ಭಾರತವನ್ನು ಸೋಲಿಸಿ ಸರಣಿ ಸಮಬಲ ಮಾಡಿಕೊಂಡ ಕೀವಿಸ್

Published : Nov 04, 2017, 10:58 PM ISTUpdated : Apr 11, 2018, 01:09 PM IST
ಭಾರತವನ್ನು ಸೋಲಿಸಿ ಸರಣಿ ಸಮಬಲ ಮಾಡಿಕೊಂಡ ಕೀವಿಸ್

ಸಾರಾಂಶ

ನ್ಯೂಜಿಲೆಂಡ್ ಪರ ಉತ್ತಮ ಬೌಲಿಂಗ್ ಮಾಡಿದ ಬೋಲ್ಟ್ 4 ಓವರ್'ಗಳಲ್ಲಿ 34/4 ಶ್ರೇಷ್ಠ ಬೌಲರ್ ಎನಿಸಿದರು. ಶತಕ ಗಳಿಸಿದ  ಮನ್ರೋ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ರಾಜ್'ಕೋಟ್(ನ.04):  ಮೊದಲ ಟಿ20 ಸೋಲಿಗೆ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್ ತಂಡ ಭಾರತವನ್ನು 40 ರನ್'ಗಳಿಂದ ಮಣಿಸಿ 3 ಪಂದ್ಯಗಳ ಸರಣಿಯನ್ನು ಸಮಬಲ ಮಾಡಿಕೊಂಡ್ಡಿತು.

ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದವರು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು.

ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕಿವೀಸ್ ಪಡೆ ಮೊದಲ ವಿಕೆಟ್'ಗೆ ಶತಕದ ಜತೆಯಾಟವಾಡಿತು. ಮಾರ್ಟಿನ್ ಗುಪ್ಟಿಲ್ 45 ರನ್ ಬಾರಿಸಿ ಚಾಹಲ್'ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ನ್ಯೂಜಿಲೆಂಡ್ 11.1 ಓವರ್'ಗಳಲ್ಲಿ 105 ರನ್ ಕಲೆ ಹಾಕಿತ್ತು. ಮತ್ತೋರ್ವ ಆರಂಭಿಕ ಬ್ಯಾಟ್ಸ್'ಮನ್ ಕಾಲಿನ್ ಮನ್ರೋ ಅಕ್ಷರಶಃ ಆರ್ಭಟಿಸಿದರು. ಕೇವಲ 58 ಎಸೆತಗಳನ್ನು ಎದುರಿಸಿದ ಮನ್ರೋ 109 ರನ್ ಬಾರಿಸಿ ಅಜೇಯರಾಗುಳಿದರು. ಅವರ ಸ್ಫೋಟಕ ಇನಿಂಗ್ಸ್'ನಲ್ಲಿ ತಲಾ 7 ಬೌಂಡರಿ ಹಾಗೂ 7 ಸಿಕ್ಸರ್ ಒಳಗೊಂಡಿದ್ದವು. ಅಂದಹಾಗೆ ಕಾಲಿನ್ ಮನ್ರೋಗಿದು ಟಿ20 ಕ್ರಿಕೆಟ್'ನಲ್ಲಿ ಎರಡನೇ ಶತಕವಾಗಿದೆ. ಅಂತಿಮವಾಗಿ ಕೀವಿಸ್ ತಂಡ 2 ವಿಕೇಟ್ ನಷ್ಟಕ್ಕೆ 196 ರನ್ ಕಲೆ ಹಾಕಿದರು.

ವ್ಯರ್ಥವಾದ ಕೊಹ್ಲಿ ಆಟ

197 ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ 2 ಓವರ್ ಗಳಾಗುವುದರಲ್ಲಿಯೇ  ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅವರ ವಿಕೇಟ್ ಕಳೆದುಕೊಂಡಿತು. ಅನಂತರ ಇನ್ನಿಂಗ್ಸ್ ಆರಂಭಿಸಿದ ಶ್ರೇಯಸ್ ಅಯ್ಯರ್ ಹಾಗೂ ನಾಯಕ ಕೊಹ್ಲಿ 3 ನೀ ವಿಕೇಟ್ ನಷ್ಟಕ್ಕೆ 8.4 ಓವರ್'ಗಳಲ್ಲಿ 65 ರನ್ ಕಲೆ ಹಾಕಿದರು. ಮನ್ರೋ ಬೌಲಿಂಗ್'ನಲ್ಲಿ 23 ರನ್ ಗಳಿಸಿ ಅಯ್ಯರ್ ಔಟಾದರೆ,  ನಂತರ ಆಗಮಿಸಿದ ಹಾರ್ದಿಕ್ ಪಾಂಡ್ಯ ಬಂದ ಹಾಗೆ ವಾಪಸಾದರು.  ಬ್ಯಾಟಿಂಗ್ ಇಳಿದ ಧೋನಿ(49: 37 ಎಸತ, 8 ಬೌಂಡರಿ, 1 ಸಿಕ್ಸ್'ರ್) ಭರ್ಜರಿ ಆಟವಾಡಿದರೂ ಆಗಾಗಲೇ ರನ್ ರೇಟ್ ಕುಸಿದಿತ್ತು. ಕೊಹ್ಲಿ(65:42 ಎಸತ, 8 ಬೌಂಡರಿ, 1 ಸಿಕ್ಸ್'ರ್) ಕೂಡ ಅರ್ಧ ಶತಕ ಗಳಿಸಿ ಪೆವಿಲಿಯನ್'ಗೆ ತೆರಳಿದ್ದರು. 20 ಓವರ್ ಆಟವಾಡಿದ ಭಾರತ 7 ವಿಕೇಟ್ ನಷ್ಟಕ್ಕೆ 156 ರನ್' ಅಷ್ಟೆ ಗಳಿಸಲು ಸಾಧ್ಯವಾಯಿತು.

ನ್ಯೂಜಿಲೆಂಡ್ ಪರ ಉತ್ತಮ ಬೌಲಿಂಗ್ ಮಾಡಿದ ಬೋಲ್ಟ್ 4 ಓವರ್'ಗಳಲ್ಲಿ 34/4 ಶ್ರೇಷ್ಠ ಬೌಲರ್ ಎನಿಸಿದರು. ಶತಕ ಗಳಿಸಿದ  ಮನ್ರೋ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

 

ಸ್ಕೋರ್ ವಿವರ:

ನ್ಯೂಜಿಲೆಂಡ್ 20 ಓವರ್'ಗಳಲ್ಲಿ 196/2

(ಮನ್ರೊ 109, ಗುಪ್ಟಿಲ್ 45)

ಭಾರತ 20 ಓವರ್'ಗಳಲ್ಲಿ  156/7

(ಕೊಹ್ಲಿ 65, ಧೋನಿ 49 ಬೋಲ್ಟ್ 34/4)

 

ಫಲಿತಾಂಶ: ನ್ಯೂಜಿಲೆಂಡ್'ಗೆ 40 ರನ್ ಜಯ

 ಪಂದ್ಯ ಶ್ರೇಷ್ಠ: ಕಾಲಿನ್ ಮನ್ರೋ         

    

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಆಯ್ಕೆ ಮಾಡಿದ ಆಕಾಶ್ ಚೋಪ್ರಾ; ಗಿಲ್‌ಗಿಲ್ಲ ಉಪನಾಯಕ ಪಟ್ಟ!
ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮೇಜರ್ ಚೇಂಜ್! ಇಲ್ಲಿದೆ ಹೊಸ ಅಪ್‌ಡೇಟ್ಸ್‌