿರುದ್ಧ ಹೋರಾಟಕ್ಕಾಗಿ ಪಿಎಂ ಕೇರ್ಸ್‌ಗೆ ದೇಣಿಗೆ ನೀಡಲು ನಿರ್ಧರಿಸಿದೆ. 

#PMCARES ಫಂಡ್‌ಗೆ 80 ಲಕ್ಷ ರುಪಾಯಿ ದೇಣಿಗೆ ನೀಡಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ

Tap to resize

Latest Videos

‘ಈ ಕಠಿಣ ಸಮಯದಲ್ಲಿ ಕೈಯಲ್ಲಾದ ಸಹಾಯ ಮಾಡಲು ಎಲ್ಲಾ ಕ್ರೀಡಾ ಸಂಸ್ಥೆಗಳು ಮುಂದಾಗಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ದೇಶದ ಜತೆಗೆ ನಿಲ್ಲಬೇಕು' ಎಂದು ಐಒಎ ಪ್ರಧಾನ ಕಾರ‍್ಯದರ್ಶಿ ರಾಜೀವ್‌ ಮೆಹ್ತಾ ಹೇಳಿದ್ದಾರೆ.

ಕೊರೋನಾ ಸಂಕಷ್ಟಕ್ಕೆ ವಿರುಷ್ಕಾ ಜೋಡಿ ಕೊಟ್ಟ ಹಣವೆಷ್ಟು?

ಕೊರೋನಾ ವೈರಸ್‌ನಿಂದಾಗಿ ಜಗತ್ತಿನಾದ್ಯಂತ 59 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇನ್ನು ಭಾರತದಲ್ಲೂ 2000ಕ್ಕೂ ಅಧಿಕ ಮಂದಿಗೆ ಕೋವಿಡ್ 19 ಸೋಂಕು ತಗುಲಿದೆ. ಈಗಾಗಲೇ ಭಾರತದ ಹಲವು ಕ್ರೀಡಾಪಟುಗಳು ಕೊರೋನಾ ವಿರುದ್ಧ ಸೆಣಸಲು ಪ್ರಧಾನಿ ಕರೆಗೆ ಕೈ ಜೋಡಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ, ಹಿಮಾ ದಾಸ್ ಸೇರಿದಂತೆ ಹಲವರು ದೇಣಿಗೆ ರೂಪದಲ್ಲಿ ಪ್ರಧಾನಿ ಕೇರ್ಸ್‌ಗೆ ಹಣ ನೀಡಿದ್ದಾರೆ.   

click me!